ಹುಡ್ಗೀರ್‌ ಹಾಸ್ಟೆಲ್‌ ಮುಂದೆ ಅಭಿಷೇಕ್‌ ಅಂಬರೀಶ್‌ ರೌಂಡ್ಸ್‌..

Apr 3, 2023, 2:37 PM IST

ಬ್ಯಾಡ್ ಮ್ಯಾನರ್ಸ್ ಸೇರಿದಂತೆ  ಹಲವು ಚಿತ್ರಗಳಲ್ಲಿ ಬಿಜಿಯಾಗಿರುವ ನಟ ಅಭಿಷೇಕ್‌ ಅಂಬರೀಶ್‌, ಆಗಾಗ ತಮ್ಮ ಎಪಿಕ್‌ ಸ್ಟೈಲ್‌ ಮೂಲಕವೇ ಸುದ್ದಿಯಲ್ಲಿರುತ್ತಾರೆ.  ಯಂಗ್ ರೆಬೆಲ್ ಸ್ಟಾರ್ ಅಭಿಷೇಕ್ ಮಹಿಳಾ ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕನನ್ನು ಕಂಡು ಖುಷಿಯಿಂದ  ಕೂಗಾಡುತ್ತಿರುವ ವಿಡಿಯೋ ವೈರಲ್‌ ಆಗಿದೆ. ಜೆಪಿ ನಗರದ ಬಳಿಯ ನೀಟ್‌ ಪರೀಕ್ಷೆಗೆ ತರಬೇತಿ ಪಡೆಯುತ್ತಿರುವ ಸ್ಟುಡೆಂಟ್ಸ್‌ ಹಾಸ್ಟೆಲ್‌ ಬಳಿ ಹೋಗಿ ನಿಂತಿದ್ದೇ ತಡ, ಹಾಸ್ಟೆಲ್‌ ಕಟ್ಟಡದ ಕಿಟಕಿಯಿಂದ ನೂರಾರು ಲೇಡಿ ಫ್ಯಾನ್ಸ್‌ ಕೇಕೆ ಹಾಕಿ ಅಭಿಷೇಕ್‌ ಅವರನ್ನು ಕಣ್ತುಂಬಿಕೊಂಡಿದ್ದಾರೆ. ಹಾಗೇ ಅಭಿ ಮದುವೆ ಯಾವಾಗ ಎಂತಲೂ ಕೇಳಿದ್ದಾರೆ. ಅಭಿಷೇಕ್ ನಿಮ್ಮ ಪ್ರೀತಿಗೆ ಧನ್ಯವಾದಗಳು ಎಂದು ಕೈ ಯಲ್ಲೆ ಹೃದಯ ಮಾಡಿ ತಮ್ಮ ಪ್ರತಿಕ್ರಿಯೆ ತಿಳಿಸಿದ್ದಾರೆ. ಸದ್ಯ ವೀಡಿಯೋ ವೈರಲ್ ಆಗಿದೆ