Air Show 2023; ಏರ್ ಶೋ ವೀಕ್ಷಿಸಿದ ಬಾಲಿವುಡ್ ಖ್ಯಾತ ನಟ ಸುನಿಲ್ ಶೆಟ್ಟಿ

Feb 15, 2023, 5:56 PM IST

ಕರ್ನಾಟಕ ಮೂಲದ, ಬಾಲಿವುಡ್ ಖ್ಯಾತ ನಟ ಸುನಿಲ್ ಶೆಟ್ಟಿ ಬೆಂಗಳೂರಿನಲ್ಲಿ ನಡೆಯುತ್ತಿರುವ ಏರ್‌ಶೋನಲ್ಲಿ ಕಾಣಿಸಿಕೊಂಡರು. ಇಂದು (ಫೆಬ್ರವರಿ 15) 3ನೇ ದಿನದ ಏರ್ ಶೋ ನಡೆಯುತ್ತಿದೆ.  ಬೆಂಗಳೂರಿನ ಯಲಹಂಕ ಏರ್​ಬೇಸ್​ನಲ್ಲಿ 2023ರ 14ನೇ ಆವೃತ್ತಿಯ ವೈಮಾನಿಕ ಪ್ರದರ್ಶನಕ್ಕೆ ಸುನಿಲ್ ಶೆಟ್ಟಿ ಹಾಜರಾಗಿದ್ದು ವಿಶೇಷವಾಗಿತ್ತು. ವರ್ಷಕ್ಕೊಮ್ಮೆ ನಡೆಯುವ ಏರ್ ಶೋ ಅನ್ನು ಅನೇಕರು ಕಣ್ತುಬಿಕೊಂಡರು. ಸುನಿಲ್ ಶೆಟ್ಟಿ ಕೂಡ ಆಗಮಿಸಿ ಕೆಲವು ಸಮಯ ಏರ್ ಶೋ ವೀಕ್ಷಿಸಿ ಸಂತಸ ಪಟ್ಟರು. ಇತ್ತೀಚಿಗಷ್ಟೆ ಮಗಳ ಮದುವೆ ಮಾಡಿ ಸಂಭ್ರಮಿಸಿದ್ದ ಸುನಿಲ್ ಶೆಟ್ಟಿ ಸದ್ಯ ಏರ್ ಶೋನಲ್ಲಿ ಕಾಣಿಸಿಕೊಳ್ಳುವ ಮೂಲಕ ಬೆಂಗಳೂರಿನಲ್ಲಿದ್ದಾರೆ.