ಪ್ರವಾಸಕ್ಕೆ (Travel) ಹೋಗುವ ಮೊದಲೇ ಒಂದಿಷ್ಟು ಪ್ಲಾನ್ (Plan) ಸಿದ್ಧವಾಗಿರುತ್ತೆ. ಆದ್ರೆ ಪ್ರವಾಸದ ಆರಂಭದಲ್ಲಿಯೇ ಸಮಸ್ಯೆ ಶುರುವಾಗುತ್ತದೆ. ಇದಕ್ಕೆ ಕಾರಣ ನಾವು ಸೇವಿಸೋ ಆಹಾರ (Food). ಪ್ರಯಾಣ ಸುಖವಾಗಿರ್ಬೇಕೆಂದ್ರೆ ಆಹಾರದ ಬಗ್ಗೆಯೂ ಗಮನ ನೀಡ್ಬೇಕು.
ಪ್ರವಾಸ (Tour) ಪ್ರತಿಯೊಬ್ಬರಿಗೂ ಇಷ್ಟವಾಗುತ್ತದೆ. ಲಾಂಗ್ ಡ್ರೈವ್ (Long Drive) ಇರಲಿ ಇಲ್ಲ ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣವಿರಲಿ, ಪ್ರಯಾಣದ ವೇಳೆ ಮೋಜು – ಮಸ್ತಿ ಮಾಡಲು ಎಲ್ಲರೂ ಬಯಸ್ತಾರೆ. ಪ್ರಯಾಣ ಸುಖಕರವಾಗಿರುವುದು ಬಹಳ ಮುಖ್ಯ. ದಾರಿ ಮಧ್ಯೆ ಆರೋಗ್ಯ (Health) ಕೆಟ್ಟರೆ ಪ್ರಯಾಣದ ಸಂತೋಷ ಹಾಳಾಗುತ್ತದೆ. ಪ್ರವಾಸಿ ಸ್ಥಳವನ್ನು ಸರಿಯಾಗಿ ವೀಕ್ಷಿಸಲು ಸಾಧ್ಯವಾಗುವುದಿಲ್ಲ. ಇಡೀ ದಿನ ಸುಸ್ತು, ಕಿರಿಕಿರಿ ಅನುಭವಿಸಬೇಕಾಗುತ್ತದೆ. ಅನೇಕರು ವಾಹನ ಹತ್ತುತ್ತಿದ್ದಂತೆ ಕೈನಲ್ಲಿ ಚಿಪ್ಸ್ ಹಿಡಿದು ಕುಳಿತುಕೊಳ್ತಾರೆ. ಆರಂಭದಲ್ಲಿ ಸ್ನೇಹಿತರು, ಸಂಬಂಧಿಕರ ಜೊತೆ ಮಾತನಾಡ್ತಾ ಚಿಪ್ಸ್ ಎಷ್ಟು ಒಳಗೋಯ್ತು ಗೊತ್ತಾಗೋದಿಲ್ಲ. ಆದ್ರೆ ಸ್ವಲ್ಪ ಸಮಯದ ನಂತ್ರ ಸಮಸ್ಯೆ ಕಾಣಿಸಿಕೊಳ್ಳುತ್ತದೆ.
ಪ್ರಯಾಣ ಸುಖಕರವಾಗಿರಬೇಕು ಎನ್ನುವವರು ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಅನಾರೋಗ್ಯಕರ ಆಹಾರವು ಆರೋಗ್ಯವನ್ನು ಬೇಗ ಕೆಡಿಸುತ್ತದೆ. ಪ್ರಯಾಣದ ಸಮಯದಲ್ಲಿ ಆಹಾರಕ್ಕೆ ಸಂಬಂಧಿಸಿದ ಕೆಲವು ಸಂಗತಿಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಪ್ರಯಾಣದ ವೇಳೆ ಯಾವ ಆಹಾರ ಸೇವನೆ ಮಾಡ್ಬಾರದು ಎಂಬುದನ್ನು ನಾವಿಂದು ಹೇಳ್ತೇವೆ.
ವಿಪರೀತ ಬಿಸಿಲ ಧಗೆ, ಗಿರಿ ಪ್ರದೇಶದಿಂದ ದೂರ ಉಳಿದ ಪ್ರವಾಸಿಗರು
ಪ್ರಯಾಣದ ವೇಳೆ ಈ ಆಹಾರದಿಂದ ದೂರವಿರಿ :
ಕರಿದ ಪದಾರ್ಥಗಳಿಂದ ದೂರವಿರಿ : ಪ್ರಯಾಣ ಮುಗಿಯುವವರೆಗೂ ಥ್ರಿಲ್ ಇರ್ಬೇಕೆಂದ್ರೆ ಕರಿದ ಆಹಾರದಿಂದ ದೂರವಿರಿ. ಪ್ರಯಾಣದ ಸಮಯದಲ್ಲಿ ಸಮೋಸ, ಕಚೋರಿ, ಪುರಿ ಸೇರಿದಂತೆ ಎಣ್ಣೆಯ ಆಹಾರವನ್ನು ಸೇವನೆ ಮಾಡ್ಬೇಡಿ. ಅನೇಕ ಬಾರಿ ರೈಲು ಪ್ರಯಾಣದ ವೇಳೆ, ರೈಲ್ವೆ ನಿಲ್ದಾಣದಲ್ಲಿ ಸಿಗುವ ಕಟ್ಲೆಟ್, ಸಮೋಸಾ ನೋಡ್ತಿದ್ದಂತೆ ಬಾಯಲ್ಲಿ ನೀರೂರುತ್ತದೆ. ಬಾಯಿ ಚಪಲಕ್ಕೆ ಅದನ್ನು ತಿಂದಿರುತ್ತೇವೆ. ಆದರೆ ಈ ಎಲ್ಲಾ ಆಹಾರ ತೆರೆದ ಸ್ಥಳದಲ್ಲಿ ಮಾರಾಟವಾಗುವುದರಿಂದ ಅದು ಆರೋಗ್ಯವನ್ನು ಹಾಳು ಮಾಡ್ಬಹುದು. ಹಾಗಾಗಿ ಇದರಿಂದ ದೂರವಿರಿ.
ಮಾಂಸ ತಿನ್ನಬೇಡಿ : ಬೇಸಿಗೆಯಲ್ಲಿ ಪ್ರವಾಸದ ಪ್ಲಾನ್ ಮಾಡಿದ್ದರೆ ಆಹಾರದ ಬಗ್ಗೆ ಹೆಚ್ಚಿನ ಗಮನ ನೀಡಬೇಕಾಗುತ್ತದೆ. ಪ್ರಯಾಣದ ವೇಳೆ ಅಪ್ಪಿತಪ್ಪಿಯೂ ನಾನ್ ವೆಜ್ ತಿನ್ನಬೇಡಿ. ನಾನ್ ವೆಜ್ ಗೆ ಸಾಕಷ್ಟು ಮಸಾಲೆಗಳು ಮತ್ತು ಎಣ್ಣೆ ಬಳಸಲಾಗುತ್ತದೆ. ಇದನ್ನು ಜೀರ್ಣಿಸಿಕೊಳ್ಳಲು ಸಾಕಷ್ಟು ಸಮಯ ಬೇಕಾಗುತ್ತದೆ. ಪ್ರಯಾಣದ ಸಮಯದಲ್ಲಿ ಮಾಂಸಾಹಾರಸೇವನೆ ಮಾಡಿದ್ರೆ ಹೊಟ್ಟೆ ಸಮಸ್ಯೆ ಕಾಡಬಹುದು. ಹಾಗಾಗಿ ಮಾಂಸಹಾರದಿಂದ ದೂರವಿರುವುದು ಒಳ್ಳೆಯದು.
ಮೊಟ್ಟೆ : ನಾನ್ ವೆಜ್ ಮಾತ್ರವಲ್ಲ ಮೊಟ್ಟೆಗಳನ್ನು ಕೂಡ ಸೇವಿಸ್ಬೇಡಿ. ಪ್ರಯಾಣ ಮಾಡುವಾಗ ಸುಲಭವಾಗಿ ಜೀರ್ಣವಾಗುವ ಆಹಾರವನ್ನು ಸೇವಿಸಬೇಕು. ಮೊಟ್ಟೆ ಕೂಡ ಹೆವಿಯಾಗಿರುತ್ತದೆ. ಇದು ಸುಲಭವಾಗಿ ಜೀರ್ಣವಾಗುವುದಿಲ್ಲ. ದೂರದ ಪ್ರಯಾಣದ ಸಂದರ್ಭದಲ್ಲಿ ಮೊಟ್ಟೆಯಿಂದ ದೂರವಿರುವುದು ಒಳ್ಳೆಯದು.
2ನೇ ವಿಶ್ವಯುದ್ಧದಲ್ಲಿ ಭಾಗಿಯಾದ ನರ್ಸ್‌ಗೆ 100ರ ಸಂಭ್ರಮ: ಸ್ಕೈಡೈವ್ ಮಾಡಿ ಆಚರಣೆ
ಪ್ರಯಾಣದ ವೇಳೆ ಏನು ತಿನ್ಮೇಕು ? : ಪ್ರಯಾಣದ ವೇಳೆ ಅದು ಬೇಡ, ಇದು ಬೇಡ ಅಂದ್ರೆ ಮತ್ತೇನು ತಿನ್ಬೇಕು ಎಂಬ ನಿಮ್ಮ ಪ್ರಶ್ನೆಗೂ ನಮ್ಮಲ್ಲಿ ಉತ್ತರವಿದೆ.
ನೀರು - ಜ್ಯೂಸ್ : ಬೇಸಿಗೆಯಲ್ಲಿ ಪ್ರವಾಸಕ್ಕೆ ತೆರಳುತ್ತಿದ್ದರೆ ಮೊದಲನೆಯದಾಗಿ ಸಾಕಷ್ಟು ನೀರು ಕುಡಿಯಿರಿ. ನೀರಿನ ಜೊತೆಗೆ ರಸಭರಿತವಾದ ಹಣ್ಣುಗಳನ್ನು ಸೇವಿಸಿ. ಹಣ್ಣಿನ ಜ್ಯೂಸ್ ಕೂಡ ಕುಡಿಯಬಹುದು.
ಡ್ರೈ ಫ್ರೂಟ್ಸ್ : ಸ್ವಲ್ಪ ಮಸಾಲೆ ಬೇಕು ಎನ್ನುವವರು ಆರೋಗ್ಯಕರವಾದದ್ದನ್ನೇ ತಿನ್ಬಹುದು. ಬಾಳೆಹಣ್ಣಿನ ಚಿಪ್ಸ್, ಹುರಿದ ಒಣ ಹಣ್ಣುಗಳು, ಪಿಸ್ತಾ, ಗೋಡಂಬಿ ಅಥವಾ ಬಾದಾಮಿಗಳನ್ನು ತಿನ್ನಬಹುದು.
ಹುರಿದ ಕಡಲೆಕಾಯಿ : ಎಣ್ಣೆಯಲ್ಲಿ ಫ್ರೈ ಮಾಡಿದ ಕಡಲೆಕಾಯಿ ಬದಲು ಹುರಿದ ಅಥವಾ ನೆನೆಸಿ ಸಿಪ್ಪೆ ತೆಗೆದ ಕಡಲೆಕಾಯಿಯನ್ನು ನೀವು ಸೇವನೆ ಮಾಡ್ಬಹುದು. ಇದಲ್ಲದೆ ಸ್ವಲ್ಪ ಮಸಾಲೆ ಬೆರೆಸಿರುವ ಮಖಾನಾವನ್ನು ಸಹ ಸೇವನೆ ಮಾಡ್ಬಹುದು. ಈ ಎಲ್ಲಾ ಆಹಾರಗಳು ನಿಮಗೆ ಪೌಷ್ಟಿಕಾಂಶವನ್ನು ನೀಡುತ್ತವೆ ಮತ್ತು ಅನಾರೋಗ್ಯದಿಂದ ನಿಮ್ಮನ್ನು ರಕ್ಷಿಸುತ್ತವೆ.