ಟೀಂ ಇಂಡಿಯಾ ಆಟಗಾರನ ಬೆನ್ನಿಗೆ ಚೂರಿ ಹಾಕಿದ ಸೆಲೆಕ್ಟರ್ಸ್..!

Jan 15, 2020, 7:16 PM IST

ಮುಂಬೈ[ಜ.15]: ಪ್ರತಿ ಸರಣಿಗೆ ತಂಡವನ್ನು ಆಯ್ಕೆ ಮಾಡುವಾಗ ಟೀಂ ಇಂಡಿಯಾ ಒಂದಿಲ್ಲೊಂದು ಯಡವಟ್ಟು ಮಾಡುತ್ತಲೇ ಇರುತ್ತದೆ. ಇದೀಗ ನ್ಯೂಜಿಲೆಂಡ್ ಪ್ರವಾಸಕ್ಕೆ ಭಾರತ ತಂಡವನ್ನು ಆಯ್ಕೆ ಮಾಡಿದಾಗಲೂ ಅದು ಪುನರಾವರ್ತನೆಯಾಗಿದೆ.

ಹೌದು, ಜನವರಿ 24ರಿಂದ ಆರಂಭವಾಗಲಿರುವ ನ್ಯೂಜಿಲೆಂಡ್ ವಿರುದ್ಧದ 5 ಪಂದ್ಯಗಳ ಟಿ20 ಸರಣಿಗೆ 16 ಆಟಗಾರರನ್ನೊಳಗೊಂಡ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ಸಂಜು ಸ್ಯಾಮ್ಸನ್’ಗೆ ಗೇಟ್ ಪಾಸ್ ನೀಡಲಾಗಿದೆ.

ಬರೋಬ್ಬರಿ ನಾಲ್ಕೂವರೆ ವರ್ಷಗಳ ನಂತರ ಟೀಂ ಇಂಡಿಯಾಗೆ ಕಮ್’ಬ್ಯಾಕ್ ಮಾಡಿದ್ದ ಸಂಜು ಸ್ಯಾಮ್ಸನ್ ಅವರಿಗೆ ಅವಕಾಶ ಕೊಟ್ಟಂತೆ ಮಾಡಿ ಮತ್ತೆ ತಂಡದಿಂದ ಡ್ರಾಪ್ ಮಾಡಿದೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ