ಅಪ್ಪು ದೇವರ ಮಗ : ರಜನಿಕಾಂತ್

Nov 1, 2022, 7:31 PM IST

ಬೆಂಗಳೂರು: ಪುನೀತ್ ರಾಜ್‌ಕುಮಾರ್‌ಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಆಗಮಿಸಿದ ನಟ ರಜನಿಕಾಂತ್ ಅವರು ಅಪ್ಪು ಅವರ ಬಗ್ಗೆ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಅವರೊಬ್ಬ ದೇವರ ಮಗ, ಸ್ವಲ್ಪ ಕಾಲ ಇಲ್ಲಿದ್ದು, ಹೊರಟು ಹೋಗಿದ್ದಾರೆ ಎಂದರು. ಅಪ್ಪು ನಿಧನರಾದಾಗ ನಾನು ಆಸ್ಪತ್ರೆಯಲ್ಲಿದೆ. ಹಲವು ದಿನಗಳು ಕಳೆದ ನಂತರ ನನಗೆ ನಮ್ಮ ಮನೆಯವರು ಈ ವಿಚಾರ ತಿಳಿಸಿದರು. ನನಗದನ್ನು ನಂಬಲಾಗಲಿಲ್ಲ. ಅಪ್ಪು ಅವರ ಮಗು ಮುಖವೇ ಶಾಶ್ವತವಾಗಿ ನನ್ನ ಮನದಾನದಲ್ಲಿರಲು ನಾನು ಬಯಸುವೆ ಎಂದರು. 

67ನೇ ಕನ್ನಡ ರಾಜ್ಯೋತ್ಸವ ದಿನದಂದೇ ಪುನೀತ್ ರಾಜ್‌ಕುಮಾರ್ ಅವರಿಗೆ ಮರಣೋತ್ತರವಾಗಿ ಸರ್ಕಾರದ ವತಿಯಿಂದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿದ್ದು, ಇದೇ ವೇಳೆ ಮಾತನಾಡಿದ ರಜನಿಕಾಂತ್ ನಾಡಿನ ಸಮಸ್ತ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯ ಕೋರಿದ್ದರು. ಕಾರ್ಯಕ್ರಮ ಆರಂಭವಾಗುತ್ತಿದ್ದಂತೆ ಮಳೆ ಸುರಿಯಲು ಆರಂಭಿಸಿದ್ದು, ಈ ವೇಳೆ ಮಾತನಾಡಿದ ರಜನಿಕಾಂತ್ ಅವರು ಈ ಹಿಂದೆ ವರನಟ ಡಾ. ರಾಜ್‌ಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡುವ ವೇಳೆಯೂ ಮಳೆ ಬಂದಿತ್ತು ಎಂದು ಕೇಳಿಪಟ್ಟೆ. ಈಗ ಮಳೆ ಬರುತ್ತಿರುವುದರಿಂದ ಅಪ್ಪು ಬಗ್ಗೆ ಮಾತನಾಡಲು ಸಾಧ್ಯವಾಗುತ್ತಿಲ್ಲ. ಮುಂದೆ ಅಪ್ಪು ಬಗ್ಗೆ ಮಾತನಾಡಲು ಮತ್ತೆ ಬರುವೆ ಎಂದು ರಜನಿಕಾಂತ್ ಹೇಳಿದರು.