
ಪ್ರವಾಸ (trip )ಕ್ಕೆ ಹೊಸ ಸ್ಥಳಕ್ಕೆ ಹೋದಾಗ ಒಂದಲ್ಲ ಒಂದು ತೊಂದ್ರೆ ಎದುರಿಸೋದು ಸಾಮಾನ್ಯ. ಮುಂದಿನ ಬಾರಿ ಈ ತಪ್ಪು ಮಾಡ್ಬಾರದು, ಈಗ ಬುದ್ದಿ ಬಂತು ಅಂತ ಜನ ಹೇಳಿಕೊಳ್ತಾರೆ. ಆದ್ರೆ ಮುಂದಿನ ಬಾರಿ ಹೊಸ ಸಮಸ್ಯೆ ಎದುರಾಗುತ್ತೆ. ಅದ್ರಲ್ಲೂ ಮೊದಲ ಬಾರಿ ಪ್ರವಾಸಕ್ಕೆ ಹೋಗುವ ಜನರಿಗೆ ತೊಂದ್ರೆ ಹೆಚ್ಚು. ಹೇಗೋ ಕೆಲ್ಸಕ್ಕೆ ರಜೆ ಪಡೆದು, ನಾಲ್ಕೈದು ದಿನದ ಪ್ರವಾಸ ಪ್ಲಾನ್ (Travel plan )ಮಾಡಿರ್ತೀರಿ. ಅಲ್ಲಿ ಎಂಜಾಯ್ ಮಾಡುವ ಕನಸು ಕಂಡಿರ್ತೀರಿ. ಆದ್ರೆ ವಾಸ್ತವವೇ ಬೇರೆ ಆಗಿರುತ್ತೆ. ಪ್ರವಾಸಿ ಸ್ಥಳಕ್ಕೆ ಹೋದ್ಮೇಲೆ ನೆಮ್ಮದಿಗಿಂತ ಕಿರಿಕಿರಿ ಹೆಚ್ಚಾಗುತ್ತೆ. ಅನೇಕ ಬಾರಿ ವಂಚನೆ, ಹಣ ಕಳೆದುಕೊಳ್ಳುವ ಸ್ಥಿತಿ ಬಂದ್ರೆ ಮತ್ತೆ ಕೆಲವೊಮ್ಮೆ ನಿಮ್ಮ ಆರೋಗ್ಯ ಹದಗೆಡುತ್ತೆ. ಈ ಬಾರಿ ಪ್ರವಾಸಕ್ಕೆ ಹೋದಾಗ ಅದ್ಯಾವುದೂ ನಿಮ್ಮನ್ನು ಕಾಡ್ಬಾರದು, ನೀವು ರಜೆಯನ್ನು ಸಂಪೂರ್ಣ ಎಂಜಾಯ್ ಮಾಡ್ಬೇಕು ಎಂದಾದ್ರೆ ಕೆಲ ಟಿಪ್ಸ್ ಫಾಲೋ ಮಾಡ್ಬೇಕು.
ನಿಮ್ಮ ವಸ್ತುಗಳ ಮೇಲೆ ಎಚ್ಚರಿಕೆ : ನೀವು ಟ್ರಿಪ್ ಗೆ ಅಗತ್ಯ ವಸ್ತುಗಳನ್ನು ತೆಗೆದುಕೊಂಡು ಹೋಗ್ಬೇಕು. ನಿಮ್ಮ ಮೊಬೈಲ್ ಹಾಗೂ ಹಣ ನಿಮ್ಮ ಕಣ್ಮುಂದೆ, ಹತ್ತಿರದಲ್ಲಿ ಇರಬೇಕು ಅಂದ್ರೆ ನೀವು ಸೊಂಟಕ್ಕೆ ಹಾಕಿಕೊಳ್ಳುವ ಮೊಬೈಲ್ ಪೌಚ್ ಅಥವಾ ಚಿಕ್ಕ ಬ್ಯಾಗ್ ಬಳಸ್ಬೇಕು. ಪಾಸ್ ಪೋರ್ಟ್ ಸೇರಿದಂತೆ ಮಹತ್ವದ ದಾಖಲೆಗಳನ್ನು ಸುರಕ್ಷಿತವಾಗಿಡಲು ಜಿಪ್ಪರ್ ಲಾಕರ್ ಇಟ್ಕೊಂಡಿರಿ. ಪ್ರವಾಸಕ್ಕೆ ಸೂಕ್ತವೆನ್ನಿಸುವ ಅನೇಕ ಬ್ಯಾಗ್, ವಸ್ತುಗಳು ಈಗ ಲಭ್ಯವಿದೆ. ಅದನ್ನು ಬಳಕೆ ಮಾಡಿ. ಅಗತ್ಯಕ್ಕಿಂತ ಹೆಚ್ಚು ವಸ್ತು ಹಾಗೂ ಬ್ಯಾಗ್ ಕ್ಯಾರಿ ಮಾಡಿದ್ರೆ ಅದನ್ನು ಸುರಕ್ಷಿತವಾಗಿ ಇಟ್ಕೊಳ್ಳೋದೇ ನಿಮಗೆ ದೊಡ್ಡ ಸಮಸ್ಯೆ ಆಗುತ್ತೆ. ಹಾಗಾಗಿ ಹಿತ – ಮಿತವಾಗಿ ಬಟ್ಟೆ ಪ್ಯಾಕ್ ಮಾಡಿ. ಅಗತ್ಯ ಔಷಧಿ ಹಾಗೂ ಅಗತ್ಯ ವಸ್ತುಗಳನ್ನು ತಪ್ಪದೆ ತೆಗೆದುಕೊಂಡು ಹೋಗಿ.
ಎಲ್ಲ ಗ್ಯಾಜೆಟ್ ಅಪ್ಡೇಟ್ ಮಾಡಿ : ನೀವು ಟ್ರಿಪ್ ಗೆ ಹೊರಡುವ ಮುನ್ನ ಎಲ್ಲ ಗ್ಯಾಜೆಟ್ ಅಪ್ ಡೇಟ್ ಮಾಡಿ. ಮೊಬೈಲ್, ಲ್ಯಾಪ್ ಟಾಪ್ ಸೇರಿದಂತೆ ಎಲ್ಲ ಗ್ಯಾಜೆಟ್ ಫುಲ್ ಚಾರ್ಜ್ ಆಗಿರುವಂತೆ ನೋಡ್ಕೊಳ್ಳಿ. ಅದನ್ನು ಚಾರ್ಜ್ ಮಾಡಲು ಅಗತ್ಯವಿರುವ ವಸ್ತುಗಳು ನಿಮ್ಮ ಜೊತೆಗಿರಲಿ. ಅಲ್ಲದೆ ಎಲ್ಲ ಗ್ಯಾಜೆಟ್ ಗಳನ್ನು ಸರಿಯಾಗಿ ಲಾಕ್ ಮಾಡಿ. ಒಂದ್ವೇಳೆ ಅವು ಕಳೆದು ಹೋದ್ರೂ ಡೇಟಾ ಸುರಕ್ಷಿತವಾಗಿರುತ್ತದೆ.
ಸ್ಮಾರ್ಟ್ ಟ್ರಾವೆಲರ್ ದಾಖಲಾತಿ ಕಾರ್ಯಕ್ರಮಕ್ಕೆ ಸೈನ್ ಅಪ್ ಮಾಡಿ : ಇದು ವಿದೇಶಕ್ಕೆ ನೀವು ಪ್ರವಾಸ ಬೆಳೆಸುವ ಟೈಂನಲ್ಲಿ ಬಹಳ ಉಪಯೋಗಕಾರಿ. ಸ್ಮಾರ್ಟ್ ಟ್ರಾವೆಲರ್ , ಸ್ಟೇಟ್ ಡಿಪಾರ್ಟ್ಮೆಂಟ್ನ ಉಚಿತ ಸೇವೆಯಾಗಿದೆ. ವಿದೇಶದಲ್ಲಿ ಪ್ರಯಾಣಿಸುವ ಅಥವಾ ವಾಸಿಸುವ ನಾಗರಿಕರಿಗೆ ಇದು ಭದ್ರತೆ ಒದಗಿಸುತ್ತದೆ. ತುರ್ತು ಪರಿಸ್ಥಿತಿಯಲ್ಲಿ ಯುಎಸ್ ರಾಯಭಾರ ಕಚೇರಿ ಅಥವಾ ಕಾನ್ಸುಲೇಟ್, ನಿಮ್ಮನ್ನು ಸಂಪರ್ಕಿಸುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.