ಆದಿಪುರುಷ್ ಬಳಿಕ ಸಂಕಷ್ಟದಲ್ಲಿ ಅಕ್ಷಯ್ 'ಓ ಮೈಗಾಡ್' : ಸಿನಿಮಾ ರಿಜೆಕ್ಟ್ ಮಾಡಿದ ಸೆನ್ಸಾರ್ ಮಂಡಳಿ

Jul 16, 2023, 6:16 PM IST

ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ ಸಿನಿಮಾಗೆ ದೊಡ್ಡ ಸಂಕಷ್ಟ ಎದುರಾಗಿದೆ. ಆ ಸಂಕಷ್ಟ ನೋಡಿ ಅಕ್ಕಿ ಓ ಮೈ ಗಾಡ್ ಅಂತ ಹೇಳ್ತಿದ್ದಾರೆ. ಅರೆ ಓ ಮೈ ಗಾಡ್ ಅಕ್ಷಯ್ ಕುಮಾರ್ ನಟನೆಯ ಸಿನಿಮಾದ ಟೈಟಲ್ ಅಲ್ವಾ.? ಇದನ್ಯಾಕೆ ಅಕ್ಕಿ ಹೇಳ್ತಿದ್ದಾರೆ ಅಂತೀರಾ.? ಅದಕ್ಕೆ ಕಾರಣ ಅಕ್ಕಿಯ ಓ ಮೈ ಗಾಡ್ ಗೆ ಸೆನ್ಸಾರ್ ಮಂಡಳಿ ಕೊಟ್ಟಿರೋ ರಿಜೆಕ್ಟ್ ನೋಟೀಸ್.  ಧರ್ಮ ದೇವರು ಪವಿತ್ರಗ್ರಂಥಗಳ ಹಿನ್ನೆಲೆಯಲ್ಲಿ ಸಿನಿಮಾ ಮಾಡಿದ್ರೆ ಹಿಂದಿನಂತಲ್ಲ.. ಜನ ತಕ್ಷಣ ಎಚ್ಚೆತ್ತುಕೊಂಡು ಬಿಡುತ್ತಾರೆ. ಸಿನಿಮಾ ರಿಲೀಸ್ಗೆ ಅವಕಾಶವನ್ನೆ ಕೊಡೊಲ್ಲ. ಆದಿಪುರುಷ್ ಸಿನಿಮಾದಲ್ಲಿ ರಾಮಾಯಣ ಕತೆಯನ್ನೆ  ತಿರುಚಲಾಗಿದೆ ಎಂದು ವಿರೋಧ ವ್ಯಕ್ತವಾಗಿತ್ತು. ಜನ ಸಿನಿಮಾ ವಿರುದ್ಧ ರೊಚ್ಚಿಗೆದ್ದಿದ್ದರು. ಹಲವು ರಾಜ್ಯ ನಗರಗಳಲ್ಲಿ ಸಿನಿಮಾನೆ ಬ್ಯಾನ್ ಮಾಡಿದ್ರು. ಇದೀಗ ಆದಿಪುರುಷ್ ನಂಥರ ಜನರ ಕಣ್ಣು ಅಕ್ಷಯ್ ಕುಮಾರ್ ನಟನೆಯ ಹೋ ಮೈಗಾಡ್ ಚಿತ್ರದತ್ತ ಬಿದ್ದಿದೆ. ಇತ್ತೀಚೆಗಷ್ಟೆ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು ಟೀಸರ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತಿವಾಗಿತ್ತು. ಅಲ್ಲದೆ ಹೋ ಮೈಗಾಡ್ ಪಾರ್ಟ್2ವನ್ನು ಇದೀಗ ಸೆನ್ಸಾರ್ ಮಂಡಲಿ ಸಿನಿಮಾವನ್ನು ರಿಜೆಕ್ಟ್ ಮಾಡಿದೆ.