ರಜಿನಿಕಾಂತ್‌ಗೆ ನಿಮಿಷಕ್ಕೆ 1 ಕೋಟಿ ಸಂಭಾವನೆ: ಯೋಧರಿಗೆ ಅವಮಾನ ಮಾಡಿದ್ದಾರಾ ದೀಪಿಕಾ- ಹೃತಿಕ್?

Feb 8, 2024, 1:33 PM IST

'ಜೈಲರ್' ಬಾಕ್ಸಾಫೀಸ್ನಲ್ಲಿ 600 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿತ್ತು. ಇದು ರಜನಿ ಕರಿಯರ್ನಲ್ಲಿ ಅತೀ ಹೆಚ್ಚು ಗಳಿಸಿದ ಸಿನಿಮಾಗಳಲ್ಲಿ ಒಂದು ಎನಿಸಿಕೊಂಡಿದೆ. ಈಗ ಅತಿಥಿ ಪಾತ್ರದಲ್ಲಿ ನಟಿಸಿದ್ದರೂ 'ಲಾಲ್ ಸಲಾಂ' ನೋಡುವುದಕ್ಕೆ ಫ್ಯಾನ್ಸ್ ತುದಿಗಾಲಲ್ಲಿ ನಿಂತಿದ್ದಾರೆ. ಜೈಲರ್ ನಂತರ ರಜಿನಿ ಅಭಿನಯದ ಸಿನಿಮಾ 'ಲಾಲ್ ಸಲಾಂ' . ರಜಿನಿ ಮಗಳೇ ನಿರ್ದೇಶಿಸಿರೋ ಚಿತ್ರ. ಮಗಳೇ ನಿರ್ದೇಶಕಿಯಾಗಿದ್ದರಿಂದ ರಜನಿಕಾಂತ್ ಸಂಭಾವನೆ ಇಲ್ಲದೆ ನಟಿಸಿದ್ದಾರೆಂದು ಕೊಂಡರೆ ನಿಮ್ಮ ಊಹೆ ತಪ್ಪು. ತಮಿಳು ಪತ್ರಿಕೆಯೊಂದರ ಪ್ರಕಾರ ಸೂಪರ್ಸ್ಟಾರ್ ರಜನಿಕಾಂತ್ ನಿಮಿಷಕ್ಕೆ ಒಂದು ಕೋಟಿಯಂತೆ ಸಂಭಾವನೆ ಪಡೆದಿದ್ದಾರೆ., 'ಲಾಲ್ ಸಲಾಂ' ಸಿನಿಮಾದಲ್ಲಿ ರಜನಿಕಾಂತ್ ಸುಮಾರು 40 ನಿಮಿಷಗಳ ಕಾಲ ಕಾಣಿಸಿಕೊಳ್ಳುತ್ತಾರೆ. ಇದನ್ನೇ ಆಧಾರವಾಗಿಟ್ಟುಕೊಂಡರೆ, ಸೂಪರ್ಸ್ಟಾರ್ ರಜನಿಕಾಂತ್ ಸುಮಾರು 35 ರಿಂದ 40 ಕೋಟಿ ರೂಪಾಯಿ ಸಂಭಾವನೆ ಪಡೆದಿರಬಹುದೆಂದು ಲೆಕ್ಕಾಚಾರ ಹಾಕಲಾಗುತ್ತಿದೆ. 

ಯೋಧರಿಗೆ ಅವಮಾನ ಮಾಡಿದ್ದಾರಾ..ದೀಪಿಕಾ- ಹೃತಿಕ್?: ಬಾಲಿವುಡ್ ನಟ ಹೃತಿಕ್ ರೋಷನ್ ಅಭಿನಯದ ‘ಫೈಟರ್’ ಸಿನಿಮಾ ಕಳೆದ ಜನವರಿ 25, 2024ರಂದು ರಿಲೀಸ್ ಆಗಿತ್ತು. ಸಿದ್ಧಾರ್ಥ್ ಆನಂದ್ ನಿರ್ದೇಶನದ ಸಿನಿಮಾ ರಿಲೀಸ್ ಆಗಿ ಭಾರತದ ಅತಿದೊಡ್ಡ ಆ್ಯಕ್ಷನ್ ಸಿನಿಮಾ ಎಂದೆನಿಸಿಕೊಂಡಿತ್ತು. ಇದೀಗ ನಟ ಹೃತಿಕ್ ರೋಷನ್ ಹಾಗೂ ದೀಪಿಕಾ ಪಡುಕೋಣೆ ವಿರುದ್ಧ ಲೀಗಲ್ ನೋಟಿಸ್ ಜಾರಿ ಮಾಡಲಾಗಿದೆ. ವಾಯುಪಡೆ ದಿರಿಸಿನಲ್ಲಿ ಚುಂಬನ, ರೊಮ್ಯಾಂಟಿಕ್ ದೃಶ್ಯಗಳನ್ನು ಮಾಡಿದ್ದಕ್ಕೆ ವಾಯುಪಡೆ ದೀಪಿಕಾ ಮತ್ತು ಹೃತಿಕ್ ಇಬ್ಬರಿಗೂ ವಾಯುಪಡೆ ಲೀಗಲ್ ನೋಟಿಸ್ ನೀಡಿದೆ. ವಾಯುಪಡೆಗೆ ಅದರದ್ದೇ ಆದ ಗೌರವವಿದೆ. ಅದರ ಸಮವಸ್ತ್ರ ತ್ಯಾಗ, ಶಿಸ್ತು ಮತ್ತು ದೇಶಕ್ಕಾಗಿ ಸೇವೆ ಸಲ್ಲಿಸುವ ಬದ್ಧತೆಯ ಪ್ರತೀಕವಾಗಿದೆ. ಆದರೆ ಸಿನಿಮಾದಲ್ಲಿ ಈ ಸಮವಸ್ತ್ರ ಧರಿಸಿ ರೊಮ್ಯಾಂಟಿಕ್ ದೃಶ್ಯಗಳಲ್ಲಿ ಭಾಗಿಯಾಗಿದ್ದು ವಾಯುಪಡೆಯ ಘನತೆಗೆ ಧಕ್ಕೆ ತಂದಂತೆ. ಇಂತಹ ದೃಶ್ಯಗಳನ್ನು ಸಿನಿಮಾದಲ್ಲಿ ತೋರಿಸಿ ವಾಯುಪಡೆಗೆ ಅವಮಾನ ಮಾಡಲಾಗಿದೆ.

ಮತ್ತೊಂದು ತೆಲುಗು ಚಿತ್ರ ಬಾಚಿಕೊಂಡ ಜಾನ್ವಿ ಕಪೂರ್: ಆರ್ ಆರ್ ಆರ್ ಚಿತ್ರದ ನಂತರ ಗೇಮ್ ಚೇಂಜರ್’ ಸಿನಿಮಾ ಕೆಲಸಗಳಲ್ಲಿ ನಟ ರಾಮ್ ಚರಣ್ ಬ್ಯುಸಿ ಇದ್ದಾರೆ. ಇದಾದ ಬಳಿಕ ಅವರು ‘RC 16’ ಕೆಲಸಗಳಲ್ಲಿ ತೊಡಗಿಕೊಳ್ಳಲಿದ್ದಾರೆ. ‘ಉಪ್ಪೇನ’ ಖ್ಯಾತಿಯ ಬುಚ್ಚಿ ಬಾಬು ಈ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ. ಈ ಚಿತ್ರಕ್ಕೆ ಜಾನ್ವಿ ಕಪೂರ್ ನಾಯಕಿಯಾಗಿ ಫೈನಲ್ ಆಗಿದ್ದಾರೆ ಎಂದು ವರದಿ ಆಗಿದೆ. ಜೂನಿಯರ್ ಎನ್ಟಿಆರ್ ಜೊತೆ ದೇವರ ಸಿನಿಮಾದಲ್ಲಿ ನಟಿಸಿದ್ದು ಇದಾದ ನಂತರ ರಾಮ್ಚರಣ್ ಗೆ ಜೋಡಿಯಾಗಲಿದ್ದಾರೆ ಎನ್ನಲಾಗಿದೆ. ಶ್ರೀದೇವಿಯಂತೆ ಅವರ ಮಗಳೂ ಕೂಡ ಇದೀಗ ಸೌತ್ ಸಿನಿಮಾ ಇಂಡಸ್ಟ್ರಿಯ ಮೇಲೆ ಕಣ್ಣಿಟ್ಟಿದ್ದು. ದೇವರ ಸಿನಿಮಾ ಸಕ್ಸಸ್ ಮೇಲೆ ಜಾನ್ವಿ ಸೌತ್ ಸಿನಿಮಾ ಭವಿಷ್ಯ ನಿರ್ಧಾರವಾಗಲಿದೆ.