ಬೆಳಗಾವಿಯಲ್ಲಿ ಮನೆ ಬಾಗಿಲಿಗೆ ಏಕನಾಥ ಇಡ್ಲಿ ವಡೆ; ಕಡಿಮೆ ಬೆಲೆ, ಬಾಯಿ ಚಪ್ಪರಿಸುವ ರುಚಿ!

Nov 23, 2019, 9:00 PM IST

ಬೆಳಗಾವಿ(ನ.23):  ಬೆಳಗಾವಿಯ ಯಾವುದೇ ಹೊಟೆಲ್‌ಗೆ ಹೋದರೂ  ಏಕನಾಥನು ಕೊಡುವ ದರದಲ್ಲಿ ಇಡ್ಲಿ,ವಡೆ ಸಿಗುವುದು ಸಾಧ್ಯವೇ ಇಲ್ಲ.ಎಷ್ಟೇ ಸಣ್ಣ ಹೊಟೆಲ್ಲಿದ್ದರೂ ಒಂದು ಇಡ್ಲಿ,ಒಂದು ಉದ್ದಿನ ವಡೆಗೆ ಕನಿಷ್ಟ 35 ರಿಂದ 40 ರೂಪಾಯಿ ಕೊಟ್ಟೇ ಕೊಡಬೇಕು. ಆದರೆ ಬೈಕ್ ಮೇಲೆ ತಿರುಗಿ ಇಡ್ಲಿ, ವಡೆ ಮಾರುವ ಈ ಏಕನಾಥನು 20 ರೂ.ಗೆ ಒಂದು ಇಡ್ಲಿ, ಒಂದು ವಡೆ ಕೊಡುತ್ತಾನೆ.

ಇದನ್ನೂ ಓದಿ: ಕನ್ನಡ ಕಟ್ಟಿದವರು: ಗಡಿಭಾಗದಲ್ಲಿ ಕನ್ನಡದ ಕಂಪು ಹರಡಿದ ಸಿದ್ಧಸಂಸ್ಥಾನ ಮಠ!
 

ಹನುಮಾನ ನಗರದಲ್ಲಿ ವಾಕಿಂಗ್ ಹೋದಾಗ ಎದುರಿಗೆ ಸಿಕ್ಕ ಏಕನಾಥನನ್ನು ಮಾತನಾಡಿಸಿದೆ. ಕನ್ನಡ ಬರುವದಿಲ್ಲ ಎಂದ. ಮರಾಠಿಯಲ್ಲಿ ಕೇಳಿ ವಿವರ ಪಡೆದೆ. ಮೂಲತಃ ಮಹಾರಾಷ್ಟ್ರದ ಪಾಟ್ನೆ ನಗರದವನು. ಕೆಲವೇ ತಿಂಗಳುಗಳ ಹಿಂದೆ ಹಿಂಡಲಗಾಕ್ಕೆ ಬಂದು ನೆಲೆಸಿದ್ದಾನೆ. ಬೆಳಗಾವಿಯ ಹೊಟೆಲ್‍‌ನವರ ಇಡ್ಲಿ ,ವಡೆ ತೆಗೆದುಕೊಂಡು ,ಅವರದೇ ಆದ ವಿದ್ಯುತ್ ಚಾಲಿತ ಬೈಕ್ ಪಡೆದು ಮಾರಾಟ ಮಾಡುತ್ತಿದ್ದಾನೆ.

ಇದನ್ನೂ ಓದಿ: ಪ್ರಕೃತಿ ಪವಾಡ: ಬತ್ತಿದ್ದ ಬೋರ್‌ವೆಲ್‌ನಿಂದ ಆಕಾಶದೆತ್ತರಕ್ಕೆ ಚಿಮ್ಮುತ್ತಿದೆ ನೀರು!

ಬೆಳಗಾವಿಯ ಹನುಮಾನಗರ ಮತ್ತು ಹಿಂಡಲಗಾ ರಸ್ತೆಯ ಬದಿಯಿರುವ ವಿಜಯನಗರ ಮತ್ತಿತರ ಪ್ರದೇಶಗಳಲ್ಲಿ ಬೆಳಿಗ್ಗೆ 6 ಗಂಟೆಯಿಂದ ವ್ಯಾಪಾರ ಆರಂಭಿಸುತ್ತಾನೆ. ಹಿಂದಿನ ರಾತ್ರಿಯೇ ಫೋನ್ ಮಾಡಿ ಆರ್ಡರ್ ಕೊಟ್ಟರೆ ಬೆಳಿಗ್ಗೆ ಬಂದು ಕೊಡುತ್ತಾನೆ.

ಮುಂಜಾನೆ 8 ಗಂಟೆಗೆ ಫೋನ್ ಮಾಡಿದೆ. ನನ್ನ ಮನೆಯ ಮುಂದೆ ಬಂದ, ಎರಡು ಭಾಂಡೆ ತೆಗೆದುಕೊಂಡು ಹೊರಗೆ ಹೋದೆ. ಮೂರೇ ಇಡ್ಲಿ ಅವನಲ್ಲಿ ಉಳಿದಿದ್ದವು. ಏಳು ವಡೆಗಳಿದ್ದವು, ಚಟ್ನಿಯಿತ್ತು, ಒಟ್ಟು 100 ರೂಪಾಯಿ ಕೊಟ್ಟೆ.        ಏಕನಾಥನಿಗಾಗಿ ಕಾಯುವವರು ಸಾಕಷ್ಟು ಜನರಿದ್ದಾರೆ.ಇಂದಿನಿಂದ ನಾನೂ ಸೇರಿದ್ದೇನೆ. ಏಕನಾಥ ಅವರ ಮೊಬೈಲ್ ಸಂಖ್ಯೆ 8088903159.

ಬರಹ: ಅಶೋಕ ಚಂದರಗಿ