
ದಿನ ಬೆಳಗಾದರೆ ಅದೇ ಮಳೆ..ತಂಪು ತಂಪಾಗಿರುವ ಇಳೆ..ಮಾನ್ಸೂನ್ ಶುರುವಾಗಿದೆ. ಜಿಟಿಜಿಟಿ ಅಂತ ಮಳೆ ಸುರೀತಿದೆ. ಬಳಲಿ ಹೋಗಿದ್ದ ಗಿಡಮರಗಳು ಹಚ್ಚ ಹಸಿರಾಗಿ ಕಂಗೊಳಿಸುತ್ತಿವೆ. ನದಿ-ತೊರೆಗಳು ಉಕ್ಕುಕ್ಕಿ ಹರಿಯುತ್ತಿವೆ. ಮನೆಯೊಳಗೆ ಬೆಚ್ಚಗೆ ಕುಳಿತಿದ್ದು ಬಿಸಿ ಬಿಸಿ ಟೀ, ಸುಟ್ಟ ಹಪ್ಪಳ ತಿಂದರೆ ಸ್ವರ್ಗವೇ ಸರಿ ಅನ್ನೋ ಭಾವನೆ. ಮಳೆ ಮೈ, ಮನಸ್ಸನ್ನು ಬೆಚ್ಚಗಾಗಿಸುತ್ತಿದೆ. ಮಳೆಗಾಲದಲ್ಲಿ ಮಲೆನಾಡು ಸ್ವರ್ಗವೇ ಸರಿ. ಪ್ರಕೃತಿ ಹಸಿರು ಸೀರೆಯುಟ್ಟು ಕಂಗೊಳಿಸುತ್ತದೆ. ಮನೆ, ರಸ್ತೆ, ಕಟ್ಟಡಗಳು ನೀರಲ್ಲಿ ಮಿಂದೆದ್ದಂತೆ ಶುಭ್ರವಾಗಿವೆ. ನಾಯಿ, ಬೆಕ್ಕುಗಳು ಚಳಿಯಿಂದ ಮುದುರಿಕೊಳ್ಳುತ್ತಿವೆ. ಇದೆಲ್ಲದರ ಮಧ್ಯೆ ಬೆಚ್ಚಗೆ ಸ್ನಾನ ಮಾಡಲು ಹಂಡೆಯಲ್ಲಿ ಬಿಸಿ ನೀರು ಕುದಿಯುತ್ತಿದೆ. ಒಟ್ನಲ್ಲಿ ಮಳೆ ಮತ್ತು ಮಳೆನಾಡು ಬೆಸ್ಟ್ ಕಾಂಬಿನೇಶನ್.
ಇದೆಲ್ಲದರ ಮಧ್ಯೆ ಇನ್‌ಸ್ಟಾಗ್ರಾಂನಲ್ಲಿ ಮಲೆನಾಡಿನ ಮಳೆಯ (Malnad rain) ಕುರಿತಾಗಿ ಕುವೆಂಪು ಅವರು ಬರೆದಿರುವ ಹಾಡು ವೈರಲ್ ಆಗ್ತಿದೆ. ಸದ್ದಿರದ ಪಸುರುಡೆಯ ಮಲೆನಾಡ ಬನಗಳಲಿ ಮೊರೆವ ತೊರೆಯೆಡೆಯಲ್ಲಿ ಗುಡಿಸಲೊಂದಿರಲಿ ಅನ್ನೋ ಕಾಡು ಕಿವಿಯಲ್ಲಿ ಗುಂಯ್‌ಗುಡುತ್ತಿದೆ. ಟ್ರಾವೆಲ್, ನೇಚರ್, ಟ್ರಕ್ಕಿಂಗ್, ಮಳೆ ಎಲ್ಲಾ ರೀತಿಯ ಫೋಟೋ, ವಿಡಿಯೋಗಳಿಗೆ ಜನರು ಈ ವಿಡಿಯೋವನ್ನು ಬಳಸಿ ಟ್ರೆಂಡ್ ಮಾಡುತ್ತಿದ್ದಾರೆ. ಕುವೆಂಪು ಮಲೆನಾಡನ್ನು ಬಣ್ಣಿಸಿರೋ ರೀತಿನೇ ಹಾಗಿದೆ. ಹಾಗಾದ್ರೆ ಮಾನ್ಸೂನ್‌ನಲ್ಲಿ ಮಲ್ನಾಡ್‌ನಲ್ಲಿ ಭೇಟಿ ನೀಡಬೇಕಾದ ಜಾಗಗಳು (Places) ಯಾವುವು? ಇಲ್ಲಿದೆ ಮಾಹಿತಿ.
ಬೆಂಗಳೂರಿನಿಂದ ಜಸ್ಟ್ 70 ಕಿ.ಮೀ ದೂರವಿರೋ ಸುಂದರ ತಾಣಗಳಿವು, ವೀಕೆಂಡ್ ಪ್ಲಾನ್‌ಗೆ ಬೆಸ್ಟ್
ಚಿಕ್ಕಮಗಳೂರು
ಕಾಫಿ ನಾಡು ಎಂದೇ ಕರೆಸಿಕೊಳ್ಳುವ ಚಿಕ್ಕಮಗಳೂರು ಸುಂದರವಾದ ಬೆಟ್ಟ, ಕಣಿವೆ, ಕಾಫಿ ಎಸ್ಟೇಟ್‌ಗಳಿಗೆ ಹೆಸರುವಾಸಿಯಾಗಿದೆ. ನೀವು ಫ್ಯಾಮಿಲಿ ಅಥವಾ ಫ್ರೆಂಡ್ಸ್ ಜೊತೆ ಟ್ರಿಪ್ ಪ್ಲಾನ್ ನೋಡುತ್ತಿದ್ದರೆ ಚಿಕ್ಕಮಗಳೂರಿನಲ್ಲಿ ನಿಮ್ಮ ರಜಾ ಯೋಜನೆಗಾಗಿ ಸಾಕಷ್ಟು ಆಯ್ಕೆಗಳಿವೆ. ನೀವು ಇಲ್ಲಿ ಮುಳ್ಳಯ್ಯನಗಿರಿ ಬೆಟ್ಟ, ಶೃಂಗೇರಿ ಶಾರದಾಂಬ ದೇವಾಲಯ, ಹೆಬ್ಬೆ ಜಲಪಾತ (Waterfalls), ಬಾಬಾ ಬುಡನ್‌ಗಿರಿ, ಭದ್ರಾ ವನ್ಯಜೀವಿ ಅಭಯಾರಣ್ಯ, ಕಲ್ಹಟ್ಟಿ ಫಾಲ್ಸ್ ಕುದುರೆ ಮುಖ ರಾಷ್ಟ್ರೀಯ ಉದ್ಯಾನವನ ಮೊದಲಾದ ಸ್ಥಳಗಳಿಗೆ ಭೇಟಿ ನೀಡಬಹುದು.
ಕೂರ್ಗ್
ಕೊಡಗು ಜಿಲ್ಲೆಯನ್ನು ಪ್ರವಾಸಿಗರು ಕೂರ್ಗ್ ಎಂದು ಕರೆಯುತ್ತಾರೆ. ಇದು ಕರ್ನಾಟಕದ ಅಗ್ರ ಗಿರಿಧಾಮಗಳಲ್ಲಿ ಒಂದಾಗಿದೆ. ಕೂರ್ಗ್ ತನ್ನ ಶ್ರೀಮಂತ ನೈಸರ್ಗಿಕ ಸೌಂದರ್ಯಕ್ಕಾಗಿ (Beauty) 'ಕರ್ನಾಟಕದ ಸ್ಕಾಟ್ಲೆಂಡ್' ಎಂದು ಕರೆಯಲ್ಪಡುತ್ತದೆ. ಕೂರ್ಗ್‌ನಲ್ಲಿರುವ ಹೋಮ್‌ಸ್ಟೇಗಳು ಪ್ರವಾಸಿಗರಿಗೆ ಪ್ರಮುಖ ಆಕರ್ಷಣೆಯಾಗಿದೆ. ಕೂರ್ಗ್‌ನಲ್ಲಿ ಹಲವಾರು ಪ್ರೇಕ್ಷಣೀಯ ಸ್ಥಳಗಳಿವೆ. ನೀವು ಇಲ್ಲಿನ ಕೋಟೆ, ಜಲಪಾತಗಳನ್ನು ವಿಸಿಟ್ ಮಾಡಬುದು. ಎಲ್ಲಕ್ಕಿಂತ ಮುಖ್ಯವಾಗಿ ಇಲ್ಲಿನ ಮಂಜು ಕವಿದ ವಾತಾವರಣವನ್ನು ಆಸ್ವಾದಿಸಬಹುದು.
ಭಾರತದಲ್ಲಿ ಮಾನ್ಸೂನ್ ವಿಸಿಟ್‌ಗೆ ಬೆಸ್ಟ್ ಪ್ಲೇಸ್ ಯಾವುದು, AI ಸಜೆಶನ್ಸ್ ಹೀಗಿದೆ
ಸಕಲೇಶಪುರ
ಸಕಲೇಶಪುರವು ವಿವಿಧ ಭವ್ಯವಾದ ದೇವಾಲಯಗಳಿಗೆ ನೆಲೆಯಾಗಿದೆ, ಭವ್ಯವಾದ ಕೋಟೆಗಳು (Forts), ಬೆರಗುಗೊಳಿಸುವ ಜಲಪಾತಗಳು, ಟ್ರಕ್ಕಿಂಗ್ ಹೋಗಬಹುದಾದ ಬೆಟ್ಟಗಳನ್ನು ಇಲ್ಲಿ ನೋಡಬಹುದು. ಬಿಸ್ಲೆ ಘಾಟ್ಸ್ ಟ್ರೆಕ್ಕಿಂಗ್ ಸಕಲೇಶಪುರದಲ್ಲಿ ನೀವು ಹೋಗಬಹುದಾದ ಪ್ರಸಿದ್ಧ ಟ್ರೆಕ್ಕಿಂಗ್ ತಾಣವಾಗಿದೆ. ಇದಲ್ಲದೆ ಮಂಜರಾಬಾದ್ ಕೋಟೆ, ಸಕಲೇಶ್ವರ ದೇವಸ್ಥಾನ, ಟ್ರೆಕ್ಕಿಂಗ್, ಕ್ಯಾಂಪಿಂಗ್ ಸಹ ಇಲ್ಲಿ ಅದ್ಭುತವಾಗಿರುತ್ತದೆ.
ತೀರ್ಥಹಳ್ಳಿ
ತೀರ್ಥಹಳ್ಳಿಯನ್ನು ಮಲೆನಾಡು ಭಾಗದ ಹೆಬ್ಬಾಗಿಲು ಎಂದು ಕರೆಯಲಾಗುತ್ತದೆ. ಶಿವಮೊಗ್ಗ ಜಿಲ್ಲೆಯ ತಾಲೂಕು ಕೇಂದ್ರವು ವಿಶ್ವಪ್ರಸಿದ್ಧ ಜಲಪಾತಗಳಾದ ಜೋಗ ಜಲಪಾತ ಸೇರಿದಂತೆ ಹಲವಾರು ಜಲಪಾತಗಳನ್ನು ಹೊಂದಿದೆ. ಮಾತ್ರವಲ್ಲ ತಾವರೆಕೊಪ್ಪ ಹುಲಿ, ಸಿಂಹ, ಸಫಾರಿ, ಶ್ರೀ ರಾಮೇಶ್ವರ ದೇವಾಲಯ, ನಾಗರ ಕೋಟೆ, ಸಿದ್ದೇಶ್ವರ ಗುಡ್ಡ, ತುಂಗಾ ಸೇತುವೆ ಮೊದಲಾದವುಗಳ ಸೌಂದರ್ಯವನ್ನು ಸವಿಯಬಹುದು. ಕವಲೇದುರ್ಗ, ಕೊಡಚಾದ್ರಿ ಮತ್ತು ಆಗುಂಬೆಯಂತಹ ಸ್ಥಳಗಳಿಗೆ ಚಾರಣ ಹೋಗಬಹುದು.
ಆಗುಂಬೆ
ಕರ್ನಾಟಕದ ಈ ಪ್ರಸಿದ್ಧ ಪಶ್ಚಿಮ ಘಟ್ಟ ತೀರ್ಥಹಳ್ಳಿಯ ಸಮೀಪದಲ್ಲಿದೆ. ನೀವು ಶೃಂಗೇರಿ, ಉಡುಪಿಗೆ ವಿಸಿಟ್ ಮಾಡಲು ಪ್ಲಾನ್ ಮಾಡುತ್ತಿದ್ದರೆ ಆಗುಂಬೆಯಲ್ಲಿ ಉಳಿದುಕೊಳ್ಳಬಹುದು. ಆಗುಂಬೆಯಲ್ಲಿ ಹಲವಾರು ಜಲಪಾತಗಳು, ಟ್ರೆಕ್ಕಿಂಗ್ ತಾಣಗಳು ಮತ್ತು ವ್ಯೂಪಾಯಿಂಟ್‌ಗಳು ನೋಡಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.