Travel
ಭಾರತದಲ್ಲಿ ಮಳೆಗಾಲದಲ್ಲಿ ಭೇಟಿ ನೀಡಲು AI ಕೆಲವು ಅತ್ಯುತ್ತಮ ಸ್ಥಳಗಳನ್ನು ಸೂಚಿಸಿದೆ.
ಜೋಗ್‌ಫಾಲ್ಸ್, ಭಾರತದ ಅತೀ ಎತ್ತರದ ಜಲಪಾತಗಳಲ್ಲಿ ಒಂದಾಗಿದೆ. ಇದು ಕರ್ನಾಟಕದ ಶಿವಮೊಗ್ಗದ ಜಿಲ್ಲೆಯಲ್ಲಿದ್ದು ಮಳೆಗಾಲದಲ್ಲಿ ಕಣ್ಮನ ಸೆಳೆಯುವಂತಿರುತ್ತದೆ,
ಗೋವಾದ ಮಾಂಡೋವಿ ನದಿಯ ಮೇಲಿರುವ ದೂಧ್‌ಸಾಗರ್ ಜಲಪಾತವು ಧುಮ್ಮಿಕ್ಕುವ ಹಾಲ್ನೊರೆಯಂತ ನೀರಿಗೆ ಹೆಸರುವಾಸಿಯಾಗಿದೆ. ಮಳೆಗಾಲದಲ್ಲಿ ಭೇಟಿ ನೀಡಲು ಉತ್ತಮ ಸ್ಥಳವಾಗಿದೆ.
ಅತಿರಪಲ್ಲಿ ಜಲಪಾತವು ಕೇರಳದ ತ್ರಿಶ್ಯೂರ್ ಜಿಲ್ಲೆಯಲ್ಲಿದೆ. ಇದನ್ನು ಭಾರತದ 'ನಯಾಗರ ಜಲಪಾತ' ಎಂದು ಸಹ ಕರೆಯುತ್ತಾರೆ. ಈ ಜಲಪಾತವು ದಟ್ಟವಾದ ಕಾಡುಗಳಿಂದ ಆವೃತವಾಗಿದೆ.
ಮೇಘಾಲಯದ ಚಿರಾಪುಂಜಿಯಲ್ಲಿರುವ ನೋಹ್ಕಲಿಕ್ಕೆ ಜಲಪಾತವು ಭಾರತದ ಅತೀ ಎತ್ತರದ ಜಲಪಾತಗಳಲ್ಲಿ ಒಂದಾಗಿದೆ. ಇದು ಸುಮಾರು 1100 ಅಡಿ ಎತ್ತರದಿಂದ ಕೆಳಗೆ ಬೀಳುತ್ತದೆ.
ಮಧ್ಯಪ್ರದೇಶದ ಜಬಲ್ಫುರ್ ಬಳಿಯ ಭೇದಘಾಟ್ ಜಲಪಾತವು ಅಮೃತಶಿಲೆಯ ಬಂಡೆಗಳಿಗೆ ಹೆಸರುವಾಸಿಯಾಗಿದೆ. ನರ್ಮದಾ ನದಿ ಸೇರಿ ಈ ಜಲಪಾತವು ಧುಮ್ಮಿಕ್ಕುತ್ತದೆ.
ಸೂಚಿಪಾರ ಜಲಪಾತವು ಕೇರಳದ ವಯನಾಡ್‌ನಲ್ಲಿರುವ ಒಂದು ಉತ್ತಮ ಪ್ರವಾಸಿ ತಾಣವಾಗಿದೆ. ಸೊಂಪಾದ ಕಾಡುಗಳಿಂದ ಸುತ್ತುವರೆದಿರುವ ಈ ಜಲಪಾತವು ರಾಕ್ ಕ್ಲೈಬಿಂಗ್, ಈಜು ಮುಂತಾದ ಚಟುವಟಿಕೆಗಳನ್ನು ಹೊಂದಿದೆ.
ಹೊಗೇನಕಲ್ ಜಲಪಾತವು ತಮಿಳುನಾಡಿನ ಕಾವೇರಿ ನದಿಯ ಸಮೀಪದಲ್ಲಿದೆ. ಇದನ್ನು ಪೂರ್ವದ ನಯಾಗರ ಎಂದು ಕರೆಯಲಾಗುತ್ತದೆ.