Rajinikanth ವೈರಲ್‌ ಫೋಟೋ ಹಿಂದಿನ ರಹಸ್ಯ ಬಯಲು..! ಅಸಲಿಗೆ ಸತ್ಯ ಏನ್‌ ಗೊತ್ತಾ..?

Oct 22, 2023, 12:39 PM IST

ಕೆಲವೊಂದ್ ಸಾರಿ ಹೇಗೆಲ್ಲಾ ಆಗ್ತಿರುತ್ತೆ. ಇತ್ತೀಚಿಗೆ ಸೋಷಿಯಲ್ ಮೀಡಿಯಾದಲ್ಲಿ ಸೂಪರ್ ಸ್ಟಾರ್ ನಟ ರಜನಿಕಾಂತ್ ಅವರ ಫೋಟೋ ಒಂದು ವೈರಲ್ ಆಗಿತ್ತು. ಆ ಚಿತ್ರದಲ್ಲಿ ರಜನಿ ಅವತಾರ ನೋಡಿ. ಒಂದು ಕ್ಷಣ ಅವರ ಅಭಿಮಾನಿಗಳು ಶಾಕ್ ಆಗಿದ್ದರು. ಅಲ್ಲದೆ, ಸ್ಕ್ರೀನ್ ಮೇಲೆ ಕಾಣುವ ತಲೈವಾ ನಿಜ ಜೀವನದಲ್ಲಿ ಹೀಗೆ ಇರ್ತಾರಾ...? ಅಂತ ಅನುಮಾನ ಪಟ್ಟಿದ್ರು. ಇದೀಗ ಆ ಫೋಟೋದಲ್ಲಿದ್ದ ವ್ಯಕ್ತಿಯ ರಿಯಲ್ ವೀಡಿಯೋ ಬಯಲಾಗಿದೆ. ನೋಡಿ ಇದು ರಜಿನಿಕಾಂತೇನಾ? ಅಥವಾ ಬೇರೆ ಯಾರಾದ್ರೂನಾ..? ನೀವೆ ಗುರುತು ಹಿಡೀತಿರಾ. ಡೀಸೆಂಟ್ ಸ್ಟೈಲಿಷ್ ತಲೈವಾ ಎಲ್ಲಿ..? 

ಪಕ್ಕಾ ಹಳ್ಳೀ ಹೈದನಂತೆ ತಮಾಷೆ ಮಾಡ್ತಾ ನಿಂತಿರೋ ಈ ವ್ಯಕ್ತಿ ಎಲ್ಲಿ,..?  ವೀಡಿಯೋ ನೋಡಿದ ಒಂದು ಕ್ಷಣ  ಜನ ಕನ್ಫ್ಯೂಸ್ ಆದೋದಂತೂ ಗ್ಯಾರೆಂಟಿ. ಆದ್ರೆ ಈಗ ಆ ವೀಡಿಯೋ ಅಸಲಿ ಸತ್ಯ ಬಹಿರಂಗವಾಗಿದೆ. ಸಾಕಷ್ಟು ಗ್ಯಾಪ್‌ನ ನಂತರ ಜೈಲರ್ ಮೂಲಕ ಬಿಗ್‌ ಸ್ಕ್ರೀನ್‌ ಮೇಲೆ ಮೋಡಿ ಮಾಡಿದ್ದ ತಲೈವಾ ರಜನಿ ಫೋಟೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು. ಅಸಲಿಗೆ ಆ ಫೋಟೋ ರಜನಿಕಾಂತ್‌ ಅವರದ್ದು ಅಲ್ಲ, ಅವರನ್ನು ಹೋಲುವ ವ್ಯಕ್ತಿಯೊಬ್ಬನದ್ದು. ಅನ್ನೋದು ಈಗ  ಬಯಲಾಗಿದೆ. ಅದು ಫೇಕ್ ವೀಡಿಯೋ ಆಗಿದ್ದು ರಜಿನಿಕಾಂತ್ರಂತೆ ಕಾಣೋ ಯಾರೋ ಸಾಮಾನ್ಯ ವ್ಯಕ್ತಿಯೊಬ್ಬರದ್ದಾಗಿದೆ.