ಸುಸಾನೆ ಖಾನ್ ಜೊತೆಗಿನ ವಿಚ್ಛೇದನದ ಬಳಿಕ ಹೃತಿಕ್ ರೋಷನ್ ಹೆಸರು ಯಾರೊಂದಿಗೂ ತಳುಕು ಹಾಕಿಕೊಂಡಿರಲಿಲ್ಲ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಹೃತಿಕ್ ರೋಷನ್ ಹೊಸ ಗರ್ಲ್ಫ್ರೆಂಡ್ ವಿಚಾರ ಸಖತ್ ವೈರಲ್ ಆಗಿದೆ.
ಸುಸಾನೆ ಖಾನ್ ಜೊತೆಗಿನ ವಿಚ್ಛೇದನದ ಬಳಿಕ ಹೃತಿಕ್ ರೋಷನ್ (Hrithik Roshan) ಹೆಸರು ಯಾರೊಂದಿಗೂ ತಳುಕು ಹಾಕಿಕೊಂಡಿರಲಿಲ್ಲ. ಇದೀಗ ಸಾಮಾಜಿಕ ಜಾಲತಾಣದಲ್ಲಿ (Social Media) ಹೃತಿಕ್ ರೋಷನ್ ಹೊಸ ಗರ್ಲ್ಫ್ರೆಂಡ್ ವಿಚಾರ ಸಖತ್ ವೈರಲ್ (Viral) ಆಗಿದೆ. ಹೌದು! ಹೃತಿಕ್ ರೋಷನ್ ಸಿನಿಮಾ ನಟಿ ಸಬಾ ಆಜಾದ್ (Saba Azad) ಅವರೊಂದಿಗೆ ಹೊಟೇಲ್‌ನಿಂದ ಕೈ ಕೈ ಹಿಡಿದುಕೊಂಡು ಬಂದಿದ್ದು, ಇಬ್ಬರೂ ಪ್ರೀತಿಯಲ್ಲಿ ಬಿದ್ದಿದ್ದಾರೆ ಅನ್ನುವ ಗುಸುಗುಸು ಬಾಲಿವುಡ್‌ನಲ್ಲಿ (Bollywood) ಹಬ್ಬಿದೆ.
Salman Khan: ಬಿಗ್‌ಬಾಸ್ ವೇದಿಕೆ ಮೇಲೆ ಶುಕ್ಲಾ ನೆನೆದು ಕಣ್ಣೀರಿಟ್ಟ ಬಾಲಿವುಡ್ ಸುಲ್ತಾನ್
ಈ ಯುವ ನಟಿಯ ಜತೆಗೆ ಹೃತಿಕ್ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗಿದ್ದು, ಈ ಬಗ್ಗೆ ಅವರಿಂದ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ. ಇನ್ನು ಸಿನಿಮಾ ವಿಚಾರಕ್ಕೆ ಬರೋದಾದರೆ, ‘ವಿಕ್ರಮ್ ವೇದ’ (Vikram Veda) ಸಿನಿಮಾದಲ್ಲಿ ಹೃತಿಕ್ ಬ್ಯುಸಿ ಆಗಿದ್ದು, ವೇದ ಎಂಬ ಗ್ಯಾಂಗ್ಸ್ಟರ್ ಆಗಿ ಹೃತಿಕ್ ರೋಷನ್ ಕಾಣಿಸಿಕೊಳ್ಳುತ್ತಿದ್ದಾರೆ.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment