ಶ್ರೀ ಮುರಳಿ ಜೊತೆ ಸಣ್ಣ ಪುಟ್ಟ ಜಗಳ ಇತ್ತೇನೋ ಈಗ ಕ್ಲೋಸ್ ಆಗಿದ್ದೀವಿ: ವಿಜಯ್ ರಾಘವೇಂದ್ರ

Published : May 13, 2024, 11:56 AM IST

ಅಣ್ಣ ತಮ್ಮ ಎಷ್ಟು ಕ್ಲೋಸ್, ಒಬ್ಬರಿಗೊಬ್ಬರು ಎಷ್ಟು ಸಪೋರ್ಟ್ ಮಾಡುತ್ತೀವಿ ಎಂದು ಮೊದಲ ಸಲ ಹೇಳಿಕೊಂಡ ವಿಜಯ್ ರಾಘವೇಂದ್ರ.  

PREV
18
ಶ್ರೀ ಮುರಳಿ ಜೊತೆ ಸಣ್ಣ ಪುಟ್ಟ ಜಗಳ ಇತ್ತೇನೋ ಈಗ ಕ್ಲೋಸ್ ಆಗಿದ್ದೀವಿ: ವಿಜಯ್ ರಾಘವೇಂದ್ರ

ಕನ್ನಡ ಚಿತ್ರರಂಗದ ಪವರ್‌ ಬ್ರದರ್ಸ್‌ ವಿಜಯ್ ರಾಘವೇಂದ್ರ ಮತ್ತು ಶ್ರೀಮುರಳಿ ನಿಜ ಜೀವನದಲ್ಲಿ ಎಷ್ಟು ಕ್ಲೋಸ್? ರ್ಯಾಪಿಡ್ ರಶ್ಮಿ ಯುಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ್ದಾರೆ.  

28

ಶ್ರೀಮುರಳಿ, ತಂಗಿ ಮತ್ತು ನಾನು ತುಂಬಾನೇ ಕ್ಲೋಸ್ ಆಗಿದ್ದೀವಿ ಇದಕ್ಕೆ ನಮ್ಮ ತಂದೆ-ತಾಯಿಗೆ ವಂದನೆಗಳನ್ನು ಹೇಳಬೇಕು. ಏಕೆಂದರೆ ಎಂದೂ ನಾವು ಮೂರೇ ಜನ ಬೆಳೆದಿಲ್ಲ.

38

ಎಷ್ಟು ಜನ ಕಸಿನ್‌ಗಳು ಇದ್ರು ಅಷ್ಟೋ ಜನ ಒಟ್ಟಿಗೆ ಬೆಳೆದಿರುವುದು. ಮನೆ ತುಂಬಾ ಕಸಿನ್‌ಗಳು ಮತ್ತು ಸಂಬಂಧಿಕರು ಒಟ್ಟಿಗೆ ಇದ್ದರು ಎಂದು ವಿಜಯ್ ಹೇಳಿದ್ದಾರೆ. 

48

ತುಂಬಾ ಅಕ್ಕ ತುಂಬಾ ತಮ್ಮ ಕ್ಲೋಸ್ ಆ ತರ ಇಲ್ಲ ಆದರೆ ತುಂಬಾ ಸಲುಗೆಯಿಂದ ಬೆಳೆದಿದ್ದೀವಿ. ನಮ್ಮ ನಡುವೆ ಯಾವಾಗ ಜಗಳ ಆಯ್ತು ಅಂತ ಕೇಳಿದರೆ ನಮಗೆ ನೆನಪು ಇರುವುದಿಲ್ಲ.

58

ನಮ್ಮ ನಡುವೆ ಸಣ್ಣ ಪುಟ್ಟ ಜಗಳು ಇತ್ತೇನೋ ಆ ಟೈಮ್‌ನಲ್ಲಿ ಆದರೆ ಒಬ್ಬರಿಗೊಬ್ಬರು ಅಷ್ಟು ಕ್ಲೋಸ್ ಆಗಿದ್ದೀವಿ. ಎಲ್ಲರಿಗಿಂತ ಮುರಳಿ ಚಿಕ್ಕವನು ಆದರೆ ನಮ್ಮನ್ನು ಪ್ರೊಟೆಕ್ಟ್‌ ಮಾಡುವ ಸ್ಥಾನ ತೆಗೆದುಕೊಳ್ಳುತ್ತಾನೆ.

68

ನನ್ನ ಸುತ್ತ ಮುರಳಿ ಒಂದು ಕೋಟಿ ಇದ್ದ ರೀತಿ. ಮನಸ್ಸಿನೊಳಗೆ ನನ್ನನ್ನು ತುಂಬಾ ಗೌರವಿಸುತ್ತಾನೆ ಎಂದೂ ಎದುರಿಗೆ ಹೇಳಿಕೊಂಡಿಲ್ಲ. ನಾನು ಅದೃಷ್ಟ ಮಾಡಿದ್ದೀವಿ ಸ್ನೇಹಿತರ ರೀತಿ ಇದ್ದೀವಿ. 

78

ಇತ್ತೀಚಿನ ದಿನಗಳ ಪಾಪ ಅವನು ಏನೂ ಮಾತನಾಡುವುದು ಬೇಡ..ನನ್ನ ಹೆಗಲ ಮೇಲೆ ಕೈ ಇಟ್ಟರೆ ಸಾಕು ಗೊತ್ತಾಗುತ್ತದೆ ಮನಸ್ಸಿನಲ್ಲಿ ಎಷ್ಟು ಭಾರ ಇದೆ ಅನ್ನೋದು.

88

ಹುಟ್ಟಿದಾಗಿನಿಂದ ಇದುವರೆಗೂ ನಾವು ಒಂದೇ ರೀತಿ ಇದ್ದೀವಿ..ಮೂರು ತಿಂಗಳುಗಳ ಕಾಲ ಭೇಟಿ ಮಾಡಿಲ್ಲ ಅಂದ್ರೂ ಮರು ದಿನ ಒಂದೇ ರೀತಿಯಲ್ಲಿ ಮಾತನಾಡಿರುತ್ತೀವಿ. 

Read more Photos on
click me!

Recommended Stories