
ಬೆಂಗಳೂರು: ಈ ವಾರ ಶುಕ್ರವಾರ ಆಗಸ್ಟ್ 15ರ ರಜೆ, ನಂತರ ಶನಿವಾರ ಮತ್ತು ಭಾನುವಾರ ರಜೆಯೂ ಇರಲಿದೆ. ಬೆಂಗಳೂರಿನಿಂದ ಮೂರು ದಿನ ಪ್ರವಾಸ ಮಾಡಬಹುದು. KSTDC ಬೆಂಗಳೂರಿನಿಂದ (Tour Packages from Bengaluru Pilgrimage Holidays) ಮೂರು ದಿನದ ವಿಶೇಷ ಪ್ಯಾಕೇಜ್ ನೀಡುತ್ತಿದೆ. ಕಡಿಮೆ ಬೆಲೆಯಲ್ಲಿ ಮಧುರೈ, ರಾಮೇಶ್ವರಂ, ಕನ್ಯಾಕುಮಾರಿಗೆ Mini South India(Madurai, Rameshwaram, Kanyakumari) ತೆರಳಬಹುದಾಗಿದೆ. KSTDC ನೀಡುತ್ತಿರುವ ಪ್ರವಾಸ ವಿವರದ ಮಾಹಿತಿ ಇಲ್ಲಿದೆ.
ಮೊದಲ ದಿನ 1st Day
ರಾತ್ರಿ 7 ಗಂಟೆಗೆ ಯಶವಂತಪುರ ಬಿಎಂಟಿಸಿ ಬಸ್ ನಿಲ್ದಾಣದಿಂದ ಪ್ರವಾಸ ಆರಂಭವಾಗುತ್ತದೆ. ಯಶವಂತಪುರ ಬಸ್ ನಿಲ್ದಾಣದ (BMTC Bus Stop Yeshwanthpur) ಕಟ್ಟಡದಲ್ಲಿಯೇ KSTDC ಕಚೇರಿ ಇದೆ. ಮಾರ್ಗ ಮಧ್ಯೆ ಊಟ ಮತ್ತು ವಿಶ್ರಾಂತಿಗಾಗಿ ಬಸ್ ನಿಲುಗಡೆ ಮಾಡಲಾಗುತ್ತದೆ.
ಎರಡನೇ ದಿನ 2n d Day
ರಾತ್ರಿ 7 ಗಂಟೆಗೆ ಪ್ರಯಾಣ ಆರಂಭವಾದ್ರೆ ಮರುದಿನ ಬೆಳಗ್ಗೆ 5.30ಕ್ಕೆ ಮಧುರೈ ತಲುಪಲಾಗುತ್ತದೆ. ಇಲ್ಲಿ ಸ್ನಾನಕ್ಕೆ ವ್ಯವಸ್ಥೆ ಕಲ್ಪಿಸಲಾಗಿರುತ್ತದೆ. ಬ್ರೇಕ್‌ಫಾಸ್ಟ್ ಬಳಿಕ ಮೀನಾಕ್ಷಿ ಟೆಂಪಲ್‌ಗೆ ಕರೆದುಕೊಂಡು ಹೋಗಲಾಗುತ್ತದೆ. ನಂತರ 10 ಗಂಟೆಯಿಂದ ಮಧುರೈನಿಂದ ರಾಮೇಶ್ವರಂದತ್ತ ಪ್ರಯಾಣ ಆರಂಭವಾಗುತ್ತದೆ. ಮಧ್ಯಾಹ್ನ 3 ಗಂಟೆಗೆ ರಾಮೇಶ್ವರಂಗೆ ತಲುಪಲಾಗುತ್ತದೆ. ಅಲ್ಲಿ ಹೋಟೆಲ್ ಚೆಕ್ ಇನ್ ಮಾಡಿ. ನಂತರ ತೀರ್ಥಸ್ನಾನ, ರಾಮೇಶ್ವರಂ ದೇವಸ್ಥಾನ ಮಾಡಿಸಲಾಗುತ್ತದೆ. ಚೆಕ್ ಇನ್ ಮಾಡಿದ ಹೋಟೆಲ್‌ನಲ್ಲಿಯೇ ಈ ದಿನ ಉಳಿದುಕೊಳ್ಳಲಾಗುತ್ತದೆ.
ಮೂರನೇ ದಿನ 3rd Day
ಬೆಳಗ್ಗೆ 5 ರಿಂದ 6 ಗಂಟೆ ನಡುವೆ ಸ್ಪಟಿಕ ಲಿಂಗದ ದರ್ಶನ
ಬೆಳಗ್ಗೆ 7.30: ರಾಮೇಶ್ವರಂನಿಂದ ಕನ್ಯಾಕುಮಾರಿಯತ್ತ ಪ್ರಯಾಣ ಆರಂಭ. ಮಾರ್ಗ ಮಧ್ಯೆದಲ್ಲಿಯೇ ಬ್ರೇಕ್‌ಫಾಸ್ಟ್ ಮತ್ತು ಮಧ್ಯಾಹ್ನ ಊಟದ ವ್ಯವಸ್ಥೆ ಇರಲಿದೆ.
ಮಧ್ಯಾಹ್ನ 4 ಗಂಟೆಗೆ ಸುಚಿಂದರಾಮ್ ದೇವಸ್ಥಾನಕ್ಕೆ ಭೇಟಿ ನೀಡಿ ಸಂಜೆ 5.15ಕ್ಕೆ ಇಲ್ಲಿಂದ ಹೊರಡಲಾಗುವುದು.
ಸಂಜೆ 5.40ಕ್ಕೆ ಕನ್ಯಾಕುಮಾರಿಗೆ ಭೇಟಿ ನೀಡಿ ಸನ್ ಸೆಟ್ ವೀಕ್ಷಿಸಿ ಹೋಟೆಲ್‌ಗೆ ಚೆಕ್ ಇನ್ ಆಗುವುದು.
ನಾಲ್ಕನೇ ದಿನ 4th And 5th Day
ಬೆಳಗ್ಗೆ 6ಕ್ಕೆ ಸೂರ್ಯೋದಯ ವೀಕ್ಷಣೆ, ಬ್ರೇಕ್‌ಫಾಸ್ಟ್ ನಂತರ ವಿವೇಕಾನಂದ ರಾಕ್ ಮೆಮೊರಿಯಲ್ ಮತ್ತು ಕನ್ಯಾಕುಮಾರಿ ದೇವಸ್ಥಾನಕ್ಕೆ ಭೇಟಿ
ಮಧ್ಯಾಹ್ನ 3 ಗಂಟೆಗೆ ಕನ್ಯಾಕುಮಾರಿಯಿಂದ ಬೆಂಗಳೂರಿನತ್ತ ಪ್ರಯಾಣ ಆರಂಭವಾಗುತ್ತದೆ. ಮಾರ್ಗ ಮಧ್ಯೆ ಮಧ್ಯಾಹ್ನ ಮತ್ತು ರಾತ್ರಿಯ ಊಟದ ವ್ಯವಸ್ಥೆ ಇರಲಿದೆ. ಐದನೇ ದಿನ ಬೆಳಗ್ಗೆ ಯಶವಂತಪುರ ಬಿಎಂಟಿಸಿ ಬಸ್ ನಿಲ್ದಾಣಕ್ಕೆ ನಿಮ್ಮನ್ನು ತಲುಪಿಸಲಾಗುತ್ತದೆ.
ಟೂರ್ ಪ್ಯಾಕೇಜ್ ಬೆಲೆ ಎಷ್ಟು? (Tour Package Price)
ಪ್ರಯಾಣಿಕರು ಆಯ್ಕೆ ಮಾಡಿಕೊಳ್ಳುವ ಹೋಟೆಲ್ ರೂಮ್ ಮೇಲೆ ಬೆಲೆ ನಿರ್ಧರಿತವಾಗುತ್ತದೆ.
ಸಿಂಗಲ್ ಆಕ್ಯುಪೆನ್ಸಿ (Single Occupancy): 10,610 ರೂಪಾಯಿ
ಡಬಲ್ ಆಕ್ಯುಪೆನ್ಸಿ (Double Occupancy): 8,100 ರೂಪಾಯಿ
ತ್ರಿಪಲ್ ಆಕ್ಯುಪೆನ್ಸಿ (Triple Occupancy): 7,640 ರೂಪಾಯಿ
ಟಿಕೆಟ್ ಕಾಯ್ದಿರಿಸೋದು ಹೇಗೆ? (How To Book Ticket)
ಬಸ್ ಪ್ರಯಾಣ ದರ ಒಬ್ಬರಿಗೆ 11,080 ರೂಪಾಯಿ ಪಾವತಿಸಿಕೊಳ್ಳಬೇಕು. ಇದರ ಜೊತೆ ಹೋಟೆಲ್ ಆಯ್ಕೆ ಮೇಲೆ ನಿಮ್ಮ ಪ್ರವಾಸದ ಒಟ್ಟು ಹಣ ನಿರ್ಧಾರವಾಗುತ್ತದೆ. ಪ್ರವಾಸದಲ್ಲಿ ಪ್ರಯಾಣಿಕರಿಗೆ ತಿಂಡಿ, ಮಧ್ಯಾಹ್ನ ಮತ್ತು ರಾತ್ರಿಯ ಊಟವನ್ನು ನೀಡಲಾಗುತ್ತದೆ. ಈ ವಿಶೇಷ ಪ್ಯಾಕೇಜ್‌ನಲ್ಲಿ ಪ್ರವಾಸಕ್ಕೆ ತೆರಳಲು ಬಯಸುವ ಆಸಕ್ತರು https://kstdc.co/ ವೆಬ್‌ಸೈಟ್‌ಗೆ ಭೇಟಿ ನೀಡಬಹುದು ಅಥವಾ ಯಶವಂತಪುರ ಬಿಎಂಟಿಸಿ ಕಟ್ಟಡದ ನೆಲ ಮಹಡಿಯಲ್ಲಿರುವ ಕಚೇರಿಗೆ ಭೇಟಿ ನೀಡಿ ಟಿಕೆಟ್ ಕಾಯ್ದಿರಿಸಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.