ಸ್ಯಾಫ್ ಕಪ್ ಫುಟ್ಬಾಲ್: ಭಾರತ-ಬಾಂಗ್ಲಾ ಫೈನಲ್ ಪಂದ್ಯ ಇಂದು

By Kannadaprabha News  |  First Published Sep 30, 2024, 11:46 AM IST

ಸ್ಯಾಫ್ ಕಪ್ ಫುಟ್ಬಾಲ್ ಟೂರ್ನಿಯ ಫೈನಲ್ ಪಂದ್ಯದಲ್ಲಿಂದು ಹಾಲಿ ಚಾಂಪಿಯನ್ ಭಾರತ ಹಾಗೂ ಬಾಂಗ್ಲಾದೇಶ ತಂಡಗಳು ಪ್ರಶಸ್ತಿಗಾಗಿ ಕಾದಾಡಲಿವೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ


ಥಿಂಪು: ಅಂಡರ್ -17 ದಕ್ಷಿಣ ಏಷ್ಯಾ ಫುಟ್ಬಾಲ್ ಫೆಡರೇಶನ್ (ಸ್ಯಾಫ್) ಕಪ್‌ನ ಫೈನಲ್‌ನಲ್ಲಿ ಸೋಮವಾರ ಹಾಲಿ ಚಾಂಪಿಯನ್ ಭಾರತಕ್ಕೆ ಬಾಂಗ್ಲಾದೇಶ ಎದುರಾಗ ಲಿದೆ. ಉದ್ಘಾಟನಾ ಆವೃತ್ತಿಯಲ್ಲಿ ಚಾಂಪಿಯನ್ ಆಗಿದ್ದ ಭಾರತ, 2ನೇ ಆವೃತ್ತಿಯಲ್ಲೂ ಪ್ರಶಸ್ತಿ ಗೆಲ್ಲಲು ಉತ್ತುಕಗೊಂಡಿದೆ. ಗುಂಪು ಹಂತದ ಪಂದ್ಯದಲ್ಲಿ ಬಾಂಗ್ಲಾ ವಿರುದ್ಧ ಭಾರತ 1-0 ಗೋಲಿನಿಂದ ಗೆದ್ದಿತ್ತು.

ಫುಟ್ಬಾಲ್: ಲಾವೊಸ್ ವಿರುದ್ಧ ಗೆದ್ದ ಭಾರತ ತಂಡ

Latest Videos

undefined

ವಿಯೆಂಟೈನ್ (ಲಾವೋಸ್): ಅಂಡರ್ -20 ಏಷ್ಯನ್ ಕಪ್ ಫುಟ್ಬಾಲ್ ಅರ್ಹತಾ ಟೂರ್ನಿಯ ಗುಂಪು ಹಂತವನ್ನು ಭಾರತ 2ನೇ ಸ್ಥಾನದಲ್ಲಿ ಮುಕ್ತಾಯಗೊಳಿಸಿದೆ. 'ಜಿ' ಗುಂಪಿನ ಅಂತಿಮ ಪಂದ್ಯದಲ್ಲಿ ಭಾರತ ಆತಿಥೇಯ ಲಾವೊಸ್ ವಿರುದ್ಧ 2-0 ಗೋಲುಗಳ ಗೆಲುವು ಸಾಧಿಸಿ, ಪ್ರಧಾನ ಸುತ್ತಿಗೇರುವ ಆಸೆಯನ್ನು ಜೀವಂತವಾಗಿರಿಸಿಕೊಂಡಿತು. 

ಐಪಿಎಲ್‌ 2025: ಆರ್‌ಟಿಎಂ ಕಾರ್ಡ್‌ ಬಳಕೆ ನಿಯಮ ಬದಲು; ಇಲ್ಲಿದೆ ಇಂಟ್ರೆಸ್ಟಿಂಗ್ ಡೀಟೈಲ್ಸ್

10 ಗುಂಪುಗಳಲ್ಲಿ ಅಗ್ರಸ್ಥಾನ ಪಡೆಯುವ ತಂಡಗಳ ಜೊತೆಗೆ ಉತ್ತಮ ಅಂಕ, ಗೋಲು ವ್ಯತ್ಯಾಸ ದೊಂದಿಗೆ 2ನೇ ಸ್ಥಾನ ಪಡೆದ 5 ತಂಡಗಳು ಸಹ ಪ್ರಧಾನ ಸುತ್ತಿಗೆ ಪ್ರವೇಶ ಪಡೆಯಲಿವೆ. ಭಾರತದ ಭವಿಷ್ಯ ಉಳಿದ ಗುಂಪುಗಳ ಫಲಿತಾಂಶದ ಮೇಲೆ ನಿಂತಿದೆ.

ಅಂಡರ್‌-23 ಅಥ್ಲೆಟಿಕ್ಸ್‌: ರಾಜ್ಯಕ್ಕೆ 3 ಕಂಚಿನ ಪದಕ

ಪಾಟ್ನಾ: 4ನೇ ಆವೃತ್ತಿಯ ಅಂಡರ್‌-23 ಇಂಡಿಯನ್‌ ಓಪನ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನ 2ನೇ ದಿನವಾದ ಭಾನುವಾರ ಕರ್ನಾಟಕ 3 ಕಂಚಿನ ಪದಕಗಳನ್ನು ಗೆದ್ದಿದೆ. ಪುರುಷರ ಡೆಕಥ್ಲಾನ್‌ನಲ್ಲಿ ಲೋಕೇಶ್‌ ರಾಥೋಡ್‌ ಒಟ್ಟಾರೆ 6440 ಅಂಕ ಗಳಿಸಿ 3ನೇ ಸ್ಥಾನ ಪಡೆದರೆ, ಮಹಿಳೆಯರ ಹೈಜಂಪ್‌ನಲ್ಲಿ ಪಲ್ಲವಿ ಪಾಟೀಲ್‌ 1.72 ಮೀ. ಎತ್ತರಕ್ಕೆ ನೆಗೆದು ಕಂಚು ಪಡೆದರು. ಪುರುಷರ ಡಿಸ್ಕಸ್‌ ಥ್ರೋನಲ್ಲಿ ನಾಗೇಂದ್ರ ಅಣ್ಣಪ್ಪ 51.98 ಮೀ. ದೂರಕ್ಕೆ ಎಸೆದು 3ನೇ ಸ್ಥಾನ ಗಳಿಸಿದರು. ಕೂಟವು ಸೋಮವಾರ ಮುಕ್ತಾಯಗೊಳ್ಳಲಿದೆ.

ಐಪಿಎಲ್ ಬಳಿಕ ಧೋನಿ ಬಿಂದಾಸ್ ಲೈಫ್ ಎಂಜಾಯ್:ವಿಡಿಯೋ ವೈರಲ್

ಶೂಟಿಂಗ್ ವಿಶ್ವಕಪ್: ತಡವಾಗಿ ಬಂದು ಚಿನ್ನ ಕಳೆದುಕೊಂಡ ಉಮೇಶ್!

ನವದೆಹಲಿ: ಪೆರು ದೇಶದ ರಾಜಧಾನಿ ಲಿಮಾದಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್ ಕಿರಿಯರ ಶೂಟಿಂಗ್ ವಿಶ್ವ ಕಪ್‌ನಲ್ಲಿ ಭಾರತಕ್ಕೆ ಚಿನ್ನದ ಪದಕವೊಂದು ಕೈತಪ್ಪಿದೆ. ಸ್ಪರ್ಧೆಗೆ ತಡವಾಗಿ ಬಂದಿದ್ದಕ್ಕೆ ಭಾರತದ ಉಮೇಶ್ ಚೌಧ ರಿಗೆ 2 ಅಂಕಗಳ ದಂಡ ಹಾಕಲಾಯಿತು. 8 ಶೂಟರ್‌ಗಳಿದ್ದ ಫೈನಲ್‌ನಲ್ಲಿ ಉಮೇಶ್ 6ನೇ ಸ್ಥಾನಕ್ಕೆ ತಳ್ಳಲ್ಪಟ್ಟರು. ಅವರು 2 ಅಂಕ ಕಳೆದುಕೊಳ್ಳದಿದ್ದರೆ ಚಿನ್ನದ ಪದಕ ಸಿಗುತ್ತಿತ್ತು.
 

click me!