Health
ತುಂಬಾ ಜನ ಪ್ರತಿದಿನ ಸಕ್ಕರೆಯನ್ನ ತುಂಬಾ ವಿಧಗಳಲ್ಲಿ ಉಪಯೋಗಿಸ್ತಾರೆ. ಆದ್ರೆ ಸಕ್ಕರೆ ಆರೋಗ್ಯಕ್ಕೆ ಒಳ್ಳೆಯದಲ್ಲ.ಸಕ್ಕರೆ ಬದಲು ಬೆಲ್ಲ ತಿನ್ನಿ ಅಂತಾ ಹೇಳ್ತಾರೆ. ಎರಡೂ ಕಬ್ಬಿನಿಂದಲೇ ಮಾಡಿದ್ರೂ ಹೇಗೆ ಬೆಲ್ಲ ಆರೋಗ್ಯಕರ
ಬೆಲ್ಲದಲ್ಲಿ ಉತ್ಕರ್ಷಣ ನಿರೋಧಕಗಳು ಹೇರಳವಾಗಿವೆ. ಇವು ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ ಶೀತ, ಜ್ವರ ಬರದಂತೆ ತಡೆಯುತ್ತವೆ.
ಬೆಲ್ಲ ಜೀರ್ಣಕಾರಿ ಕಿಣ್ವಗಳ ಉತ್ಪಾದನೆಯನ್ನು ಹೆಚ್ಚಿಸಿ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಅಂದರೆ ಚಳಿಗಾಲದಲ್ಲಿ ಬೆಲ್ಲ ಸೇವಿಸುವುದರಿಂದ ಮಲಬದ್ಧತೆ ಸಮಸ್ಯೆ ಕಡಿಮೆಯಾಗುತ್ತದೆ.
ಚಳಿಗಾಲದಲ್ಲಿ ಬೆಲ್ಲ ಸೇವಿಸುವುದರಿಂದ ದೇಹವು ಬೆಚ್ಚಗಿರುತ್ತದೆ. ಹೆಚ್ಚು ಚಳಿ ಅನಿಸುವುದಿಲ್ಲ.
ಬೆಲ್ಲವನ್ನು ತಿಂದರೆ ರಕ್ತ ಮತ್ತು ಲಿವರ್‌ನಲ್ಲಿರುವ ವಿಷಕಾರಿ ಪದಾರ್ಥಗಳು ಹೊರಹೋಗುತ್ತವೆ. ಹಾಗೆಯೇ ದೇಹ ಶುದ್ಧಿಯಾಗುತ್ತದೆ.
ಬೆಲ್ಲದಲ್ಲಿ ಮೆಗ್ನೀಸಿಯಮ್, ಕಬ್ಬಿಣ, ಕ್ಯಾಲ್ಸಿಯಂ, ಪೊಟ್ಯಾಸಿಯಮ್ ಮುಂತಾದ ಪ್ರಮುಖ ಜೀವಸತ್ವಗಳು ಮತ್ತು ಖನಿಜಗಳು ಹೇರಳವಾಗಿವೆ.
ಚಳಿಗಾಲದಲ್ಲಿ ಬೆಲ್ಲವನ್ನು ತಿನ್ನುವುದರಿಂದ ಗಂಟಲು ನೋವು ಕಡಿಮೆಯಾಗುತ್ತದೆ. ಹಾಗೆಯೇ ಉಸಿರಾಟದ ತೊಂದರೆಗಳಿಗೆ ಪರಿಹಾರ ದೊರೆಯುತ್ತದೆ.