ಕೃತಿ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ Bhat N Bhat ಖ್ಯಾತಿಯ ಸುದರ್ಶನ್ ಭಟ್

First Published | Oct 4, 2024, 6:58 PM IST

ಭಟ್ ಎನ್ ಭಟ್ ಯೂಟ್ಯೂಬ್ ಚಾನೆಲ್ ಮೂಲಕ ಕರಾವಳಿಯ ಅಡುಗೆಗಳ ಬಗ್ಗೆ ತಮ್ಮ ವಿಭಿನ್ನ ನಿರೂಪಣೆ ಮಾಡುತ್ತಾ, ಅಡುಗೆ ಮಾಡುತ್ತಿದ್ದ ವಕೀಲ ಸುದರ್ಶನ್ ಭಟ್ ಬೆದ್ರಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. 
 

ವಿವಿಧ ರೀತಿಯ ಆಹಾರಗಳನ್ನು ತಮ್ಮದೇ ಶೈಲಿಯ ನಿರೂಪಣೆಯೊಂದಿಗೆ ತಯಾರಿಸುತ್ತಾ, ಕನ್ನಡಿಗರ ಮನಗೆದ್ದಿದ್ದ ಭಟ್ ಎನ್ ಭಟ್ (Bhat N Bhat) ಹೆಸರಿನ ಯೂಟ್ಯೂಬ್ ಖ್ಯಾತಿಯ ಸುದರ್ಶನ್ ಭಟ್ ಬೆದ್ರಡಿ ಇಂದು ಕೃತಿ ಎನ್ನುವವರ ಜತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. 
 

ವೃತ್ತಿಯಲ್ಲಿ ವಕೀಲರಾಗಿರುವ ಸುದರ್ಶನ್ ಭಟ್ (Sudarshan Bhat Bedradi), ಪ್ರವೃತ್ತಿಯಲ್ಲಿ ಒಳ್ಳೆಯ ಅಡುಗೆ ಭಟ್ಟರು ಆಗಿದ್ರು. ಇಂದು ಸುದರ್ಶನ್ ಪುತ್ತೂರು ಹವ್ಯಾಕ ಸಭಾ ಭವನದಲ್ಲಿ ಕುಟುಂಬದವರ ಸಮ್ಮುಖದಲ್ಲಿ ವೃತ್ತಿಯಲ್ಲಿ ಶಿಕ್ಷಕಿಯಾಗಿರುವ ಕೃತಿ ಎನ್ನುವವರ ಜೊತೆ ಸಪ್ತಪದಿ ತುಳಿದಿದ್ದಾರೆ. 
 

Tap to resize

ಸುದರ್ಶನ್ ನಿಶ್ಚಿತಾರ್ಥ ಆಗಸ್ಟ್ ತಿಂಗಳಿನಲ್ಲಿ ನಡೆದಿತ್ತು. ಇತ್ತೀಚೆಗೆ ಇವರಿಬ್ಬರ ವಿಭಿನ್ನವಾದ ಪ್ರೀ ವೆಡ್ಡಿಂಗ್ ಫೋಟೊ ಶೂಟ್ (pre wedding photoshoot) ಭಾರಿ ಸದ್ದು ಮಾಡಿತ್ತು. ಈ ಜನುಮವೇ ದೊರೆಕಿದೆ ರುಚಿ ಸವಿಯಲು ಹಾಡಿಗೆ ಇಬ್ಬರು ಕುಚ್ಚಿಲಕ್ಕಿ ಗಂಜಿ ಮಾಡಿ, ಬಾಳೆ ಹೂವಿನ ಚಟ್ನಿ ಮಾಡಿ ತಿನ್ನುವ ವಿಡಿಯೋ ಸಖತ್ ವೈರಲ್ ಆಗಿತ್ತು. 
 

ಅಷ್ಟೇ ಅಲ್ಲ, ಇವರ ಪತ್ನಿ ಶಿಕ್ಷಕಿಯಾಗಿರೋದರಿಂದ ಶಾಲೆಯಲ್ಲಿಯೂ ಒಂದು ಪ್ರೀ ವೆಡ್ಡಿಂಗ್ ಶೂಟ್ ಮಾಡಿಸಿದ್ದು, ಆ ಮೂಲಕ ಮದುವೆ ಡೇಟ್ ರಿವೀಲ್ ಮಾಡಿದ್ದರು. ಆ ವಿಡಿಯೋ ಕೂಡ ಜನರಿಗೆ ಇಷ್ಟವಾಗಿತ್ತು. ಹೆಚ್ಚಾಗಿ ಗ್ರಾಮೀಣ ಪ್ರದೇಶದಲ್ಲಿಯೇ ಅಡುಗೆ ಮಾಡಿ ತೋರಿಸುವ ಸುದರ್ಶನ್ ಅವರ ಪ್ರಿ ವೆಡ್ಡಿಂಗ್ ಶೂಟ್ ಗಳು ಸಹ ಗ್ರಾಮೀಣ ಪ್ರದೇಶಗಳಲ್ಲಿ ನಡೆದಿದ್ದು, ಜನರಿಗೆ ಸಖತ್ ಇಷ್ಟವಾಗಿತ್ತು. 
 

ರುಚಿರುಚಿಯಾದ ಅಡುಗೆ ಮಾಡುವ ಮೂಲಕ ನೋಡುಗರ ಬಾಯಲ್ಲಿ ನೀರೂವಂತೆ ಮಾಡುವ ಸುದರ್ಶನ್ ಭಟ್ ಅವರ ಕೈಹಿಡಿಯಲು ಹುಡುಗಿ ಅದೃಷ್ಟ ಮಾಡಿರಬೇಕೆಂದು ಎಂದು ಈಗಾಗಲೇ ಜನ ಹೇಳ್ತಿದ್ದಾರೆ. ಅದು ನಿಜಾ ಅಂತ ಎಲ್ಲರಿಗೂ ಗೊತ್ತಿದೆ. 
 

ಇನ್ನು ಸುದರ್ಶನ್ ಭಟ್, ಕಾಸರಗೋಡಿದ ಸೀತಂಗೋಳಿಯವರು.ಸಹೋದರ ಮನೋಹರ್ ಭಟ್ ಜೊತೆ ಸೇರಿ ಕೊರೊನಾ ಸಂದರ್ಭದಲ್ಲಿ 'ಭಟ್ ಎನ್ ಭಟ್' ಚಾನೆಲ್ ಶುರು ಮಾಡಿದ್ದು ಈಗ ವಿದೇಶದಲ್ಲೂ ಪ್ರಸಿದ್ಧಿ ಪಡೆದಿದ್ದಾರೆ. ಅಷ್ಟೇ ಅಲ್ಲ ತಮ್ಮ ಕೈರುಚಿಯ ಸಾಂಬಾರ್ ಪುಡಿ, ಮತ್ತಿತರ ಪುಡಿಗಳನ್ನು ಮಾರಾಟ ಮಾಡೋದಕ್ಕೆ 'ಭಟ್ ಎನ್ ಭಟ್'  ಔಟ್ ಲೆಟ್ ಕೂಡ ತೆರೆದಿದ್ದಾರೆ ಸುದರ್ಶನ್. 
 

Latest Videos

click me!