ದೀಪಕ್ ಸುಬ್ರಹ್ಮಣ್ಯ…. ಕನ್ನಡ ಕಿರುತೆರೆಯ ನವರಸ ನಾಯಕ, ಸಕಲಕಲಾವಲ್ಲಭ ಇವರಂತೆ!

First Published | Nov 28, 2024, 10:16 PM IST

ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಜಯಂತ್ ಪಾತ್ರದ ಮೂಲಕ ತಮ್ಮ ಅಮೋಘ ಅಭಿನಯದಿಂದ ಮೋಡಿ ಮಾಡುತ್ತಿರುವ ದೀಪಕ್ ಸುಬ್ರಹ್ಮಣ್ಯರನ್ನ ಜನ ಕಿರುತೆರೆಯ ನವರಸ ನಾಯಕ ಅಂತಿದ್ದಾರೆ. 
 

ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ನಾಯಕ ಜಯಂತ್ ಪಾತ್ರದ ಮೂಲಕ ಮೋಡಿ ಮಾಡುತ್ತಿರುವ ನಟ ದೀಪಕ್ ಸುಬ್ರಹ್ಮಣ್ಯ (Deepak Subramanya). 
 

ತಮ್ಮ ಅಮೋಘ ಅಭಿನಯದ ಮೂಲಕ ದೀಪಕ್ ಜನಮನ ಗೆದ್ದಿದ್ದಾರೆ. ಜಯಂತ್ ಅಂದ್ರೇನೆ ಜನರಿಗೆ ಒಂಥರಾ ಇಷ್ಟ, ಒಂಥರಾ ಭಯ, ಒಂಥರಾ ಕೋಪ ಬರುವಂತಹ ನಟನೆ ಇವರದ್ದು. 
 

Tap to resize

ಲಕ್ಷ್ಮೀ ನಿವಾಸದ (Lakshmi Nivasa) ಆರಂಭದಲ್ಲಿ ಅತಿ ವಿನಯದ ವ್ಯಕ್ತಿತ್ವದವರಾಗಿದ್ದು, ಹುಡುಗ ಅಂದ್ರೆ ಹೀಗಿರಬೇಕು ಎನ್ನುವಷ್ಟು ಅದ್ಭುತವಾದ ವ್ಯಕ್ತಿತ್ವ ಇವರದ್ದಾಗಿತ್ತು. ಇದಾದ ನಂತರ ಜಾಹ್ನವಿಯನ್ನ ಮದುವೆಯಾದ ಬಳಿಕ ಜಯಂತ್ ಒಂದೊಂದೆ ವ್ಯಕ್ತಿತ್ವಗಳು ಬಯಲಾಗತೊಡಗಿದವು. 
 

ಸದ್ಯಕ್ಕೆ ಇವರೊಬ್ಬ ಸೈಕೋ ಅನ್ನೋದು ಗೊತ್ತಾಗಿದೆ. ಜಾಹ್ನವಿ ತನಗಷ್ಟೇ ಸೀಮಿತ, ಆಕೆಯ ಮನೆಯವರು ಸಹ ಆಕೆ ಜೊತೆ ಮಾತನಾಡಬಾರದು, ಆಕೆಯನ್ನು ಮನೆಯವರಿಂದ ದೂರ ಮಾಡಬೇಕು ಎನ್ನುವ ಹುಚ್ಚು ವ್ಯಕ್ತಿತ್ವ ಇವರದ್ದು. 
 

ಒಂದೇ ಧಾರಾವಾಹಿಯಲ್ಲಿ ಎಲ್ಲಾ ರೀತಿಯ ಪಾತ್ರ ಮಾಡಿದ ನಟ ಇವರು, ಲಕ್ಷ್ಮೀ ನಿವಾಸದಲ್ಲಿ ಇವರು ನಿರ್ವಸದೇ ಇಲ್ಲ ಪಾತ್ರಗಳೇ ಇಲ್ಲ. ಒಂದು ಕಡೆ ಸಾಧು, ಮತ್ತೊಂದು ಕಡೆ ಸೈಕೋ ಆಗಿ, ಇನ್ನೊಂದು ಸಲ ಕೋಪಿಷ್ಟನಾಗಿ, ಮತ್ತೊಂದು ಸಲ ಒಳ್ಳೆಯ ಫ್ಯಾಮಿಲಿ ಮ್ಯಾನ್ ಆಗಿ ಕಾಣಿಸಿಕೊಂಡಿದ್ದಾರೆ.
 

ಪ್ರತಿಯೊಂದು ಪಾತ್ರಗಳನ್ನು ಅದ್ಭುತವಾಗಿ ನಟಿಸುವ ಮೂಲಕ ವೀಕ್ಷಕರ ನೆಚ್ಚಿನ ನಟನಾಗಿ ಜನಪ್ರಿಯತೆ ಪಡೆದಿದ್ದು, ಈ ಬಾರಿ ಝೀ ಕುಟುಂಬ ಅವಾರ್ಡ್ಸ್ ನಲ್ಲಿ ಬೆಸ್ಟ್ ನಾಯಕ ನಟ ಪ್ರಶಸ್ತಿ ಕೂಡ ಪಡೆದಿದ್ದರು. 
 

ಸದ್ಯ ನಟನ ನಟನೆಯನ್ನು ಮೆಚ್ಚಿಕೊಂಡ ಜನರು, ಇವರನ್ನ ನವರಸ ನಾಯಕ, ಸಕಲಕಲಾವಲ್ಲಭ, ಮಲ್ಟಿ ಟ್ಯಾಲೆಂಟೆಡ್, ಪ್ರತಿಭಾನ್ವಿತ ನಟ ಎಂದೆಲ್ಲಾ ಹೇಳುವ ಮೂಲಕ ದೀಪಕ್ ಸುಬ್ರಹ್ಮಣ್ಯರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ. 
 

Latest Videos

click me!