ಇನ್ನೂ ಜಾರಿಯಾಗದ ಏಕರೂಪದ ಟ್ಯಾಕ್ಸಿ ದರ: ಆದೇಶ ಜಾರಿಗೆ ಮುಂದಾಗದ ಸಾರಿಗೆ ಇಲಾಖೆ

Published : May 13, 2024, 11:18 AM IST
ಇನ್ನೂ ಜಾರಿಯಾಗದ ಏಕರೂಪದ ಟ್ಯಾಕ್ಸಿ ದರ: ಆದೇಶ ಜಾರಿಗೆ ಮುಂದಾಗದ ಸಾರಿಗೆ ಇಲಾಖೆ

ಸಾರಾಂಶ

ಸಿಟಿ ಟ್ಯಾಕ್ಸಿಗಳು ಪ್ರಯಾಣಿಕರಿಂದ ಮಾಡುತ್ತಿರುವ ಸುಲಿಗೆಯನ್ನು ತಪ್ಪಿಸಲು ಸಾರಿಗೆ ಇಲಾಖೆ ಕಳೆದ ಫೆಬ್ರವರಿಯಲ್ಲಿ 'ಒನ್ ಸಿಟಿ ಒನ್ ರೇಟ್' (ಒಂದು ನಗರ ಒಂದು ದರ) ಅಡಿಯಲ್ಲಿ ಎಲ್ಲ ರೀತಿಯ ಟ್ಯಾಕ್ಸಿ ಗಳು ಏಕರೂಪ ದರ ಪಡೆಯುವಂತೆ ಆದೇಶಿಸಿತ್ತು.

ಗಿರೀಶ್ ಗರಗ

ಬೆಂಗಳೂರು (ಮೇ.13): ಸಿಟಿ ಟ್ಯಾಕ್ಸಿಗಳು ಪ್ರಯಾಣಿಕರಿಂದ ಮಾಡುತ್ತಿರುವ ಸುಲಿಗೆಯನ್ನು ತಪ್ಪಿಸಲು ಸಾರಿಗೆ ಇಲಾಖೆ ಕಳೆದ ಫೆಬ್ರವರಿಯಲ್ಲಿ 'ಒನ್ ಸಿಟಿ ಒನ್ ರೇಟ್' (ಒಂದು ನಗರ ಒಂದು ದರ) ಅಡಿಯಲ್ಲಿ ಎಲ್ಲ ರೀತಿಯ ಟ್ಯಾಕ್ಸಿ ಗಳು ಏಕರೂಪ ದರ ಪಡೆಯುವಂತೆ ಆದೇಶಿಸಿತ್ತು. ಆದರೆ, ಈ ಆದೇಶವನ್ನು ಜಾರಿ ಮಾಡಲು ಸಾರಿಗೆ ಇಲಾಖೆ ಮುಂದಾಗದ ಕಾರಣ ಪ್ರಯಾಣಿಕರ ಸುಲಿಗೆ ಹಾಗೆಯೇ ಮುಂದುವರಿಯುವಂತಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲ ನಗರಗಳ ವ್ಯಾಪ್ತಿಯಲ್ಲಿ ಸಾರಿಗೆ ಸೇವೆ ನೀಡುವ ಆ್ಯಪ್ ಆಧಾರಿತ ಸಿಟಿ ಟ್ಯಾಕ್ಸಿಗಳು ಬೇಕಾಬಿಟ್ಟಿಯಾಗಿ ದರ ವಸೂಲಿಯನ್ನು ತಡೆಯುವ ಸಲುವಾಗಿ ಸಾರಿಗೆ ಇಲಾಖೆ ಕಳೆದ ಫೆ.3ರಂದು ಒನ್ ಸಿಟಿ ಒನ್‌ ರೇಟ್ ಅಡಿಯಲ್ಲಿ ದರ ನಿಗದಿ ಮಾಡಿ ಆದೇಶಿಸಿದೆ. 

ಈ ಆದೇಶದಂತೆ ನಗರ ವ್ಯಾಪ್ತಿಯಲ್ಲಿ ಮಾಮೂಲಿ ಸೇವೆ ನೀಡುವ ಟ್ಯಾಕ್ಸಿಗಳು, ಆ್ಯಪ್ ಆಧಾರದಲ್ಲಿ ಸೇವೆ ನೀಡುವ ಅಗ್ರಿಗೇಟರ್‌ಗಳು ಸೇರಿದಂತೆ ಎಲ್ಲರೂ ಪ್ರಯಾಣಿಕ ರಿಂದ ಒಂದೇ ರೀತಿಯ ದರ ವಸೂಲಿ ಮಾಡಬೇಕು ಎಂದು ತಿಳಿಸಲಾಗಿದೆ. ಆದರೆ, ಈ ಆದೇಶ ಮಾಡಿ 100 ದಿನಗಳಾದರೂ ಅದನ್ನು ಜಾರಿಮಾಡಲುಸಾರಿಗೆ ಇಲಾಖೆ ಮುಂದಾಗಿಲ್ಲ. ಹೀಗಾಗಿ ಕೆಲ ಆ್ಯಪ್ ಆಧಾರಿತ ಅಗ್ರಿಗೇಟರ್‌ಗಳು ಸಮಯಕ್ಕೆ ತಕ್ಕಂತೆ ವಿಭಿನ್ನ ದರ ವಸೂಲಿ ಮಾಡುತ್ತಾ ಪ್ರಯಾಣಿಕರನ್ನು ಸುಲಿಗೆ ಮಾಡುವುದು ಮುಂದುವರಿದಿದೆ.

ಪ್ರೇತ ಮದುವೆ’ಗೆ ಪ್ರೇತ ವರ ಬೇಕಾಗಿದ್ದಾರೆ: ಚರ್ಚೆಗೆ ಕಾರಣವಾದ ಜಾಹೀರಾತು!

ಪ್ರಯಾಣಿಕರ ಒತ್ತಡ ಆಧರಿಸಿ ದರ ವಸೂಲಿ: ಸದ್ಯ ನಗರದಲ್ಲಿ ಸೇವೆ ನೀಡುವ ಟ್ಯಾಕ್ಸಿಗಳಿಗೆ ಯಾವುದೇ ರೀತಿಯ ನಿಗದಿತ ದರವಿಲ್ಲ. ಬೆಂಗಳೂರಿನಲ್ಲಿ ವಿಮಾನ ನಿಲ್ದಾಣಕ್ಕೆಸೇವೆನೀಡುವಟ್ಯಾಕ್ಸಿಗಳನ್ನು ಹೊರತುಪಡಿಸಿ ಉಳಿದ ಆ್ಯಪ್ ಆಧಾರಿತ ಸೇವೆ ನೀಡುವ ಟ್ಯಾಕ್ಸಿಗಳು ತಮಗೆ ಇಷ್ಟ ಬಂದಂತೆ ಸೇವೆ ನೀಡುತ್ತವೆ. ಅದರಲ್ಲೂ ಪ್ರಯಾಣಿಕರ ಒತ್ತಡ ಹೆಚ್ಚಿರುವ ವೇಳೆ, ಮಳೆಗಾಲದ ಸಂದರ್ಭದಲ್ಲಿ ತಮ್ಮ ದರವನ್ನು ಏಕಾಏಕಿ ಹೆಚ್ಚಿಸಿಕೊಳ್ಳುತ್ತವೆ. ಪ್ರಯಾಣಿಕರ ಒತ್ತಡ ಹೆಚ್ಚಿರುವ ಸಂದರ್ಭದಲ್ಲಿ ಪ್ರತಿ ಕಿಮೀಗೆ 40ರಿಂದ 50 ರು.ವರೆಗೆ ಪ್ರಯಾಣ ದರ ವಸೂಲಿ ಮಾಡಲಾಗುತ್ತಿದೆ. ಹೀಗೆ ವಸೂಲಿ ಮಾಡುವ ಹೆಚ್ಚಿನ ಹಣವನ್ನು ಟ್ಯಾಕ್ಸಿ ಚಾಲಕ ಅಥವಾ ಮಾಲೀಕ ರಿಗೂ ನೀಡುವುದಿಲ್ಲ. ಬದಲಿಗೆ ಅಗ್ರಿಗೇಟರ್‌ಗಳೇ ಅ ದನ್ನು ಇಟ್ಟುಕೊಳ್ಳುತ್ತವೆ. ಇದಕ್ಕೆ ಕಡಿವಾಣ ಹಾಕ ಲೆಂದೇ ಒನ್‌ಸಿಟಿ, ಒನ್‌ರೇಟ್ ಆದೇಶಿಸಲಾಗಿತ್ತು.

ಈ ತಿಂಗಳಾಂತ್ಯಕ್ಕೆ ಜಾರಿ?: ಒನ್ ಸಿಟಿ ಒನ್ ರೇಟ್ ಜಾರಿಯಾಗದ ಕುರಿತಂತೆ ಸಾರಿಗೆ ಇಲಾಖೆ ಅಧಿಕಾರಿಗ ಳನ್ನು ಕೇಳಿದರೆ, ಕೆಲ ಆ್ಯಪ್ ಆಧಾರಿತ ಸೇವೆ ನೀಡುತ್ತಿ ರುವ ಅಗ್ರಿಗೇಟರ್‌ಗಳಿಗೆ ಸಂಬಂಧಿಸಿದ ಪ್ರಕರಣಗಳು ನ್ಯಾಯಾಲಯದಲ್ಲಿವೆ. ಆದರೂ, ಈ ತಿಂಗಳ ಅಂತ್ಯದೊಳಗೆ ಒನ್ ಸಿಟಿ ಒನ್ ರೇಟ್ ಸಮರ್ಪಕ ಜಾರಿಗೆ ಕ್ರಮ ವಹಿಸಲಾಗುವುದು. ಜತೆಗೆ ಒನ್ ಸಿಟಿ ಒನ್ ರೇಟ್ ಅಡಿಯಲ್ಲಿ ದರ ವಸೂಲಿ ಮಾಡದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬು ದನ್ನೂ ನಿರ್ಧರಿಸಲಾಗುವುದು ಎಂದು ಹೇಳುತ್ತಾರೆ. 

ಮನುಷ್ಯರಿಗೆ ಬೆರಳಚ್ಚಿನ ರೀತಿ ಪ್ರಾಣಿಗಳ ಮಾಹಿತಿಗೆ ಮೂಗಿನ ಅಚ್ಚು!

ನಗರ ಟ್ಯಾಕ್ಸಿಗಳು ಪ್ರಯಾಣಿಕರಿಂದ ಹೆಚ್ಚಿನ ದರ ವಸೂಲಿ ಮಾಡುವುದನ್ನು ತಡೆಯಲು ಸಾರಿಗೆ ಇಲಾಖೆ ಒನ್ ಸಿಟಿ ಒನ್ ರೇಟ್ ಆದೇಶಿಸಿದೆ. ಆದರೆ, ಆ ಆದೇಶ ಮಾಡಿ 100 ದಿನಗಳಾದರೂ ಅದನ್ನು ಜಾರಿಗೊಳಿಸಿಲ್ಲ. ಈ ಬಗ್ಗೆ ಸಾರಿಗೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿ ದ್ದಾರೆ. ಹೀಗಾಗಿ ಆ್ಯಪ್ ಆಧಾರಿತ ಸೇವೆ ನೀಡುವ ಅಗ್ರಿಗೇಟರ್‌ಗಳು ಪ್ರಯಾಣಿಕರಿಂದ ಬೇಕಾಬಿಟ್ಟಿ ಯಾಗಿ ದರ ವಸೂಲಿ ಮಾಡುತ್ತಿದ್ದಾರೆ. ಇದನ್ನು ತಡೆಯಲು ಶೀಘ್ರದಲ್ಲಿ ಒನ್ ಸಿಟಿ ಒನ್ ರೇಟ್ ಜಾರಿಗೊಳಿಸಬೇಕು.
-ಜಯಣ್ಣ ಭಾರತ್ ಸಾರಿಗೆ ಸಂಘ ಸಮೂಹದ ಅಧ್ಯಕ್ಷ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಸೇವೆಯಲ್ಲಿಯೇ ಸಾರ್ಥಕತೆ ಪಡೆಯುವ ಗೃಹ ರಕ್ಷಕರು
ನೊಂದವರಿಗೆ ನ್ಯಾಯ ಕೊಡಿಸುವಲ್ಲಿ ರಾಜ್ಯ ಮೊದಲ ಸ್ಥಾನ: ಗೃಹಸಚಿವ ಪರಮೇಶ್ವರ್