ರಾವಣನ ಲುಕ್ ಟೆಸ್ಟ್ ಮಾಡಿದ್ದರಾ ಯಶ್?: ಗಾಸಿಪ್, ರೂಮರ್‌ಗಳ ಹಿಂದಿನ ಅಸಲಿಯತ್ತೇನು?

Aug 26, 2023, 11:57 AM IST

ಬಾಲಿವುಡ್‌ನಲ್ಲಿ ರಾಮಾಯಣ ಸಿನಿಮಾ ಮಾಡೋದು ಆಲ್ಮೋಷ್ಟ್ ಖಚಿತವಾಗಿದೆ. ರಣ್ಬೀರ್ ಕಪೂರ್ ರಾಮನಾಗಿ ಕಾಣಿಸಿಕೊಳ್ಳುತ್ತಾರಂತೆ. ಸೀತೆಯಾಗಿ ಯಾರು ಎಂಬುದು ಇನ್ನೂ ಫೈನಲ್ ಆಗಿಲ್ಲ. ಈ ನಡುವೆ ರಾವಣನ ಪಾತ್ರಕ್ಕೆ ಯಶ್ಗೆ ಬಾಲಿವುಡ್‌ನಿಂದ ಬುಲಾವ್ ಬಂತಿತ್ತು ಎನ್ನುವುದು ನಿಜ. ಈಬಗ್ಗೆ ಯಶ್ ಆತ್ಮೀಯ ಮುಲಗಳು ಹೌದೆನ್ನುತ್ತವೆ. ಆದರೆ ಯಶ್ ರಾವಣನ ಲುಕ್ ಟೆಸ್ಟ್ ಮಾಡಿದ್ದರಾ?  ರಾವಣನ ಲುಕ್ ಟ್ರೈ ಮಾಡಿದ್ದರಾ..?  ಬಾಲಿವುಡ್ ಹಂಗಾಮ ಈ ಬಗ್ಗೆ ಹೌದೆಂದು ವರದಿ ಮಾಡಿದೆ. ಆದ್ರೆ ಯಶ್ ಕಡೆಯ ಮೂಲಗಳು ಇದನ್ನು ತಳ್ಳಿಹಾಕಿವೆ. ಯಶ್‌ಗೆ ಆಫರ್ ಬಂದಿದ್ದು ನಿಜಾ. 

ಅವರು ಮಾಡೊಲ್ಲ ಎಂದು ಹೇಳಿದ್ದೂ ನಿಜ ಎನ್ನುತ್ತವೆ ಮೂಲಗಳು. ಮಾಡಿದರೆ ರಾಮನಾಗಿ ನಾವೇ ಮಾಡ್ತೀವಿ. ರಾವಣ ಯಾಕೆ ಮಾಡ್ತಾರೆ ಎಂದಿದ್ದಾರಂತೆ. ನಿರ್ದೇಶಕ ನಿತೀಶ್ ತಿವಾರಿ ರಾಮಾಯಣ ಸಿನಿಮಾವನ್ನು ಮೂರು ಭಾಗಗಳಾಗಿ ಮಾಡಲು ನಿರ್ಧರಿಸಿದ್ದುಈ ಕುರಿತು ರಾವಣನಿಗಾಘಿ ಯಶ್ರ ಲುಕ್ ಟೆಸ್ಟ್ ಮಾಡಿದ್ದರೆಂಬ ವದಂತಿಗಳಿವೆ. ಆದರೆ ಅದು ಸುಳ್ಳು ಎಂದಿವೆ ಯಶ್ ಆಪ್ತ ಮೂಲಗಳು. ಸಾಮಾನ್ಯವಾಘಿ ಯಾವುದಾದರೂ ಇಂತಹ ಪ್ರಮುಖ ಪಾತ್ರಗಳಲ್ಲಿ ನಟಿಸುವಾಗ ಲುಕ್ ಟೆಸ್ಟ್ ಮಾಡಿಸೋದು ಸಹಜವೇ. ಆದರೆ ಯಶ್ ರಾವಣನ ಪಾತ್ರವನ್ನೆ ಮಾಡಲು ಒಪ್ಪಲಿಲ್ಲ. ಹೀಗಿರುವಾಗ ಲುಕ್ ಟೆಸ್ಟ್ ಮಾತು ಹೆಗೆ ಬರುತ್ತೆ ಎಂದಿದ್ದಾರೆ.