Sep 29, 2021, 5:34 PM IST
ಮೈಸೂರು(ಸೆ. 29) ಸೊಸೆಯನ್ನು ಚಾಕುವಿನಿಂದ ಚುಚ್ಚಿದ ಅತ್ತೆ ಆತ್ಮಹತ್ಯೆಗೆ (suicide) ಶರಣಾಗಿದ್ದಾಳೆ. ನಿವೃತ್ತ ಶಿಕ್ಷಕಿ ಅತ್ತೆ ಸೊಸೆಯ ಮೇಲೆ ದಾಳಿ ಮಾಡಿ ನಂತರ ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕ್ಷುಲ್ಲಕ ಕಾರಣಕ್ಕೆ ಅತ್ತೆ-ಸೊಸೆ ನಡುವೆ ಜಗಳವಾಗಿದ್ದ ಪ್ರಕರಣ ಮೈಸೂರಿನಿಂದ(Mysuru) ವರದಿಯಾಗಿದೆ.
ಮೋಕ್ಷ ಸಿಗುತ್ತದೆ ಎಂದು ನಂಬಿ ದೇವಾಲಯದ ಆವರಣದಲ್ಲೇ ಆತ್ಮಹತ್ಯೆ
ಜಗಳ ತಾರಕಕ್ಕೆ ಏರಿದ ನಂತರ ಸೊಸೆಯನ್ನು ಚುಚ್ಚಿ ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಗಾಯಗೊಂಡ ಸೊಸೆಯನ್ನು ಆಸ್ಪತ್ರೆಗೆ ಮಗ ದಾಖಲಿಸಲಾಗಿದೆ. ಈ ವೇಳೆ ಆತಂಕಕ್ಕೆ ಒಳಗಾದ ಅತ್ತೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕ್ಷುಲ್ಲಕ ಕಾರಣದಲ್ಲಿ ಒಬ್ಬರ ಜೀವ ಹೋಗಿದ್ದು ಇನ್ನೊಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುವಂತಹ ಸ್ಥಿತಿ ನಿರ್ಮಾಣವಾಗಿದೆ.