ಬಳ್ಳಾರಿ: ಕೊಲೆ ಆರೋಪಿ ದರ್ಶನ್‌ ನೋಡಲು ಜೈಲಿಗೆ ಬಂದ ಪುತ್ರ, ಡ್ರೈ ಫ್ರೂಟ್ಸ್, ಬೇಕರಿ ತಿನಿಸು ತಂದ ವಿಜಯಲಕ್ಷ್ಮಿ

Published : Oct 03, 2024, 04:21 PM ISTUpdated : Oct 03, 2024, 04:29 PM IST
ಬಳ್ಳಾರಿ: ಕೊಲೆ ಆರೋಪಿ ದರ್ಶನ್‌ ನೋಡಲು ಜೈಲಿಗೆ ಬಂದ ಪುತ್ರ, ಡ್ರೈ ಫ್ರೂಟ್ಸ್, ಬೇಕರಿ ತಿನಿಸು ತಂದ ವಿಜಯಲಕ್ಷ್ಮಿ

ಸಾರಾಂಶ

ವಿನೀಶ್ ಹಾಗೂ ವಿಜಯಲಕ್ಷ್ಮಿ ಜೈಲಿನ ಸಂದರ್ಶಕರ ಕೋಣೆಗೆ ತೆರಳಿದ್ದಾರೆ. ಕೆಲವೇ ಕ್ಷಣಗಳಲ್ಲಿ ಪುತ್ರನನ್ನ ನಟ ದರ್ಶನ್ ಭೇಟಿಯಾಗಲಿದ್ದಾನೆ.  ಪತ್ನಿ ಹಾಗೂ ಪುತ್ರನ ಜೊತೆ ದರ್ಶನ್ 45 ನಿಮಿಷ ಮಾತನಾಡಿಲಿದ್ದಾನೆ. 

ಬಳ್ಳಾರಿ(ಅ.03): ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿರುವ ನಟ ದರ್ಶನ್‌ನನ್ನ ನೋಡಲು ಪುತ್ರ ವಿನೀಶ್ ಆಗಮಿಸಿದ್ದಾರೆ. ಹೌದು, ತಾಯಿ ವಿಜಯಲಕ್ಷ್ಮಿ ಜೊತೆ ವಿನೀಶ್ ಜೈಲಿಗೆ ಆಗಮಿಸಿದ್ದಾನೆ. 

ವಿನೀಶ್ ಹಾಗೂ ವಿಜಯಲಕ್ಷ್ಮಿ ಜೈಲಿನ ಸಂದರ್ಶಕರ ಕೋಣೆಗೆ ತೆರಳಿದ್ದಾರೆ. ಕೆಲವೇ ಕ್ಷಣಗಳಲ್ಲಿ ಪುತ್ರನನ್ನ ನಟ ದರ್ಶನ್ ಭೇಟಿಯಾಗಲಿದ್ದಾನೆ.  ಪತ್ನಿ ಹಾಗೂ ಪುತ್ರನ ಜೊತೆ ದರ್ಶನ್ 45 ನಿಮಿಷ ಮಾತನಾಡಿಲಿದ್ದಾನೆ. 

ಜೈಲಿನಲ್ಲಿದ್ದರೂ ಕರಗಲಿಲ್ಲ ಕೊಬ್ಬು: ಮೀಡಿಯಾಗಳಿಗೆ ಮಿಡಲ್ ಫಿಂಗರ್ ತೋರಿಸಿದ ದರ್ಶನ್

ಬಳ್ಳಾರಿ ಸೆಂಟ್ರಲ್ ಜೈಲಿಗೆ ಬಂದ ದರ್ಶನ್ ಪುತ್ರ ವಿನೀಶ್ ಪತ್ನಿ ವಿಜಯಲಕ್ಷ್ಮಿ ಅವರ ಬ್ಯಾಗ್‌ಅನ್ನು ಜೈಲಿನ ಸಿಬ್ಬಂದಿ ಪರಿಶೀನೆ ಮಾಡಿದ್ದಾರೆ. ವಿಜಯಲಕ್ಷ್ಮಿ ಅವರು ಬ್ಯಾಗಿನಲ್ಲಿ ಡ್ರೈ ಪ್ರೂಟ್ಸ್, ಬೇಕರಿ ತಿನಿಸು, ಬಟ್ಟೆ ತಂದಿದ್ದಾರೆ. ದರ್ಶನ್ ಭೇಟಿಗೆ ವಿಜಯಲಕ್ಷ್ಮಿ, ಸಂದರ್ಶಕರ ಕೊಠಡಿಗೆ ತೆರಳಿದ್ದಾರೆ. ವಿನೀಶ್, ಸುಶಾಂತ್ ನಾಯ್ಡು ಹಾಗೂ ಇಬ್ಬರು ಆಪ್ತ ಸಹಾಯಕರು ಆಗಮಿಸಿದ್ದಾರೆ. 

ಅಪ್ಪನ ಮುಖ ಕಂಡು ಬಿಕ್ಕಿ ಬಿಕ್ಕಿ ಅತ್ತ ಪುತ್ರ ವಿನೀಶ್ 

ಕೊಲೆ ಆರೋಪಿ ದರ್ಶನ್ ನಗು ನಗುತ್ತಲೇ ಪುತ್ರ ಹಾಗೂ ಪತ್ನಿಯ ಭೇಟಿಗೆ ಬಂದಿದ್ದಾನೆ.  ಅಪ್ಪನ ಮುಖ ಕಂಡು ಪುತ್ರ ವಿನೀಶ್ ಬಿಕ್ಕಿ ಬಿಕ್ಕಿ ಅತ್ತಿದ್ದಾನೆ. ಮಗನನ್ನ ತಬ್ಬಿ ಆರೋಪಿ ದರ್ಶನ್ ಸಂತೈಸಿದ್ದಾನೆ.  ಈ ವೇಳೆ ಪುತ್ರ ವಿನೀಶ್ ಅಪ್ಪನ ಆರೋಗ್ಯವನ್ನ ವಿಚಾರಿಸಿದ್ದಾನೆ. ಆದಷ್ಟು ಬೇಗ ಹೊರಗೆ ಬರ್ತೀನಿ ಆರಾಮಾಗಿರು ಎಂದು ದರ್ಶನ್ ಹೇಳಿದ್ದಾನಂತೆ. ಈ ವೇಳೆ ಪಪ್ಪಾ ನಿನ್ನ ತುಂಬಾ ಮಿಸ್ ಮಾಡ್ಕೊಂತಿದ್ದೀನಿ ಎಂದು ಪುತ್ರ ವಿನೀಶ್ ಕಣ್ಣೀರಾಕಿದ್ದಾನೆ, ಪುತ್ರನ ಕಣ್ಣೀರು ಕಂಡು ವಿಜಯಲಕ್ಷ್ಮಿ ಹಾಗೂ ದರ್ಶನ್ ಭಾವುಕರಾಗಿದ್ದಾರೆ. 
 

PREV
click me!

Recommended Stories

ಮಂಗಳೂರು- ಕಾಸರಗೋಡು ಮಾರ್ಗದಲ್ಲಿ ಟೋಲ್ ವಸೂಲಿ ಮುನ್ನವೇ KSRTC ಟಿಕೆಟ್ ದರ ಹೆಚ್ಚಳ ಬರೆ!
ಏನಿದು, ಯಾಕಿದು ವಾರಾಹಿ ನದಿಯ ಸಿದ್ಧಾಪುರ ಏತ ನೀರಾವರಿ ವಿವಾದ? ಅಡ್ಡಗಾಲು ಹಾಕಿದ್ಯಾರು?