ಹಾಸನ: ಅನಾರೋಗ್ಯದಿಂದ 3 ದಿನದಿಂದ ನಿಂತಲ್ಲೇ ನಿಂತು ನರಳಿ ನರಳಿ ಪ್ರಾಣಬಿಟ್ಟ ಕಾಡಾನೆ!

By Girish Goudar  |  First Published Oct 3, 2024, 4:50 PM IST

ಚಿಕಿತ್ಸೆಗಾಗಿ ಕಾಡಾನೆಯನ್ನು ಸ್ಥಳಾಂತರ ಮಾಡಿದರೆ ಹೃದಯಾಘಾತವಾಗುವ ಸಂಭವ ಹಿನ್ನಲೆಯಲ್ಲಿ ಅನಾರೋಗ್ಯದಿಂದ ನರಳುತ್ತಿದ್ದ ಹೆಣ್ಣಾನೆಗೆ ಇಂದು ಚಿಕಿತ್ಸೆ ನೀಡಲು ಅರಣ್ಯ ಇಲಾಖೆ ಮುಂದಾಗಿತ್ತು. ಈ ಹೆಣ್ಣಾನೆ ಕಳೆದ ಮೂರು ದಿನಗಳಿಂದ ಒಂದೇ ಸ್ಥಳದಲ್ಲಿ ನಿಂತಿತ್ತು. ಅನಾರೋಗ್ಯದಿಂದ ಆಹಾರ ತ್ಯಜಿಸಿ ಕಾಡಾನೆ ನರಳಾಡಿತ್ತು.  ಇಂದು ಚಿಕಿತ್ಸೆ ನೀಡಲು ಮುಂದಾದಾಗ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. 


ಹಾಸನ(ಅ.03): ಅನಾರೋಗ್ಯದಿಂದ ಹೆಣ್ಣಾನೆಯೊಂದು ಸಾವನ್ನಪ್ಪಿದ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ವಣಗೂರು ಬಳಿ ಇಂದು(ಗುರುವಾರ) ನಡೆದಿದೆ. ಕಳೆದ ಮೂರು ದಿನಗಳಿಂದ ಕಾಡಾನೆ ಅನಾರೋಗ್ಯದಿಂದ ಬಳಲುತ್ತಿತ್ತು. 

ಚಿಕಿತ್ಸೆಗಾಗಿ ಕಾಡಾನೆಯನ್ನು ಸ್ಥಳಾಂತರ ಮಾಡಿದರೆ ಹೃದಯಾಘಾತವಾಗುವ ಸಂಭವ ಹಿನ್ನಲೆಯಲ್ಲಿ ಅನಾರೋಗ್ಯದಿಂದ ನರಳುತ್ತಿದ್ದ ಹೆಣ್ಣಾನೆಗೆ ಇಂದು ಚಿಕಿತ್ಸೆ ನೀಡಲು ಅರಣ್ಯ ಇಲಾಖೆ ಮುಂದಾಗಿತ್ತು. ಈ ಹೆಣ್ಣಾನೆ ಕಳೆದ ಮೂರು ದಿನಗಳಿಂದ ಒಂದೇ ಸ್ಥಳದಲ್ಲಿ ನಿಂತಿತ್ತು. ಅನಾರೋಗ್ಯದಿಂದ ಆಹಾರ ತ್ಯಜಿಸಿ ಕಾಡಾನೆ ನರಳಾಡಿತ್ತು. 

Latest Videos

undefined

ಹಾಸನ: 2ನೇ ತರಗತಿಯ ಮೂಕ, ಕಿವುಡ ಅಪ್ರಾಪ್ತ ಮೇಲೆ ಅತ್ಯಾಚಾರ

ಇಂದು ಚಿಕಿತ್ಸೆ ನೀಡಲು ಮುಂದಾದಾಗ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಸುಮಾರು ಇಪ್ಪತ್ತು ವರ್ಷದ ಹೆಣ್ಣಾನೆ ಇದಾಗಿದೆ ಎಂದು ತಿಳಿದು ಬಂದಿದೆ.  ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸಿ ಸ್ಥಳದಲ್ಲೇ ಅಂತ್ಯಕ್ರಿಯೆ ನಡೆಸಲಿದೆ ಅರಣ್ಯ ಇಲಾಖೆ. 

click me!