Bangalore getaways: ವೀಕೆಂಡ್ ಬಂದ್ರೆ ಟ್ರಿಪ್ ಹೋಗಲು ಇವಕ್ಕಿಂತ ಬೆಸ್ಟ್ ಪ್ಲೇಸ್ ಮತ್ತೊಂದಿಲ್ಲ

Published : Aug 15, 2025, 03:58 PM IST
Nandi Hills

ಸಾರಾಂಶ

ನೀವು ಅಲ್ಲಿಗೆ ಹೋಗಿ ಒಂದು ಅಥವಾ ಎರಡು ದಿನಗಳಲ್ಲಿ ವಾಪಸ್ ಆಗ್ಬೋದು. ಆದರೆ ಗಮನಿಸಿ..ಇವುಗಳಲ್ಲಿ ಕೆಲವು ಸ್ಥಳಗಳು ಮಳೆಗಾಲದಲ್ಲಿ ನೋಡಲು ಯೋಗ್ಯವಲ್ಲ. 

ಅಂತೂ ವಾರಾಂತ್ಯ ಬಂತು. ನಿಮ್ಮ ಸ್ನೇಹಿತರೊಂದಿಗೆ ಅಥವಾ ಫ್ಯಾಮಿಲಿಯೊಂದಿಗೆ ಸುಂದರವಾದ ಸ್ಥಳಗಳಿಗೆ ಭೇಟಿ ನೀಡಲು ಪ್ಲಾನ್ ಮಾಡುತ್ತಿದ್ದರೆ ಬೆಂಗಳೂರಿನಲ್ಲಿ ಅಥವಾ ಬೆಂಗಳೂರಿನ ಬಳಿ ನೋಡಬಹುದಾದ ಅನೇಕ ಸ್ಥಳಗಳಿವೆ. ಈ ಸ್ಥಳಗಳಲ್ಲಿ ನೀವು ಫನ್ ಮಾಡ್ಬೋದು, ರಿಲ್ಯಾಕ್ಸ್ ಸಹ ಮಾಡ್ಬೋದು. ಒಟ್ಟಾರೆ ಫ್ಯಾಮಿಲಿ, ಸ್ನೇಹಿತರೊಂದಿಗೆ ಸಮಯ ಕಳೆಯಲು ಇವು ಬೆಸ್ಟ್ ಪ್ಲೇಸ್ ಅಂತಾನೆ ಹೇಳಬಹುದು. ಖುಷಿ ವಿಚಾರ ಅಂದ್ರೆ ಈ ಎಲ್ಲಾ ಸ್ಥಳಗಳು ಸುಮಾರು 100 ರಿಂದ 200 ಕಿಲೋಮೀಟರ್‌ಗಳಷ್ಟು ದೂರದಲ್ಲಿದ್ದು, ನೀವು ಅಲ್ಲಿಗೆ ಹೋಗಿ ಒಂದು ಅಥವಾ ಎರಡು ದಿನಗಳಲ್ಲಿ ವಾಪಸ್ ಆಗ್ಬೋದು. ಆದರೆ ಗಮನಿಸಿ..ಇವುಗಳಲ್ಲಿ ಕೆಲವು ಸ್ಥಳಗಳು ಮಳೆಗಾಲದಲ್ಲಿ ನೋಡಲು ಯೋಗ್ಯವಲ್ಲ. ಆದ್ದರಿಂದ ಹವಮಾನ ನೋಡಿಕೊಂಡು ಟ್ರಿಪ್ ಹೊರಟರೆ ಚೆನ್ನ. ಮತ್ತೇಕೆ ತಡ, ಆ ಸ್ಥಳಗಳು ಯಾವುವು ತಿಳಿದುಕೊಳ್ಳೋಣ...

ನಂದಿ ಹಿಲ್ಸ್(Nandi Hills)
ನಂದಿ ಹಿಲ್ಸ್ ಬೆಂಗಳೂರಿನಿಂದ 60 ಕಿ.ಮೀ ದೂರದಲ್ಲಿದೆ. ಬೆಳಗಿನ ಜಾವ ಇಲ್ಲಿನ ದೃಶ್ಯವನ್ನು ನೀವೊಮ್ಮೆ ನೋಡಲೇಬೇಕು. ಆ ಸಮಯದಲ್ಲಿ ಈ ಸ್ಥಳವು ಸ್ವರ್ಗವೇ ಧರೆಗಿಳಿದಂತೆ ಭಾಸವಾಗುತ್ತದೆ. ಬಸ್ ಮತ್ತು ಟ್ಯಾಕ್ಸಿ ಮೂಲಕವೂ ನಂದಿ ಬೆಟ್ಟಕ್ಕೆ ಹೋಗಬಹುದು. ಪ್ರಕೃತಿ ಪ್ರಿಯರಿಗೆ ಈ ಸ್ಥಳ ತುಂಬಾ ಇಷ್ಟ. ಈ ಸ್ಥಳದಲ್ಲಿ ನೀವು ಅದ್ಭುತವಾದ ಸೂರ್ಯೋದಯ, ಹಚ್ಚ ಹಸಿರಿನ ದೃಶ್ಯ ಮತ್ತು ಐತಿಹಾಸಿಕ ಸ್ಥಳಗಳನ್ನೂ ನೋಡಬಹುದು. ಸಾಹಸ ಪ್ರಿಯರಿಗೆ ಮತ್ತು ಇತಿಹಾಸದಲ್ಲಿ ಆಸಕ್ತಿ ಹೊಂದಿರುವವರಿಗೆ ಇದು ಉತ್ತಮ ಸ್ಥಳವಾಗಿದೆ. ಇಲ್ಲಿಗೆ ಬಂದ ಮೇಲೆ ಟಿಪ್ಪು ಡ್ರಾಪ್, ಭೋಗ ನಂದೀಶ್ವರ ದೇವಸ್ಥಾನ ನೋಡಲು ಮರೆಯದಿರಿ.

ಸಾವನದುರ್ಗ(Savandurga)
ಸಾವನದುರ್ಗ ಇದು ಬೆಂಗಳೂರಿನಿಂದ ಸುಮಾರು 50 ಕಿ.ಮೀ ದೂರದಲ್ಲಿದ್ದು, ಟ್ರೆಕ್ಕಿಂಗ್‌ಗೆ ಬಹಳ ಪ್ರಸಿದ್ಧವಾಗಿದೆ. ಇದು ಸಮುದ್ರ ಮಟ್ಟದಿಂದ 1226 ಮೀಟರ್ ಎತ್ತರದಲ್ಲಿದೆ. ಅರ್ಕಾವತಿ ನದಿ ಇಲ್ಲಿ ಹಾದುಹೋಗುತ್ತದೆ. ಇದು ಎರಡು ಬೆಟ್ಟಗಳಿಂದ ಕೂಡಿದ್ದು, ಈ ಬೆಟ್ಟದ ಬುಡದಲ್ಲಿ ಸಾವಂಡಿ ವೀರಭದ್ರೇಶ್ವರ ಸ್ವಾಮಿ ಮತ್ತು ನರಸಿಂಹ ಸ್ವಾಮಿ ದೇವರ ದೇವಾಲಯವಿದೆ. ಇದೇ ಕಾರಣಕ್ಕಾಗಿ ಇಲ್ಲಿಗೆ ಹೆಚ್ಚಿನ ಸಂಖ್ಯೆಯ ಭಕ್ತರು ಸೇರುತ್ತಾರೆ. ಪ್ರವಾಸಿಗರು, ಸಾಹಸ ಇಷ್ಟಪಡುವವರು ಸಾವನದುರ್ಗ ನೋಡಲು ಬರುತ್ತಾರೆ. ಇದಲ್ಲದೆ, ಪರ್ವತಾರೋಹಿಗಳು ಮತ್ತು ಸಂಶೋಧಕರು ಸಹ ಸಾವನದುರ್ಗಕ್ಕೆ ಬರುತ್ತಾರೆ.

ರಾಮನಗರ (Ramanagara)
ರಾಮನಗರವು ಬೆಂಗಳೂರಿನಿಂದ 50 ಕಿ.ಮೀ ದೂರದಲ್ಲಿದೆ. ಈ ಸ್ಥಳವನ್ನು ಶೋಲೆಯಲ್ಲಿ ಪ್ರಸಿದ್ಧ ರಾಮಗಢ ಎಂದು ತೋರಿಸಲಾಗಿತ್ತು. ಟಿಪ್ಪು ಸುಲ್ತಾನನ ಕಾಲದಲ್ಲಿ ಇದನ್ನು ಶಂಸೆರಾಬಾದ್ ಎಂದು ಕರೆಯಲಾಗುತ್ತಿತ್ತು. ರಾಮನಗರವನ್ನು ರೇಷ್ಮೆ ನಗರ ಎಂದು ಕರೆಯಲಾಗುತ್ತದೆ ಮತ್ತು ಇದು ಮೈಸೂರು ರೇಷ್ಮೆಯ ಪ್ರಮುಖ ಮೂಲವಾಗಿದೆ. ನಗರದ ಕಡೆಗೆ ಹೋಗುವಾಗ ನೀವು ತಟ್ಟೆ ಇಡ್ಲಿಯ ಉಪಾಹಾರ ಸಹ ಸೇವಿಸಬಹುದು. ಅಷ್ಟೇ ಅಲ್ಲ, ಹೆದ್ದಾರಿಯಲ್ಲಿ ಅನೇಕ ರೆಸ್ಟೋರೆಂಟ್‌ಗಳು ಮತ್ತು ಡಾಬಾಗಳನ್ನು ನೋಡಬಹುದು. ವರ್ಷವಿಡೀ ಹವಮಾನ ಚೆನ್ನಾಗಿರುವುದರಿಂದ ಇಲ್ಲಿಗೆ ನೀವು ಯಾವುದೇ ಸಮಯದಲ್ಲಿಯಾದರೂ ಭೇಟಿ ಕೊಡಬಹುದು.

ಕನಕಪುರ (Kanakapura)
ಕನಕಪುರ ಬೆಂಗಳೂರಿನಿಂದ ಸುಮಾರು 62 ಕಿಲೋಮೀಟರ್ ದೂರದಲ್ಲಿದೆ. ಇದು ತುಂಬಾ ಶಾಂತವಾದ ಸ್ಥಳವಾಗಿದ್ದು, ನೀವು ಆರಾಮಾಗಿ ಸಮಯ ಕಳೆಯಬಹುದು. ಈ ನಗರವು ರೇಷ್ಮೆ ಮತ್ತು ಗ್ರಾನೈಟ್‌ಗೆ ಹೆಸರುವಾಸಿಯಾಗಿದೆ. ಇಡೀ ಕರ್ನಾಟಕ ರಾಜ್ಯದಲ್ಲಿ ಪ್ರವಾಸಿಗರು ಆಗಾಗ್ಗೆ ಭೇಟಿ ನೀಡುವ ನೆಚ್ಚಿನ ತಾಣವಾಗಿದೆ. ಏಕೆಂದರೆ ಇದು ಉತ್ಸಾಹಿ ಚಾರಣಿಗರಿಂದ ಹಿಡಿದು ಇತಿಹಾಸ ಪ್ರಿಯರು ಮತ್ತು ವನ್ಯಜೀವಿ ಉತ್ಸಾಹಿಗಳವರೆಗೆ ಪ್ರತಿಯೊಬ್ಬರೂ ನೋಡಬಹುದಾದ ಅದ್ಭುತ ಸ್ಥಳಗಳನ್ನು ಹೊಂದಿದೆ.

ವಂಡರ್ಲಾ ಅಮ್ಯೂಸ್ಮೆಂಟ್ ಪಾರ್ಕ್(Wonderlaw Amusement Park)
ವಂಡರ್ಲಾ ಅಮ್ಯೂಸ್ಮೆಂಟ್ ಪಾರ್ಕ್ ಬೆಂಗಳೂರಿನಿಂದ 28 ಕಿ.ಮೀ ದೂರದಲ್ಲಿದ್ದು, 82 ಎಕರೆ ಪ್ರದೇಶದಲ್ಲಿ ಹರಡಿಕೊಂಡಿದೆ. ಇಲ್ಲಿ ವಿವಿಧ ರೀತಿಯ 56 ರೈಡ್ಸ್ ಇದೆ. ಎಲ್ಲಾ ವಯಸ್ಸಿನ ಜನರು ಪಾರ್ಕ್ ನೋಡಲು ಬಯಸುತ್ತಾರೆ. ಈ ವಾಟರ್ ಪಾರ್ಕ್ ಬಟ್ಟೆ ಬದಲಾಯಿಸುವ ಕೊಠಡಿಗಳು, ಫುಡ್ ಕೋರ್ಟ್ ಮತ್ತು ಇತರ ಸೌಲಭ್ಯಗಳಂತಹ ಉತ್ತಮ ಸೌಲಭ್ಯಗಳನ್ನು ಹೊಂದಿದೆ. ಆದ್ದರಿಂದ ನೀವು ನಿಮ್ಮ ಇಡೀ ಕುಟುಂಬದೊಂದಿಗೆ ಇಲ್ಲಿಗೆ ಹೋಗಲು ಯೋಜಿಸಬಹುದು. ಬೆಂಗಳೂರಿನ ನಿವಾಸಿಗಳಿಗೆ ಇದು ಅತ್ಯಂತ ಇಷ್ಟವಾದ ಸ್ಥಳಗಳಲ್ಲಿ ಒಂದಾಗಿದೆ.

ಹೊಗೇನಕಲ್ ಜಲಪಾತ (Hogenakal Falls)
ತಮಿಳುನಾಡು ಮತ್ತು ಕರ್ನಾಟಕದ ಗಡಿಯಲ್ಲಿರುವ ಹೊಗೇನಕಲ್ ಜಲಪಾತವು ಅತ್ಯಂತ ಸುಂದರವಾದ ಸ್ಥಳಗಳಲ್ಲಿ ಒಂದಾಗಿದೆ. ಹೊಗೇನಕಲ್ ಜಲಪಾತ ಬೆಂಗಳೂರಿನಿಂದ 180 ಕಿ.ಮೀ ದೂರದಲ್ಲಿದ್ದು, ಇಲ್ಲಿಗೆ ಭೇಟಿ ನೀಡಲು ಉತ್ತಮ ಸಮಯ ಡಿಸೆಂಬರ್ ನಿಂದ ಫೆಬ್ರವರಿ. ಜಲಪಾತವನ್ನು ನಯಾಗರ ಜಲಪಾತಕ್ಕೆ ಹೋಲಿಸಲಾಗುತ್ತೆ, ಅದು ಉತ್ಪ್ರೇಕ್ಷೇನೂ ಅಲ್ಲ, ಇಲ್ಲಿಯೂ ಸಹ ಪ್ರಕೃತಿಯ ನಡುವೆ ನೀರು ಬೃಹತ್ ಬಂಡೆಗಳ ಮೇಲೆ ಸಮವಾಗಿ ಬೀಳುತ್ತದೆ.

ಶಿವನಸಮುದ್ರ ಜಲಪಾತ (Shivanasamudra Waterfall)
ಶಿವನಸಮುದ್ರವು ಕರ್ನಾಟಕ ರಾಜ್ಯದ ಒಂದು ಪ್ರಸಿದ್ಧ ಜಲಪಾತವಾಗಿದ್ದು, ರಾಜ್ಯದ ಆಯ್ದ ವಿಶೇಷ ಪ್ರವಾಸಿ ಸ್ಥಳಗಳಲ್ಲಿ ಒಂದಾಗಿದೆ. ಇಲ್ಲಿ ಪ್ರವಾಸಿಗರು ವಾರಾಂತ್ಯದಲ್ಲಿ ಮೋಜು ಮಾಡಲು ಮತ್ತು ದಣಿವಿನ ನಿವಾರಣೆಗಾಗಿ ಬರುತ್ತಾರೆ. ಇದು ಒಂದು ದೊಡ್ಡ ಮತ್ತು ಅದ್ಭುತವಾದ ಜಲಪಾತವಾಗಿದ್ದು, ವಿಶೇಷವಾಗಿ ಪ್ರಕೃತಿ ಪ್ರಿಯರು ಮತ್ತು ಸಾಹಸ ಪ್ರಿಯರಿಗೆ ಸೂಕ್ತ ಸ್ಥಳವಾಗಿದೆ. ಈ ಜಲಪಾತದ ಅಗಲ 305 ಮೀಟರ್ ಮತ್ತು ಎತ್ತರ 98 ಮೀಟರ್.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Traffic Mantra: ಟ್ರಾಫಿಕ್‌ನಲ್ಲಿ ಶಾಂತವಾಗಿರೋದು ಹೇಗೆ? ಈ ಮಂತ್ರ ಪಠಿಸಿ ಸಾಕು!
ಭಾರತೀಯರು 2025ರಲ್ಲಿ ಅತಿಹೆಚ್ಚು ಹುಡುಕಾಡಿದ ಪ್ರವಾಸಿ ಸ್ಥಳ ಯಾವುದು? ಟಾಪ್-10ರಲ್ಲಿ ಥೈಲ್ಯಾಂಡ್, ಮಾಲ್ಡೀವ್ಸ್