KSCAಗೆ ಕಾದಿದೆಯಾ ಗಂಡಾಂತರ..?

Jan 28, 2020, 3:54 PM IST

ಬೆಂಗಳೂರು(ಜ.28): ನಗರದ ಚಿನ್ನಸ್ವಾಮಿ ಮೈದಾನದಲ್ಲಿ ಭಾರತ-ಆಸ್ಟ್ರೇಲಿಯಾ ನಡುವಿನ ಏಕದಿನ ಪಂದ್ಯದಲ್ಲಿ ನಿಷೇಧಿತ ಪ್ಲಾಸ್ಟಿಕ್ ಬಳಸಿದ್ದಕ್ಕಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ 50 ಸಾವಿರ ರುಪಾಯಿ ದಂಡ ವಿಧಿಸಿ ವಾರಗಳೇ ಕಳೆದರೂ ಇದುವರೆಗೂ ದಂಡ ಕೆಎಸ್‌ಸಿಎ ದಂಡ ಪಾವತಿಸಿಲ್ಲ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪ್ಲಾಸ್ಟಿಕ್‌ ತುಂಡಾಗಿಸುವ ಯಂತ್ರ ಅನಾವರಣ

ಜನವರಿ 19ರಂದು ಭಾರತ-ಆಸ್ಟ್ರೇಲಿಯಾ ನಡುವಿನ ಮೂರನೇ ಹಾಗೂ ನಿರ್ಣಾಯಕ ಪಂದ್ಯಕ್ಕೆ ಎಂ. ಚಿನ್ನಸ್ವಾಮಿ ಮೈದಾನ ಸಾಕ್ಷಿಯಾಗಿತ್ತು. ಈ ಪಂದ್ಯವನ್ನು ಜಯಿಸುವುದರ ಮೂಲಕ ವಿರಾಟ್ ಪಡೆ ಸರಣಿ ಕೈವಶ ಮಾಡಿಕೊಂಡಿತ್ತು. ಈ ಪಂದ್ಯದ ವೇಳೆ ಕೆಎಸ್‌ಸಿಎ ಒಂದು ಎಡವಟ್ಟು ಮಾಡಿತ್ತು.

ಇದುವರೆಗೂ ಕೆಎಸ್‌ಸಿಎ ದಂಡ ಪಾವತಿಸಿಲ್ಲ. ಇನ್ನೆರಡು ದಿನಗಳಲ್ಲಿ ದಂಡ ಪಾವತಿಸದಿದ್ದರೆ, ಕೆಎಸ್‌ಸಿಎ ಕಚೇರಿಗೆ ಬೀಗ ಜಡಿಯಲು ಬಿಬಿಎಂಪಿ ರೆಡಿಯಾಗಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ