Jul 4, 2022, 4:34 PM IST
ಸಲ್ಮಾನ್ ಖಾನ್ ಒಂದ್ ಕಾಲದಲ್ಲಿ ಬಾಲಿವುಡ್ ಬಾಕ್ಸಾಫೀಸ್ ಸುಲ್ತಾನ್ ಅಂತ ಕರೆಸಿಕೊಂಡ ನಟ. ಸಲ್ಲು ಸಿನಿಮಾಗಳು ಬಂದ್ರೆ 500 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡುತ್ತಿದ್ದ ಕಾಲ ಇತ್ತು. ಆದ್ರೆ ಈಗ ಸಲ್ಲು ಸಿನಿಮಾ ಬಜೆಟ್ 200 ಕೋಟಿ ಇದ್ರೆ ಆ ಸಿನಿಮಾ ಕಲೆಕ್ಷನ್ ಮಾಡೋದು 210 ಕೋಟಿಗೆ ಬಂದು ನಿಂತಿದೆ. ಅಂದ್ರೆ ಸಲ್ಲು ಭಾಕ್ಸಾಫೀಸ್ ಕಲೆಕ್ಷನ್ನಲ್ಲಿ ಮಕಾಡೆ ಮಲಗಿದ್ದಾರೆ. ಹಾಗಂತ ಸಲ್ಲು ಈಗ ಸುಮ್ಮನೇ ಕೂತಿಲ್ಲ. ಈ ಭಾಯ್ ಜಾನ್ ಮತ್ತೆ ಸುಲ್ತಾನನಂತೆ ಎದ್ದು ಬರಬೇಕು ಅಂತ ಸೌತ್ ಸಿನಿ ರಂಗದ ಕಡೆ ಮುಖ ಮಾಡಿ ನಿಂತಿದ್ದಾರೆ. ಅದಕ್ಕೆ ಕಾರಣ ದಕ್ಷಿಣ ಭಾರತ ಚಿತ್ರರಂದಲ್ಲಿರೋ ಟ್ಯಾಲೆಂಟ್ಗಳು.
ಮಲೆನಾಡಿನ ಮಧುರ ಪ್ರೇಮಕತೆ 'ಒಲವಿನ ನಿಲ್ದಾಣ' ದ ಬಗ್ಗೆ ನಟಿ ಅಮಿತಾ ಹೇಳಿದ್ದಿಷ್ಟು
ಹಿಂದಿಯ ಸಿನಿಮಾ ಕಭಿ ಈದ್ ಕಭಿ ದೀವಾಲಿ ಸಿನಿಮಾದ ಮ್ಯೂಸಿಕ್ ಮಾಡೋದಕ್ಕೆ ಕನ್ನಡದ ಟ್ಯಾಲೆಂಟ್ ರವಿ ಬಸ್ರೂರುಗೆ ಅಪ್ರೋಚ್ ಮಾಡಿದ್ದಾರೆ ಸಲ್ಲು. ಕಭಿ ಈದ್ ಕಭಿ ದೀವಾಲಿ ಸಿನಿಮಾಗೆ ಮೊದಲು ದೇವಿ ಶ್ರೀ ಪ್ರಸಾದ್ ಸಂಗೀತ ನಿರ್ದೇಶಕರಾಗಿ ಆಯ್ಕೆ ಆಗಿದ್ರು. ಆದ್ರೆ ಅವರ ಸಂಗೀತ ಸಲ್ಲು ಕತೆಗೆ ಸಿಂಕ್ ಆಗಿಲ್ಲ, ಹೀಗಾಗಿ ಈಗ ರವಿ ಬಸ್ರೂರು ರನ್ನ ಸಂಗೀತ ನಿರ್ದೇಶಕರನ್ನಾಗಿ ಆಯ್ಕೆ ಮಾಡಿಕೊಂಡಿದ್ದಾರಂತೆ. ಇದ್ರಿಂದ ಭಾರತೀಯ ಚಿತ್ರರಂಗದ ಟಾಪ್ ಮ್ಯೂಸಿಕ್ ಡೈರೆಕ್ಟರ್ಗಳ ಲಿಸ್ಟ್ನಲ್ಲಿ ರವಿ ಬಸ್ರೂರು ಹಾಗು ದೇವಿ ಶ್ರೀ ಪ್ರಸಾದ್ ಎದ್ದು ಕಾಣುತ್ತಿದ್ದಾರೆ.