ಸೀತಾರಾಮ ನಟಿ ವೈಷ್ಣವಿ ಗೌಡ ಮಾಡಿದ ತಪ್ಪಿಗೆ ನೊಟೀಸ್‌ ಕೊಟ್ಟು ಬೆಂಗಳೂರು ಪೊಲೀಸರ ವಾರ್ನಿಂಗ್!

First Published | May 13, 2024, 11:32 AM IST

ತೆರೆಯ ಮೇಲೆ ಮಾತ್ರವಲ್ಲ ನಿಜ ಜೀವನದಲ್ಲಿ ಕೂಡ ಯಾವುದೇ ಸೆಲೆಬ್ರಿಟಿ, ಪ್ರಭಾವಿ ವ್ಯಕ್ತಿಗಳು ನಿಯಮಗಳನ್ನು ಅಚ್ಚುಕಟ್ಟಾಗಿ ಪಾಲಿಸಿ ಇತರರಿಗೆ ಆದರ್ಶವಾಗಿರಬೇಕು. ಇದೀಗ  ಕಿರುತೆರೆಯ ಜನಪ್ರಿಯ ನಟಿ ವೈಷ್ಣವಿ ಗೌಡಗೆ ಕೂಡ ಆಗಿರುವುದು ಅದೇ.

 ಸಂಚಾರ ನಿಯಮವನ್ನು ಪಾಲಿಸದೇ ಇದ್ದುದ್ದಕ್ಕೆ  ಬೆಂಗಳೂರು ಸಂಚಾರಿ  ಪೊಲೀಸರು ಶಾಕ್‌ ಕೊಟ್ಟಿದ್ದಾರೆ. ಜನಪ್ರಿಯ ಧಾರವಾಹಿ ಸೀತಾ ರಾಮ ನಟಿ ವೈಷ್ಣವಿ ಗೌಡ ಅವರು ಸೀರಿಯಲ್ ಪಾತ್ರದಲ್ಲಿರುವಾಗ ನಿಯಮ ಉಲ್ಲಂಘನೆ ಮಾಡಿದ್ದಕ್ಕೆ ನಿಜ ಜೀವನದಲ್ಲಿ ಸಂಕಷ್ಟ ಎದುರಿಸುವಂತಾಗಿದೆ.

ನಟಿ ವೈಷ್ಣವಿ ಗೌಡ ಅವರು ಸೀತಾ ಪಾತ್ರದಲ್ಲಿರುವಾಗ ಟ್ರಾಫಿಕ್ ನಿಯಮ ಉಲ್ಲಂಘಿಸಿದ್ದಾರೆ ಎಂಬ ಆರೋಪದ ಅಡಿಯಲ್ಲಿ ದಂಡ ಕಟ್ಟುವಂತೆ ಪೊಲೀಸ್‌ ಇಲಾಖೆ ನೋಟಿಸ್‌ ನೀಡಿದೆ.

Tap to resize

 ಧಾರವಾಹಿಯಲ್ಲಿ ಸೀತಾ ಪಾತ್ರದಲ್ಲಿ ಇದ್ದಾಗ ಸ್ನೇಹಿತೆ ಜೊತೆ ಬೈಕ್‌ನಲ್ಲಿ ಪ್ರಯಾಣ ಮಾಡುವಾಗ ಹೆಲ್ಮೆಟ್ ಧರಿಸದ ಕಾರಣ ಪೊಲೀಸರ ನೋಟಿಸ್‌ ಗೆ ಉತ್ತರಿಸಬೇಕಾದ ಪರಿಸ್ಥಿತಿ ಎದುರಾಯ್ತು.

 ಜಯಪ್ರಕಾಶ್ ಎಕ್ಕೂರು ಎಂಬ ಸಾಮಾಜಿಕ ಹೋರಾಟಗಾರರೊಬ್ಬರು, ಧಾರವಾಹಿಯಲ್ಲಿ ಹೆಲ್ಮೆಟ್ ಇಲ್ಲದೆ ಸೀತಾ ಪ್ರಯಾಣ ಮಾಡುವುದನ್ನು ಗಮನಿಸಿದ್ದಾರೆ. ಕೂಡಲೇ ಮಂಗಳೂರು ನಗರ ಪೊಲೀಸರನ್ನು ಭೇಟಿ ಮಾಡಿ ನಟ-ನಟಿಯರು ಈ ರೀತಿ ಮಾಡುವುದರಿಂದ ಸಮಾಜಕ್ಕೆ ತಪ್ಪು ಸಂದೇಶ ರವಾನೆ ಆಗುತ್ತಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

 ಈ ಧಾರವಾಹಿಯ ನಟಿ, ನಿರ್ದೇಶಕ ಮತ್ತು ಪ್ರಸಾರ ಮಾಡಿದ ಝೀ ವಾಹಿನಿ ಮೇಲೆ ಕ್ರಮ ಜರುಗಿಸಬೇಕು ಎಂದು ಜಯಪ್ರಕಾಶ್ ಎಕ್ಕೂರು ಒತ್ತಾಯಿಸಿದ್ದರು. ದೂರು ಸ್ವೀಕರಿಸಿದ ಮಂಗಳೂರು ಪೊಲೀಸರು ಬಳಿಕ ಮಂಗಳೂರು ಪೂರ್ವ ಸಂಚಾರ ಠಾಣೆಗೆ ಪ್ರಕರಣವನ್ನು  ವರ್ಗಾವಣೆ ಮಾಡಿದ್ದರು. ಬಳಿಕ ಜೀ ವಾಹಿನಿ ಮತ್ತು ನಟಿ ವೈಷ್ಣವಿ ಗೌಡ ಅವರಿಗೆ ಪೊಲೀಸ್‌ ನೋಟಿಸ್ ಜಾರಿ ಮಾಡಲಾಗಿತ್ತು.

 ಧಾರವಾಹಿ ಚಿತ್ರೀಕರಣವು ಬೆಂಗಳೂರಿನ ನಂದಿನಿ ಲೇಔಟ್‌ನಲ್ಲಿ ನಡೆದಿದ್ದರಿಂದ ಈ ಪ್ರಕರಣವನ್ನು ರಾಜಾಜಿನಗರ ಪೊಲೀಸ್ ಠಾಣೆಗೆ  ವರ್ಗಾವಣೆ ಮಾಡಲಾಯ್ತು.

 ಈಗ  ನಟಿ ವೈಷ್ಣವಿ ಗೌಡ ಅವರಿಗೆ ವಾರ್ನಿಂಗ್ ಮಾಡಿ ಕಳಿಸಿದ್ದು, ದ್ವಿಚಕ್ರ ವಾಹನದ ಮಾಲಕಿ ಸವಿತಾ ಎಂಬವರಿಗೆ ಸಂಚಾರ ಪೊಲೀಸರು 500 ರೂ ದಂಡ ವಿಧಿಸಿದ್ದಾರೆ ಎಂದು ತಿಳಿದುಬಂದಿದೆ.

Latest Videos

click me!