ಬೆಂಗಳೂರು ಹುಡುಗಿ ಕೈಹಿಡಿದ ನಾಗ ಶೌರ್ಯ: ಈ ಅನುಷಾ ಶೆಟ್ಟಿ ಯಾರ ಅಕ್ಕ ಗೊತ್ತಾ?

Nov 22, 2022, 2:58 PM IST

ಟಾಲಿವುಡ್‌'ನಲ್ಲಿ ಸಧ್ಯ ತೆಲುಗು ನಟ ನಾಗ ಶೌರ್ಯ ಮತ್ತು ಕನ್ನಡತಿ ಅನುಷಾ ಶೆಟ್ಟಿ ಅವರದ್ದೇ ಸುದ್ದಿ. ಅವರು ಕನ್ನಡದ ಹುಡುಗಿಯನ್ನು ಮದುವೆಯಾಗಿರುವ ಬೆನ್ನಲ್ಲೇ, ಮತ್ತೊಂದು ಇಂಟ್ರೆಸ್ಟಿಂಗ್ ಸುದ್ದಿಯೊಂದು ಹೊರಬಿದ್ದಿದೆ. ನಾಗ್ ಪತ್ನಿ ಅನುಷಾ ಕನ್ನಡದ ಹುಡುಗಿ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಅನುಷಾ ಯಾರ ಸಹೋದರಿ ಎಂಬುದು ಹಲವರಿಗೆ ತಿಳಿದಿಲ್ಲ. ಕನ್ನಡದ ಪ್ರತಿಭಾನ್ವಿತ ನಟ ಕಮ್ ನಿರ್ದೇಶಕ ಅಭಿಷೇಕ್ ಶೆಟ್ಟಿ ಅವರ ಅಕ್ಕ ಅನುಷಾ. ನಮ್ ಗಣಿ ಬಿಕಾಂ ಪಾಸ್’ ಚಿತ್ರದ ಮೂಲಕ ನಟ, ನಿರ್ದೇಶಕನಾಗಿ ಗುರುತಿಸಿಕೊಂಡಿದ್ದ ಅಭಿಷೇಕ್, ಇತ್ತೀಚೆಗಷ್ಟೇ ಗಜಾನನ ಗ್ಯಾಂಗ್’ ಸಿನಿಮಾಗೆ ನಿರ್ದೇಶನ ಕೂಡ ಮಾಡಿದ್ದರು.