ಪ್ರವಾಸಿಗರಿಗೆ ಜೀವ ಬಾಯಿಗೆ ಬರುವಂತೆ ಮಾಡಿದ ಹುಲಿರಾಯ: ನೋಡಿ ವೈರಲ್ ವೀಡಿಯೋ

By Anusha Kb  |  First Published Jun 4, 2023, 3:08 PM IST

ಪ್ರವಾಸಿಗರನ್ನು ಸಫಾರಿಗೆ ಕರೆದುಕೊಂಡು ಬಂದ ವಾಹನವೊಂದನ್ನು ಹುಲಿಯೊಂದು ಅಡ್ಡಗಟ್ಟಿ  ಮುಂದೆ ಸಾಗದಂತೆ ಅಡ್ಡಗಟ್ಟಿದೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. 


ಅಭಯಾರಣ್ಯಗಳಿಗೆ ಪ್ರವಾಸ ಹೋಗುವ ಜನರಿಗೆ ಕೆಲವೊಮ್ಮೆ ರೋಚಕ ಹಾಗೂ ಭಯಾನಕ ಅನುಭವವಾಗುತ್ತದೆ. ಹುಲಿ, ಸಿಂಹ ಚಿರತೆ ಆನೆ ಮುಂತಾದ ಪ್ರಾಣಿಗಳು ದಿಢೀರನ್ನೇ ಎದುರು ಬಂದು ನಿಮ್ಮೆ ಮೈ ರೋಮ ನವಿರೇಳುವಂತೆ ಮಾಡುತ್ತವೆ. ಅದೇ ರೀತಿ ಇಲ್ಲೊಂದು ಕಡೆ ಪ್ರವಾಸಿಗರಿಗೆ ಮೈ ನಡುಗುವ ಅನುಭವ ಆಗಿದೆ. ಪ್ರವಾಸಿಗರನ್ನು ಸಫಾರಿ ಕರೆದುಕೊಂಡು ಬಂದ ವಾಹನವೊಂದನ್ನು ಹುಲಿಯೊಂದು ಅಡ್ಡಗಟ್ಟಿ ವಾಹನವನ್ನು ಮುಂದೆ ಸಾಗದಂತೆ ಅಡ್ಡಗಟ್ಟಿದೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. 

@Bellaasays2 ಎಂಬ ಟ್ವಿಟ್ಟರ್ ಪೇಜ್‌ನಿಂದ ಈ 9 ಸೆಕೆಂಡ್‌ಗಳ ಈ ವೀಡಿಯೋ ಅಪ್‌ಲೋಡ್ ಮಾಡಲಾಗಿದೆ. ವೀಡಿಯೋದಲ್ಲಿ ಕಾಣುವಂತೆ ಹುಲಿಯೊಂದು ಪ್ರವಾಸಿ ವಾಹನವನ್ನು ತನ್ನೆರಡು ಮುಂಗಾಲುಗಳನ್ನು ವಾಹನದ ಕಿಟಕಿಗಳ ಮೇಲಿಟ್ಟು ಹಿಡಿಯಲು ಯತ್ನಿಸಿದ. ಈ ವೇಳೆ ವಾಹನ ಸವಾರ ನಿಧಾನವಾಗಿ ವಾಹನವನ್ನು ಮುಂದೆ ಕೊಂಡೊಯ್ದಿದ್ದು, ಹುಲಿ ನಂತರ ತನ್ನ ಕಾಲುಗಳನ್ನು ನೆಲಕ್ಕಿಳಿಸಿದೆ. ಈ ವೀಡಿಯೋ ನೋಡುಗರ ಮೈ ಝುಮ್ಮೆನಿಸುತ್ತಿದ್ದು, ಅನೇಕರು ಕಾಮೆಂಟ್ ಮಾಡಿದ್ದಾರೆ. 

Tap to resize

Latest Videos

ಹುಲಿಗಳು ಸದಾ ಗಂಭೀರವಾಗಿರುವ ಕ್ರೂರ ಪ್ರಾಣಿಗಳಾಗಿದ್ದರೂ ಹೊಟ್ಟೆ ಹಸಿಯದ ಹೊರತು ಅವುಗಳು ಬೇರೆ ಯಾರ ಮೇಲೂ ದಾಳಿಗೆ ಮುಂದಾಗುವುದಿಲ್ಲ, ಆದರೆ ಕೆಣಕಿದರೆ ಮಾತ್ರ ಸುಮ್ಮನೇ ಬಿಡುವ ಪ್ರಶ್ನೆಯೇ ಇಲ್ಲ, ಅದೇ ರೀತಿ ಇಲ್ಲಿ  ಪ್ರವಾಸಿಗರ ಬೊಬ್ಬೆಗೆ ಹುಲಿಗೆ ಗಜಿಬಿಜಿಯಾಗಿದ್ದು, ವಾಹನವನ್ನು ಅಡ್ಡಹಾಕಲು ಮುಂದಾಗಿದೆ. ಈ ವೇಳೆ ವಾಹನ ಚಾಲಕ ಜಾಣತನದಿಂದ ಚಾಲನೆ ಮಾಡಿ ಪ್ರವಾಸಿಗರನ್ನು ರಕ್ಷಿಸಿದ್ದಾನೆ. 

ಸಫಾರಿಗೆ ಹೋದವರ ಮೇಲೆ ಅಟ್ಟಿಸಿಕೊಂಡು ಹೋದ ವ್ಯಾಘ್ರ: ಪ್ರವಾಸಿಗರು ಜಸ್ಟ್ ಮಿಸ್!

80 ಸಾವಿರಕ್ಕೂ ಹೆಚ್ಚು ಜನ ಈ ವೀಡಿಯೋವನ್ನು ವೀಕ್ಷಿಸಿದ್ದು, ಅನೇಕರು  ಹಲವು ರೀತಿಯ ಕಾಮೆಂಟ್ ಮಾಡಿದ್ದಾರೆ. ಅನೇಕರು ಹಾಸ್ಯಮಯವಾಗಿ ಕಾಮೆಂಟ್ ಮಾಡಿದ್ದಾರೆ. ನಿಮ್ಮ ಲಂಚ್‌ ಬಾಕ್ಸ್‌ ನಿಮ್ಮ ಕಣ್ಣೆದುರೇ ಚಲಿಸಿಕೊಂಡು ಹೋಗುತ್ತಿದ್ದರೆ ಸುಮ್ಮನಿರಲಾಗುತ್ತದೆಯೇ ಎಂದು ಒಬ್ಬರು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ. ಆಹಾರದ ಟ್ರಕ್ ಆಹಾರ (FOOD)ನೀಡದೇ ಎಲ್ಲಿ ಹೋಗುತ್ತಿದೆ ಎಂದು ಹುಲಿ ಅಡ್ಡ ಹಾಕಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.  ಬಹುಶಃ ಹುಲಿಗಳು ಗಾಡಿಯಲ್ಲಿ ಆಹಾರವಿದೆ ಎಂದು ಭಾವಿಸಿರಬೇಕು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

Scary or crazy? 🐅 pic.twitter.com/5RMCsw7Y3Q

— ♤ (@Bellaasays2)

 

ತಬ್ಬಲಿ ಹುಲಿಮರಿಗಳಿಗೆ ಹಾಲು ನೀಡುತ್ತಾ ಅಮ್ಮನಂತೆ ಆರೈಕೆ ಮಾಡ್ತಿದೆ ಚಿಂಪಾಂಜಿ

ಕೆಲ ದಿನಗಳ ಹಿಂದೆ ಲ್ಯಾಬ್ರಡಾರ್‌ ತಳಿಯ ಶ್ವಾನವೊಂದು ತಬ್ಬಲಿ ಹುಲಿಮರಿಗಳಿಗೆ ಅಮ್ಮನಂತೆ ಪ್ರೀತಿ ತೋರಿ ಆರೈಕೆ ಮಾಡುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಅದೇ ರೀತಿ ಚಿಂಪಾಂಜಿಯೊಂದು ಮೂರು ಹುಲಿ ಮರಿಗಳಿಗೆ ಬಾಟಲ್ ಹಾಲು ಕುಡಿಸುತ್ತಾ ಆರೈಕೆ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಮೆರಿಕಾದ ದಕ್ಷಿಣ ಕೆರೊಲಿನಾದ ಮಿರ್ಟಲ್ ಬೀಚ್ ಸಫಾರಿಯಲ್ಲಿ ಕಂಡು ಬಂದ ದೃಶ್ಯ ಇದಾಗಿದ್ದು, ಚಿಂಪಾಜಿಯೊಂದು ತನ್ನದಲ್ಲದ ಹುಲಿಯ ಮರಿಗಳನ್ನು ತನ್ನ ಮಕ್ಕಳಂತೆ ಆರೈಕೆ ಮಾಡುತ್ತಿದೆ. ತಾಯಿ ತೊರೆದ ಮುದ್ದಾದ ಮರಿಗಳಿಗೆ ಈ ಚಿಂಪಾಜಿ ಬಾಟಲ್ ಹಾಲು ನೀಡುತ್ತ ಮಡಿಲಲ್ಲಿ ಮಲಗಿಸಿಕೊಂಡು ಎತ್ತಿ ಆಡಿಸುತ್ತಾ ಮುದ್ದಾಡುತ್ತಿದೆ. ಹುಲಿ ಮರಿಗಳು ಕೂಡ ಈ ಚಿಂಪಾಜಿಯಲ್ಲೇ ತಮ್ಮ ತಾಯಿಯನ್ನು ಕಾಣುತ್ತಿವೆ. 

ಚೆನ್ನೈನಿಂದ ಬನ್ನೇರುಘಟ್ಟ ಮೃಗಾಲಯಕ್ಕೆ ಬಂತು ಅಪರೂಪದ ಮೋಸ್ಟ್ ಅಟ್ರಾಕ್ಟಿವ್ ಬಂಗಾಳ ಬಿಳಿ ಹುಲಿ!

ಮನುಷ್ಯರು ಮಾತ್ರವಲ್ಲ ಪ್ರಾಣಿಗಳು ಕೂಡ ಪರಸ್ಪರ ಸ್ನೇಹ ಬಾಂಧವ್ಯ ಬಯಸುತ್ತವೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ. ಮನುಷ್ಯನೇ ಕೆಲವೊಮ್ಮೆ ತನ್ನ ಮಕ್ಕಳ ಹೊರತಾಗಿ ಬೇರೆ ಮಕ್ಕಳನ್ನು ತನ್ನ ಮಕ್ಕಳಂತೆ ನೋಡಲಾರ ಅಂತಹದರಲ್ಲಿ ಪ್ರಾಣಿಯೊಂದು ತನ್ನದಲ್ಲದ ಮುದ್ದು ಹುಲಿ ಮರಿಗಳನ್ನು ತನ್ನ ಮರಿಗಳಿಗಿಂತ ಮಿಗಿಲಾಗಿ ಆರೈಕೆ ಮಾಡುತ್ತಿದೆ. ಎಲ್ಲರ ಹೃದಯವನ್ನು ಭಾವುಕವಾಗಿಸಿದೆ. ಈ ವಿಡಿಯೋ ನೋಡಿದ ಅನೇಕರು ಈ ತಾಯಿ ಪ್ರೀತಿ ತೋರುತ್ತಿರುವ ಚಿಂಪಾಜಿಯ ಗುಣಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಐಎಫ್ಎಸ್ (IFS) ಅಧಿಕಾರಿ ಸಮರ್ಥ್‌ ಗೌಡ ಅವರು ಈ ವಿಡಿಯೋವನ್ನುತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಸುಂದರ ದೃಶ್ಯಕ್ಕೆ ಸೂಕ್ತವಾದ ಶೀರ್ಷಿಕೆ ನೀಡಬಹುದೇ ಎಂದು ಅವರು ಬರೆದುಕೊಂಡಿದ್ದಾರೆ.  ಯಾವುದೇ ಶರತ್ತುಗಳಿಲ್ಲದ ತುಂಬಾ ಶುದ್ಧವಾದ ಪ್ರೀತಿ ಇದು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.

click me!