ಮದನಾರಿಯರ ವಾಟ್ಸಾಪ್ ರಹಸ್ಯ; ಹೊರ ಬಂದರೆ ಇನ್ನಷ್ಟು ಮಂದಿಗೆ ಸಿಸಿಬಿ ಉರುಳು?

Sep 10, 2020, 6:10 PM IST

ಬೆಂಗಳೂರು (ಸೆ. 10): ಸ್ಯಾಂಡಲ್‌ವುಡ್ ಡ್ರಗ್ ಮಾಫಿಯಾ ಬೆನ್ನತ್ತಿರುವ ಸಿಸಿಬಿಗೆ ವಿಚಾರಣೆ ನಡೆಸಿದಷ್ಟು ಹೊಸ ಹೊಸ ವಿಚಾರಗಳು ತೆರೆದುಕೊಳ್ಳುತ್ತಿವೆ. ಈಗಾಗಲೇ ನಟಿ ಮಣಿಯರಾದ ಸಂಜನಾ, ರಾಗಿಣಿ ವಿಚಾರಣೆಯಲ್ಲಿದ್ದಾರೆ. ಇವರಿಬ್ಬರು ವಿಚಾರಣೆಯ ಸೆಂಟರ್‌ ಆಫ್ ಅಟ್ರಾಕ್ಷನ್! 

ರಕ್ತದ ಮಾದರಿ ತೆಗೆದುಕೊಳ್ಳಲು ಸಂಜನಾ ರಂಪಾಟ; ಇದರ ಹಿಂದೆ ಯಾರಿರಬಹುದು?

ರಾಗಿಣಿ ದ್ವಿವೇದಿ, ಸಂಜನಾ ಗರ್ಲಾನಿ ಪೆಡ್ಲರ್‌ಗಳ ಜೊತೆ ನಡೆಸಿದ ಚಾಟ್‌ಗಳು ಸಿಸಿಬಿಗೆ ಲಭ್ಯವಾಗಿದೆ. ಸಿಸಿಬಿ ಅವರನ್ನು ವಶಕ್ಕೆ ತೆಗೆದುಕೊಳ್ಳುತ್ತಿದ್ದಂತೆ ಭಯದಿಂದ ವಾಟ್ಸಾಪ್ ಚಾಟ್‌ಗಳನ್ನು ಅಳಿಸಿ ಹಾಕಿದ್ದರು. ಆದರೆ ಸಿಸಿಬಿ ಅಧಿಕಾರಿಗಳು ಅದನ್ನು ರಿಟ್ರೀವ್ ಮಾಡಿದ್ದಾರೆ. ಆ ಚಾಟ್‌ಗಳನ್ನು ನೋಡುತ್ತಾ ಹೋದರೆ ಹೊಸ ಹೊಸ ಕನೆಕ್ಷನ್‌ಗಳು ಸುತ್ತಿಕೊಳ್ಳುತ್ತಾ ಹೋಗುತ್ತಿವೆ. ಒಬ್ಬಬ್ಬರ ಅಸಲಿಯತ್ತು ಹೊರ ಬರುತ್ತಿವೆ. ಹಾಗಾದರೆ ಯಾರ್ಯಾರಿದ್ದಾರೆ ಚಾಟ್‌ನಲ್ಲಿ? ಯಾರಿಗೆಲ್ಲಾ ತನಿಖೆಯ ಉರುಳು ಸುತ್ತಿಕೊಳ್ಳಬಹುದು ಇಲ್ಲಿದೆ ಒಂದು ರಿಪೋರ್ಟ್..!