Sep 2, 2020, 11:29 AM IST
ಬೆಂಗಳೂರು (ಸೆ. 02): ಅನಿಕಾ ಅಂಡ್ ಟೀಂ ಬಂಧನ ಬೆನ್ನಲ್ಲೇ ಮತ್ತೊಂದು ಡ್ರಗ್ಸ್ ಜಾಲ ಪತ್ತೆಯಾಗಿದೆ. ಮತ್ತೊಂದು ಡ್ರಗ್ಸ್ ಡೀಲ್ ಭೇದಿಸಿದ್ಧಾರೆ ಎನ್‌ಸಿಬಿ ಅಧಿಕಾರಿಗಳು. ಗೋವಾ ಮೂಲದ ಡ್ರಗ್ ಪೆಡ್ಲರ್ ಅಹ್ಮದ್ ಅರೆಸ್ಟ್ ಆಗಿದ್ದಾರೆ. ಅಹ್ಮದ್ ಜೊತೆಗೆ ಮೂರೂವರೆ ಕೆಜಿ ಮಾರಿಜುನಾ ಡ್ರಗ್ಸ್ ಸೀಜ್ ಮಾಡಲಾಗಿದೆ. ಫಾರಿನ್ ಪೋಸ್ಟ್ ಆಫೀಸ್‌ಗೆ 2 ಕೋಟಿ ಮೌಲ್ಯದ ಡ್ರಗ್ಸ್ ಬಂದಿತ್ತು. ಅದನ್ನ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಬೆಂಗಳೂರಲ್ಲಿ ಸೆಲಬ್ರಿಟಿಗಳಿಗೆ ಅಹ್ಮದ್ ಡ್ರಗ್ ಸಪ್ಲೈ ಮಾಡುತ್ತಿದ್ದ ಎನ್ನಲಾಗಿದೆ. ಮೂವರು ಸೆಲಬ್ರಿಟಿಗಳ ಹೆಸರು ಬಾಯ್ಬಿಟ್ಟಿದ್ದಾನೆ ಅಹ್ಮದ್. ಅಹ್ಮದ್ ಬಂಧನ ಬೆನ್ನಲ್ಲೇ ಮತ್ತಷ್ಟು ಕುಳಗಳು ಬಲೆಗೆ ಬೀಳೋದು ಪಕ್ಕಾ ಆಗಿದೆ.
ಚಿತ್ರೋದ್ಯಮಿ ಪ್ರಶಾಂತ್ ಸಂಬರಗಿ ಸುದ್ದಿಗೋಷ್ಠಿ; ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಂದು ಬಾಂಬ್?