
ಕೇಪ್ ಕನವೆರಲ್: ಅಂತರಿಕ್ಷ ಕೇಂದ್ರದಲ್ಲಿ ತಾಂತ್ರಿಕ ದೋಷದ ಕಾರಣ ಸಿಲುಕಿರುವ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರನ್ನು ಮರಳಿ ಕರೆತರಲು ಇಬ್ಬರು ಗಗನಯಾತ್ರಿಗಳು ಮತ್ತು ಎರಡು ಖಾಲಿ ಆಸನಗಳು ಇರುವ ಸ್ಪೇಸ್‌ಎಕ್ಸ್ ಮಿಷನ್ ವ್ಯೋಮನೌಕೆಯೊಂದಿಗೆ ಫ್ಲೋರಿಡಾದಿಂದ ಶನಿವಾರ ಪ್ರಯಾಣ ಬೆಳೆಸಿದ್ದಾರೆ. ಇವರು ಸುಮಾರು 5-6 ತಿಂಗಳು ಅಂತರಿಕ್ಷದಲ್ಲಿ ಇರಲಿದ್ದು, ಫೆಬ್ರವರಿಯಲ್ಲಿ ಸುನಿತಾ ಹಾಗೂ ಬುಚ್‌ರನ್ನು 2 ಖಾಲಿ ಆಸನದಲ್ಲಿ ಕೂರಿಸಿಕೊಂಡು ಭೂಮಿಗೆ ಮರಳಲಿದ್ದಾರೆ.
ಬಾಹ್ಯಾಕಾಶ ಕೇಂದ್ರದಿಂದಲೇ ಮತದಾನ
ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಸಿಲುಕಿರುವ ಭಾರತ ಮೂಲದ ನಾಸಾ ವಿಜ್ಞಾನಿ ಸುನಿತಾ ವಿಲಿಯಮ್ಸ್ ಹಾಗೂ ಅಮೆರಿಕದ ಇನ್ನೊಬ್ಬ ವಿಜ್ಞಾನಿ ಬುಚ್ ವಿಲ್ಮರ್ ಇದೇ ನ.5ರಂದು ನಡೆಯಲಿರುವ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಅಂತರಿಕ್ಷದಿಂದಲೇ ಮತದಾನ ಮಾಡಲಿದ್ದಾರೆ. ಈ ಹಿಂದೆ, 2020ರ ಚುನಾವಣೆಯಲ್ಲೂ ನಾಸಾ ವಿಜ್ಞಾನಿ ಕೇಟ್ ರೂಬಿನ್ಸ್ ಅಂ.ರಾ. ಬಾಹ್ಯಾಕಾಶ ಕೇಂದ್ರದಿಂದಲೇ ಮತ ಚಲಾಯಿಸಿದ್ದರು.
ಸುನೀತಾ ಹಾಗೂ ವಿಲ್ಮರ್ ಕಳೆದ ಜೂನ್‌ನಲ್ಲಿ ಬಾಹ್ಯಾಕಾಶ ಕೇಂದ್ರಕ್ಕೆ ತೆರಳಿದ್ದು, ಈ ತಿಂಗಳು ಸ್ಟಾರ್‌ಲೈನರ್ ನೌಕೆಯಲ್ಲಿ ವಾಪಸಾಗಬೇಕಿತ್ತು. ಆದರೆ ತಾಂತ್ರಿಕ ದೋಷದಿಂದಾಗಿ ಆ ನೌಕೆಯಲ್ಲಿ ಅವರು ಮರಳಿಲ್ಲ. ಮುಂದಿನ ಫೆಬ್ರವರಿಯಲ್ಲಿ ಅವರನ್ನು ಬೇರೆ ನೌಕೆಯಲ್ಲಿ ಭೂಮಿಗೆ ಕರೆತರಲು ನಾಸಾ ನಿರ್ಧರಿಸಿದೆ. ಅಲ್ಲಿಯವರೆಗೂ ಅವರು ಅಲ್ಲೇ ಇರಲಿದ್ದಾರೆ.
ಬಾಹ್ಯಾಕಾಶದ ಜೀವನ ಹೇಗಿರುತ್ತೆ? ಅಲ್ಲೇ ಹುಟ್ಟುಹಬ್ಬ ಆಚರಿಸಿಕೊಳ್ತಿರೋ ಸುನೀತಾ ವಿವರಿಸಿರೋ ವಿಡಿಯೋ ವೈರಲ್
ಭರವಸೆ ಕಳೆದುಕೊಳ್ಳದ ಸುನೀತಾ:
ಪತ್ರಿಕಾಗೋಷ್ಠಿಯಲ್ಲಿ ಬಾಹ್ಯಾಕಾಶ ಕೇಂದ್ರದಲ್ಲಿನ ವಾಸದ ಬಗ್ಗೆ ಹಾಗೂ ಭೂಮಿಗೆ ಬರುವುದು ವಿಳಂಬವಾಗುತ್ತಿರುವುದರ ಬಗ್ಗೆ ಮಾತನಾಡಿದ ಸುನೀತಾ ಹಾಗೂ ವಿಲ್ಮರ್, ‘ನಾವು ಇಲ್ಲಿ ಚೆನ್ನಾಗಿಯೇ ಇದ್ದೇವೆ. ಆದರೆ ಇದು ಸುಲಭದ ಕೆಲಸವಲ್ಲ. ನಾವು ಆಯ್ದುಕೊಂಡಿದ್ದು ಅಪಾಯಕಾರಿ ಕೆಲಸವನ್ನು ಎಂಬುದು ನಮಗೆ ತಿಳಿದಿದೆ. ಇನ್ನೂ ಕೆಲ ತಿಂಗಳು ಇಲ್ಲೇ ಇದ್ದು ಭೂಮಿಗೆ ಮರಳುತ್ತೇವೆ’ ಎಂದು ಹೇಳಿದರು.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.