ರಸ್ತೆ ಮಧ್ಯೆ ಪ್ರೇಯಸಿ ಜೊತೆ ಪತ್ನಿ ಕೈಗೆ ತಗಲಾಕೊಂಡ ಪತಿ: ಆಮೇಲೇನಾಯ್ತು ನೋಡಿ

By Anusha Kb  |  First Published Oct 3, 2024, 4:49 PM IST

ದಾಂಪತ್ಯ ದ್ರೋಹವೆಸಗಿದ ಪತಿಯನ್ನು ಪತ್ನಿ ರಸ್ತೆಯ ಮಧ್ಯೆ ರೆಡ್ ಹ್ಯಾಂಡ್ ಆಗಿ ಹಿಡಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. 


ಮದುವೆಯಾದವರ ಅಕ್ರಮ ಸಂಬಂಧ ಪ್ರಕರಣಗಳು ಇತ್ತೀಚೆಗೆ ಹೆಚ್ಚು ಹೆಚ್ಚು ಕೇಳಿ ಬರುತ್ತಿದೆ. ಪತ್ನಿ ಅಥವಾ ಪತಿ ಎಷ್ಟೇ ಸುಂದರವಾಗಿದ್ದರೂ, ಪತಿ ಅಥಬಾ ಪತ್ನಿ ಬೇರೆ ಸಂಬಂಧಕ್ಕಾಗಿ ಹಾತೊರೆಯುವ ಪ್ರಕರಣಗಳು ಹೆಚ್ಚು ಹೆಚ್ಚು ನಡೆಯುತ್ತಿದ್ದು, ಇದರಿಂದ ಈ ದಂಪತಿಯ ಮಕ್ಕಳು ಅತ್ತ ಅಪ್ಪನ್ನೂ ಇತ್ತ ಅಮ್ಮನೂ ಇಲ್ಲ ಎಂಬಂತಾಗಿ ಮಾನಸಿಕ ಆಘಾತಕ್ಕೆ ಒಳಗಾಗುತ್ತಿದ್ದಾರೆ. ಇಂತಹ ಪ್ರಕರಣಗಳು ಈಗ ಸಾಕಷ್ಟು ಕೇಳಿ ಬರುತ್ತಿವೆ. ಅದಕ್ಕೆ ಈಗ ಮತ್ತೊಂದು ಉದಾಹರಣೆ ಈ ಘಟನೆ

ಇಲ್ಲೊಂದು ಕಡೆ ದಾಂಪತ್ಯ ದ್ರೋಹವೆಸಗಿದ ಪತಿಯನ್ನು ಪತ್ನಿಯೊಬ್ಬಳು ರಸ್ತೆ ಮಧ್ಯೆಯೇ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದು, ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪತಿಯೊಬ್ಬ ಪತ್ನಿಗೆ ತಿಳಿಯದೇ ತನ್ನ ಪ್ರೇಯಸಿಯನ್ನು ಕರೆದುಕೊಂಡು ಸ್ಕೂಟರ್‌ನಲ್ಲಿ ಹೋಗುತ್ತಿದ್ದ ವೇಳೆ ಪತ್ನಿ ಹಾಗೂ ಆಕೆಯ ಸಂಬಂಧಿಕರು ಆತನನ್ನು ರಸ್ತೆ ಮಧ್ಯೆ ತಡೆದಿದ್ದಾರೆ. ಈ ವೇಳೆ ನಡುರಸ್ತೆಯಲ್ಲೇ ಗಂಡ ಹೆಂಡತಿ ಹಾಗೂ ಗಂಡನ ಪ್ರೇಯಸಿ ಮಧ್ಯೆ ಮಗುವಿನ ಮುಂದೆಯೇ ದೊಡ್ಡ ಗಲಾಟೆ ನಡೆದಿದೆ. ಮಧ್ಯಪ್ರದೇಶದ ಛತ್ರಾಪುರದಲ್ಲಿ ಈ ಘಟನೆ ನಡೆದಿದೆ.

Tap to resize

Latest Videos

undefined

ಪತ್ನಿಯ ಸ್ನೇಹಿತೆಯೊಂದಿಗೆ ಏಕಾಂತದಲ್ಲಿರುವಾಗಲೇ ಸಿಕ್ಕಿಬಿದ್ದ ಗಂಡ!

ಛತ್ರಾಪುರದ 4 ಲೇನ್‌ ರೋಡ್‌ನಲ್ಲಿ ಗಂಡ ಪ್ರೇಯಸಿ ಜೊತೆ ಹೋಗುತ್ತಿದ್ದ ವೇಳೆ ಕಾರಿನಲ್ಲಿ ಬಂದ ಪತ್ನಿ ಹಾಗೂ ಆಕೆಯ ಕಡೆಯವರು ಆತನನ್ನು ತಡೆದಿದ್ದಾರೆ. ಈ ವೇಳೆ ಪ್ರೇಯಸಿ ಮುಖವನ್ನು ಸಂಪೂರ್ಣವಾಗಿ ಮುಚ್ಚಿಕೊಂಡಿರುವುದು ಕಂಡು ಬಂದಿದೆ.  ಇತ್ತ ಪತ್ನಿ ಆಕೆಯ ಬಳಿ ಮುಖ ತೋರಿಸುವಂತೆ ಕೇಳಿದ್ದಲ್ಲದೇ ಯಾರು ನೀನು ಎಲ್ಲಿಗೆ ಹೋಗುತ್ತಿದ್ದಾರೆ ಎಂದು ಕೇಳಿದ್ದಾಳೆ. ಆದರೆ ಆಕೆ ಇದ್ಯಾವುದಕ್ಕೂ ಉತ್ತರ ನೀಡಿಲ್ಲ,  ನಾವೇಕೆ ನಿನಗೆ ಹೇಳಬೇಕು ಎಂದು ತನ್ನ ಪ್ರೇಯಸಿಯ ಪತ್ನಿಯನ್ನೇ ಪ್ರಶ್ನಿಸಿದ್ದಾಳೆ. ಈ ವೇಳೆ ಸಿಟ್ಟಿಗೆದ್ದ ಪತ್ನಿ ಆಕೆಯ ಮುಖ ಮುಚ್ಚಿದ್ದ ಸಾಲನ್ನು ಕಿತ್ತು ತೆಗೆದಿದ್ದಾಳೆ. ಈ ವೇಳೆ ಅಲ್ಲೇ ಇದ್ದ ಮಗನ ಬಳಿ ಮಹಿಳೆ ನೋಡಿ ನಿಮ್ಮ ಅಪ್ಪ ಹೊಸ ಅಮ್ಮನನ್ನು ಕರೆದುಕೊಂಡು ಬಂದಿದ್ದಾರೆ ಎಂದು ಹೇಳುತ್ತಾರೆ. ಆದರೆ ಮಗು ಮಾತ್ರ ಈ ಜವಾಬ್ದಾರಿ ಇಲ್ಲದ ತಂದೆಯ ದುರ್ವರ್ತನೆಯಿಂದ ಕಂಗಾಲಾಗಿದೆ. 

ಇಷ್ಟೆಲ್ಲಾ ಆದರೂ ಆ ಗಂಡ ಮಾತ್ರ ಕಾಮಾತುರನಾಂ ನಾ ಲಜ್ಜಾ ನಾ ಭಯ ಎಂಬ ಸಂಸ್ಕೃತ ಉಕ್ತಿಯಂತೆ ಹೆಂಡತಿ ಬಗ್ಗೆ ಸ್ವಲ್ಪವೂ ಕ್ಯಾರೇ ಅನ್ನದೇ ಪತ್ನಿ ಮುಂದೆಯೇ ಪ್ರೇಯಸಿಯನ್ನು ಸ್ಕೂಟಿ ಹತ್ತುವಂತೆ ಹೇಳಿದ್ದಾನೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ಅನೇಕರು ವಿವಿಧ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಇಷ್ಟು ಚೆಂದದ ಹೆಂಡ್ತಿ ಇದ್ರೂ ಈ ಅಂಕಲ್ ಏಕೆ ಜೆಸಿಬಿ ತರ ಇರೋ ಆಂಟಿ ಹಿಂದೆ ಹೋಗ್ತಿದ್ದಾರೆ ಎಂದು ಕೆಲವರು ಪ್ರಶ್ನಿಸಿದ್ದಾರೆ.  ಸೌಂದರ್ಯದಿಂದ ವಿಕೃತ ಮನಸ್ಥಿತಿಯನ್ನು ಬದಲಾಯಿಸಲು ಸಾಧ್ಯವಿಲ್ಲ ಎಂಬುದು ಈ ಕತೆಯ ನೀತಿ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. 

ಪ್ರಿಯತಮೆ ತೆಕ್ಕೆಯಲ್ಲಿರುವಾಗ ಪ್ರಜ್ಞೆ ತಪ್ಪಿದ ಗಂಡನ ಲೈಫ್ ಸಪೋರ್ಟ್ ತೆಗೆದ ಪತ್ನಿ!

 

Extra-Marital Affair Kalesh (Wife Caught her Husband with other Lady on Scooty)
🎥: Insta: @/monupradhan
pic.twitter.com/V7k9nOYNO6

— Ghar Ke Kalesh (@gharkekalesh)

 

click me!