ಬೆಂಗಳೂರು ಟ್ರಾಫಿಕ್ ಅಂದ್ರೆ ಸಾಕು ನಿದ್ದೆಯಲ್ಲೂ ಬೆಚ್ಚಿಬೀಳುವಂತಾಗುತ್ತೆ. ಸಿಲಿಕಾನ್ ಸಿಟಿಯಲ್ಲಿ ಟ್ರಾವೆಲಿಂಗ್ ಟೈಂ ಲೆಕ್ಕ ಹಾಕೋದು ಕಿಲೋಮೀಟರ್ ಲೆಕ್ಕದಲ್ಲಿ ಅಲ್ಲ ಟ್ರಾಫಿಕ್ ಜಾಮ್ ಆಗಿರೋದನ್ನು ನೋಡಿ ಅನ್ನೋ ವಿಚಾರ ಈಗಾಗ್ಲೇ ಇನ್‌ಸ್ಟಾಗ್ರಾಂನಲ್ಲಿ ವೈರಲ್ ಆಗ್ತಿದೆ. ಹೀಗಿರುವಾಗ ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಆಗೋಕೆ ಕಾರಣವೇನು ಎಂಬುದಾಗಿ ಯಶವಂತಪುರ ಪೊಲೀಸರು ಟ್ವಿಟರ್‌ನಲ್ಲಿ ಕೇಳಿದ್ದಾರೆ.
ಬೆಂಗಳೂರು.ಇಲ್ಲಿನ ಸುಂದರವಾದ ವಾತಾವರಣದಿಂದಾಗಿ ಜನರು ಈ ಮಹಾನಗರವನ್ನು ಹೆಚ್ಚು ಇಷ್ಟಪಡುತ್ತಾರೆ. ಆದರೆ ಇತ್ತೀಚಿನ ಕೆಲ ವರ್ಷಗಳಲ್ಲಿ ಬೆಂಗಳೂರು ಕಿಕ್ಕಿರಿದ ಟ್ರಾಫಿಕ್‌ನಿಂದಾಗಿ ಹೆಚ್ಚು ಫೇಮಸ್ ಆಗುತ್ತಿದೆ. ಇಲ್ಲಿನ ಸಂಚಾರ ದಟ್ಟಣೆಯಿಂದಾಗಿಯೇ ಜನರು ಈ ನಗರವನ್ನು ದ್ವೇಷಿಸಲು ತೊಡಗಿದ್ದಾರೆ. ಪೀಕ್ ಅವರ್‌ಗಳಲ್ಲಂತೂ ರಸ್ತೆ ವಾಹನಗಳಿಂದ ಕಿಕ್ಕಿರಿದು ತುಂಬುತ್ತದೆ. ಕ್ಯಾಬ್, ಆಟೋ ರಿಕ್ಷಾಗಳು ಸಹ ಲಭ್ಯವಾಗುವುದಿಲ್ಲ. ಇದರಿಂದಾಗಿ ಪ್ರಯಾಣಿಕರು ವಿವಿಧ ಸ್ಥಳಗಳಲ್ಲಿ ಸಿಲುಕಿಕೊಳ್ಳುತ್ತಾರೆ. ಉದ್ದೇಶಿತ ಸ್ಥಳಕ್ಕೆ ನಿಗದಿತ ಸಮಯಕ್ಕೆ ಸರಿಯಾಗಿ ತಲುಪಲಾಗದೆ ತೊಂದರೆ ಅನುಭವಿಸುತ್ತಾರೆ.
ಬೆಂಗಳೂರಿನ ಟ್ರಾಫಿಕ್ ಅವ್ಯವಸ್ಥೆ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಅರ್ಧಗಂಟೆಯ ದಾರಿ ಟ್ರಾಫಿಕ್‌ನಲ್ಲಿ ತಲುಪೋಕೆ ಒಂದು ಗಂಟೆ ಹಿಡಿಯೋದು ಇದೆ. ಟ್ರಾಫಿಕ್ ನಿಯಂತ್ರಣಕ್ಕೆ ಪರ್ಯಾಯವಾಗಿ ಅದೆಷ್ಟೇ ವ್ಯವಸ್ಥೆ ಮಾಡಿಕೊಂಡ್ರೂ ದಿನವಿಡೀ ಬೆಂಗಳೂರಿನ ರಸ್ತೆಗಳಲ್ಲಿ (Bengaluru road) ಟ್ರಾಫಿಕ್ ಅಬ್ಬರವಂತೂ ಕಡಿಮೆಯಾಗೋದೆ ಇಲ್ಲ. ಮೆಟ್ರೋ, ಕ್ಯಾಬ್ ಎಂದು ಅದೆಷ್ಟೇ ವ್ಯವಸ್ಥೆಯಿದ್ದರೂ ಅವ್ಯವಸ್ಥೆ ಹಾಗೆಯೇ ಇರುತ್ತದೆ. ಮಹಾನಗರದ ಟ್ರಾಫಿಕ್‌ಗೆ ಕಾರಣ (Reason) ಏನು ಅನ್ನೋದನ್ನು ಹುಡುಕಲು ಹೊರಟರೆ ಉತ್ತರ ಸಿಗೋದು ಕಷ್ಟ. ಯಾಕೆಂದರೆ ಈ ರೀತಿ ಟ್ರಾಫಿಕ್ ಜಾಮ್ ಆಗಲು ಹಲವಾರು ಕಾರಣಗಳಿವೆ.
ಬೆಂಗಳೂರು ಐಟಿ ಕಂಪನಿಗಳಿಂದ ವರ್ಕ್ ಫ್ರಮ್ ಹೋಮ್ ವಾಪಸ್, ಔಟರ್ ರಿಂಗ್ ರೋಡ್ ಫುಲ್ ರಶ್!
ಟ್ರಾಫಿಕ್ ಬಗ್ಗೆ ಸಂಚಾರಿ ಪೊಲೀಸರು ಮಾಡಿರೋ ಟ್ವೀಟ್ ವೈರಲ್
ಸದ್ಯ ಈ ಕುರಿತಾಗಿ ಯಶವಂತಪುರ ಸಂಚಾರಿ ಪೊಲೀಸರು ಮಾಡಿರೋ ಟ್ವೀಟ್ ಸಖತ್ ವೈರಲ್ ಆಗಿದೆ. ಟ್ವಿಟರ್‌ನಲ್ಲಿ 'ಯಶವಂತಪುರ ಟ್ರಾಫಿಕ್ ಬಿಟಿಪಿ' ಅನ್ನೋ ಪೇಜ್‌ನಲ್ಲಿ, ಬೆಂಗಳೂರಿನ ಟ್ರಾಫಿಕ್‌ಗೆ ಕಾರಣವೇನು ಅನ್ನೋ ಪ್ರಶ್ನೆಯನ್ನು ಕೇಳಲಾಗಿದೆ. ಇದಕ್ಕೆ ಯಾರು ಸಹ ಉತ್ತರ (Answer) ನೀಡಬಹುದು. ಉತ್ತಮವಾಗಿ ಉತ್ತರ ನೀಡಿದವರು ಠಾಣೆಯಲ್ಲಿ ಬಂದು ಟೀ ಕುಡಿಯಬಹುದಾಗಿದೆ ಎಂಬ ಆಫರ್ ಮುಂದಿಡಲಾಗಿದೆ.
ಟ್ವೀಟ್‌ನಲ್ಲಿ, ಮೇಷ್ಟ್ರು:ಟ್ರಾಫಿಕ್ ಜಾಮ್ ಗಳು ಉಂಟಾಗಲು ಕಾರಣಗಳೇನು ಮತ್ತು ಅವುಗಳನ್ನು ಹೇಗೆ ನಿವಾರಿಸಬಹುದು? (1 ವಾಕ್ಯದಲ್ಲಿ ಉತ್ತರಿಸಿ), ಬುದ್ದಿವಂತ ವಿದ್ಯಾರ್ಥಿಗಳು ಈ ಕೂಡಲೇ ಉತ್ತರಿಸಬಹುದು..(ಪ್ರತಿಯೊಬ್ಬರೂ ಸಹ ವಿದ್ಯಾರ್ಥಿಗಳೇ ಅಂಬೋದು ಸತ್ಯ ಅಲ್ವಾ ), 'ಅತ್ಯೂತ್ತಮ ಉತ್ತರದ ಮಾಲೀಕರಿಗೆ ನಮ್ಮೊಟ್ಟಿಗೆ ಠಾಣೆಯಲ್ಲಿ ಕಾಫಿ ಕುಡಿಯುವ ಅವಕಾಶ ಉಂಟು' ಎಂದು ಪೋಸ್ಟ್ ಮಾಡಲಾಗಿದೆ. ಕೆಲವು ದಿನಗಳಿಂದ ಟ್ರಾಫಿಕ್ ಪೊಲೀಸರು ಮಾಡಿರೋ ಈ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ. ಪೋಸ್ಟ್ ಇಲ್ಲಿಯವರೆಗೆ 381 ಲೈಕ್ಸ್, 34 ರಿಟ್ವೀಟ್‌ಗಳನ್ನು ಪಡೆದುಕೊಂಡಿದೆ.
ವಾಹನ ಸವಾರರಿಗೆ ಮತ್ತೆ ಗುಡ್‌ನ್ಯೂಸ್, ಸಂಚಾರ ನಿಯಮ ಉಲ್ಲಂಘನೆಗೆ ದಂಡ ಕಟ್ಟಲು ಶೇ.50 ರಿಯಾಯಿತಿ
ವೈರಲ್ ಆಗಿರೋ ಪೋಸ್ಟ್‌ಗೆ ನೆಟ್ಟಿಗರು ಇದಕ್ಕೆ ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಬೆಂಗಳೂರಿನ ಟ್ರಾಫಿಕ್‌ಗೆ ಅಸಲಿ ಕಾರಣವೇನು ಎಂಬುದಕ್ಕೆ ತಮ್ಮ ಉತ್ತರವನ್ನು ನೀಡಿದ್ದಾರೆ. ಒಬ್ಬ ಬಳಕೆದಾರರು, 'ವಾಹನ ಸಂಚಾರದ ಕನಿಷ್ಠ ನಿಯಮ (Rules) ಪಾಲಿಸದೇ ಇರುವುದು. ಲೇನ್ ನಿಯಮ ಮೀರುವುದು. ಅವಸರ. ಏಕಕಾಲಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಜನರು ರಸ್ತೆಗೆ ಇಳಿಯುವುದು ಟ್ರಾಫಿಕ್ ಜಾಮ್‌ಗೆ ಕಾರಣ' ಎಂದು ವ್ಯಕ್ತಿಯೊಬ್ಬರು ಹೇಳಿದ್ದಾರೆ. ಇನ್ನೊಬ್ಬರು, 'ಜನಸಂಖ್ಯಾ ಸ್ಫೋಟ ಮತ್ತು ಉತ್ತರ ಭಾರತದ ವಲಸಿಗರು ದಕ್ಷಿಣದ ಕಡೆ ಮುಖ ಮಾಡುತ್ತಿರುವುದು. ಬೆಂಗಳೂರಿನಲ್ಲಿ ದಿನೇ ದಿನೇ ವಲಸಿಗರು ಹೆಚ್ಚುತ್ತಿದ್ದಾರೆ, ವಲಸೆ ಬರುವವರನ್ನು ತಡೆದರೆ ಸ್ವಲ್ಪ ಮಟ್ಟಿಗೆ ಟ್ರಾಫಿಕ್ ಕಮ್ಮಿ ಆಗುತ್ತದೆ' ಎಂದಿದ್ದಾರೆ.
ಮತ್ತೊಬ್ಬ ವ್ಯಕ್ತಿ, 'ಕಾರಣ - ಸರಿಯಾಗಿ ಟ್ರಾಫಿಕ್ ನಿಯಮವನ್ನು ಪಾಲಿಸದಿರುವುದು. ಎಲ್ಲರೂ ಸರಿಯಾಗಿ ಟ್ರಾಫಿಕ್ ನಿಯಮ ಪಾಲಿಸಿದರೆ ಸಮಸ್ಯೆಯನ್ನು ನಿವಾರಿಸುವುದು ಸುಲಭ' ಎಂದು ಪರಿಹಾರ ನೀಡಿದ್ದಾರೆ. ಮತ್ತೊಬ್ಬ ವ್ಯಕ್ತಿ, ಸಮೂಹ ಸಾರಿಗೆ ವ್ಯವಸ್ಥೆಯನ್ನು ಹೆಚ್ಚು ಬಳಸಬೇಕು ಎಂದು ಸಲಹೆ ನೀಡಿದ್ದಾರೆ. ಮತ್ತೊಬ್ಬ ಬಳಕೆದಾರರು, 'ಹಾಳಾದ ರಸ್ತೆಯಲ್ಲಿ ಟ್ರಾಫಿಕ್ ನಿಯಮ ಪಾಲಿಸದ ಸವಾರರನ್ನು ನೋಡಿಯೂ ನೋಡದಂತೆ ಟ್ರಾಫಿಕ್ ಪೊಲಿಸರು ಇರುವದೇ ಟ್ರಾಫಿಕ್ ಸಮಸ್ಯೆ ಹೆಚ್ಚಳಕ್ಕೆ ಕಾರಣ' ಎಂಬುದಾಗಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಆಗೋಕೆ ಕಾರಣವೇನು, ಇದನ್ನು ಕಡಿಮೆ ಮಾಡೋಕೆ ನೀವು ಸೂಚಿಸೋ ಸೊಲ್ಯೂಷನ್ ಏನು ಕಾಮೆಂಟ್‌ನಲ್ಲಿ ತಿಳಿಸಿ.
ಮೇಷ್ಟ್ರು:ಟ್ರಾಫಿಕ್ ಜಾಮ್ ಗಳು ಉಂಟಾಗಲು ಕಾರಣಗಳೇನು ಮತ್ತು ಅವುಗಳನ್ನು ಹೇಗೆ ನಿವಾರಿಸಬಹುದು?
(1 ವಾಕ್ಯದಲ್ಲಿ ಉತ್ತರಿಸಿ)
ಬುದ್ದಿವಂತ ವಿದ್ಯಾರ್ಥಿಗಳು ಈ ಕೂಡಲೇ ಉತ್ತರಿಸಬಹುದು..
(ಪ್ರತಿಯೊಬ್ಬರೂ ಸಹ ವಿದ್ಯಾರ್ಥಿಗಳೇ ಅಂಬೋದು ಸತ್ಯ ಅಲ್ವಾ )
"ಅತ್ಯೂತ್ತಮ ಉತ್ತರದ ಮಾಲೀಕರಿಗೆ ನಮ್ಮೊಟ್ಟಿಗೆ ಠಾಣೆಯಲ್ಲಿ ಕಾಫಿ ಕುಡಿಯುವ ಅವಕಾಶ ಉಂಟು" pic.twitter.com/EMhcuPATS9