Viral Video: ಅಜ್ಜಿಯನ್ನು ಪ್ಯಾರಿಸ್ ಟೂರ್‌ಗೆ ಕರೆದೊಯ್ದ ಮೊಮ್ಮಕ್ಕಳು, ನೆಟ್ಟಿಗರಿಂದ ಮೆಚ್ಚುಗೆ

By Vinutha Perla  |  First Published May 25, 2023, 1:23 PM IST

ವಿದೇಶಕ್ಕೆ ಹೋಗುವುದು ಸಾಮಾನ್ಯವಾಗಿ ಎಲ್ಲರೂ ಕನಸು. ಎಜುಕೇಷನ್, ಜಾಬ್ ಹೀಗೆ ಯಾವುದಾದರೂ ನೆಪದಲ್ಲಿ ಫಾರಿನ್‌ಗೆ ಹೋಗ್ಬೇಕು, ಲೈಫ್ ಎಂಜಾಯ್ ಮಾಡ್ಬೇಕು ಅಂತ ಕನಸು ಕಾಣ್ತಾರೆ. ಹೀಗಿರುವಾಗ ಇಲ್ಲಿಬ್ಬರು ಮೊಮ್ಮಕ್ಕಳು ತಮ್ಮ ಅಜ್ಜಿಯನ್ನು ಫಾರಿನ್ ಕರೆದುಕೊಂಡು ಹೋಗಿ ಸರ್‌ಪ್ರೈಸ್ ನೀಡಿದ್ದಾರೆ.


ಜೀವನದಲ್ಲಿ ಒಮ್ಮೆಯಾದ್ರೂ ಫಾರಿನ್ ಹೋಗ್ಬೇಕು. ಲೈಫ್ ಎಂಜಾಯ್ ಮಾಡ್ಬೇಕು ಅನ್ನೋದು ಹಲವರ ಕನಸು. ಆದ್ರೆ ದುಡ್ಡಿನ ಸಮಸ್ಯೆಯಿಂದ ಹಲವರಿಗೆ ಇದು ಸಾಧ್ಯವಾಗುವುದಿಲ್ಲ. ಹೀಗಾಗಿ ಹೈಯರ್ ಎಜುಕೇಶನ್‌ಗಾದ್ರೂ ವಿದೇಶಕ್ಕೆ ಹೋಗ್ಬೇಕು ಎಂದು ಹಲವರು ಅಂದುಕೊಳ್ತಾರೆ. ಮತ್ತೆ ಕೆಲವರು ಜಾಬ್‌ಗೆ ಸೇರಿ ಸೇವಿಂಗ್ಸ್ ಮಾಡಿ ಫಾರಿನ್ ಟ್ರಿಪ್ ಮಾಡ್ಬೇಕು ಎಂದು ಪ್ಲಾನ್ ಮಾಡುತ್ತಾರೆ. ಅಪರೂಪಕ್ಕೆ ಕೆಲವರು ತಮ್ಮ ಅಪ್ಪ-ಅಮ್ಮನನ್ನೂ ವಿದೇಶಕ್ಕೆ ಕರೆದೊಯ್ಯುವ ಪ್ಲಾನ್ ಮಾಡುತ್ತಾರೆ. ಆದ್ರೆ ಇಲ್ಲಿ ಇಬ್ಬರು ಯುವಕರು ತಮ್ಮ ಅಜ್ಜಿಯನ್ನು ಫ್ಲೈಟ್‌ನಲ್ಲಿ ಫಾರಿನ್ ಟ್ರಿಪ್‌ಗೆ ಕೊಂಡೊಯ್ದಿದ್ದಾರೆ. 

ಪ್ಯಾರಿಸ್ ಮತ್ತು ಇಟಲಿಗೆ ಪ್ರವಾಸದ ಮೂಲಕ ತಮ್ಮ ಅಜ್ಜಿಯನ್ನು (Grandmother) ಅಚ್ಚರಿಗೊಳಿಸಲು ನಿರ್ಧರಿಸಿದ ನಂತರ ಇಬ್ಬರು ಸಹೋದರರು ಫಾರಿನ್‌ಗೆ ಟಿಕೆಟ್ ಬುಕ್ ಮಾಡಿದರು. ಅಜ್ಜಿ ತನ್ನ ಪ್ಯಾರಿಸ್ ಪ್ರವಾಸ (Paris trip)ವನ್ನು ಆನಂದಿಸುತ್ತಿರುವ ವೀಡಿಯೊವನ್ನು ಇಬ್ಬರು ಯುವಕರು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

Tap to resize

Latest Videos

ಜೀವನದಲ್ಲಿ ಒಮ್ಮೆಯಾದರೂ ನೋಡಲೇಬೇಕಾದ ಪ್ರಪಂಚದ 7 ಅದ್ಭುತ ರಸ್ತೆಗಳಿವು!

ಯುಕೆಯಲ್ಲಿ ನೆಲೆಸಿರುವ ಸಹೋದರರಿಂದ ಅಜ್ಜಿಗೆ ಸರ್‌ಪ್ರೈಸ್ ಟ್ರಿಪ್‌
ಪ್ರಸ್ತುತ ಯುಕೆಯಲ್ಲಿ ನೆಲೆಸಿರುವ ಮತ್ತು ದಂತವೈದ್ಯರಾಗಿ ಕೆಲಸ ಮಾಡುತ್ತಿರುವ ಸಹೋದರರು (Brothers) ವೀಡಿಯೊವನ್ನು ಹಂಚಿಕೊಂಡಿದ್ದಾರೆ. 'ನಮ್ಮ ಅಜ್ಜಿ ನಮ್ಮನ್ನು ಬೆಳೆಸಲು ಸಾಕಷ್ಟು ಕಷ್ಟಪಟ್ಟಿದ್ದರು ಎಂಬುದನ್ನು ಬಹಿರಂಗಪಡಿಸಿದ್ದಾರೆ. ಆದ್ದರಿಂದ, ಅವರು ಜೀವನದಲ್ಲಿ ಅತ್ಯಂತ ಹೆಚ್ಚು ಖುಷಿಯನ್ನು (Happiness) ನೋಡಬೇಕೆಂದು ನಾವು ಬಯಸಿದ್ದೆವು' ಎಂದು ಯುವಕರಿಬ್ಬರು ಹೇಳಿದ್ದಾರೆ. ನಂತರ ಇಬ್ಬರೂ ಮಾತನಾಡಿಕೊಂಡು ಅಜ್ಜಿಯನ್ನು ಪ್ಯಾರಿಸ್ ಪ್ರವಾಸಕ್ಕೆ ಕರೆದೊಯ್ಯಲು ನಿರ್ಧರಿಸಿದರು. ತಮ್ಮ ಪ್ರವಾಸದ ಕ್ಷಣಗಳನ್ನು ಹಂಚಿಕೊಳ್ಳಲು ಅವರ Instagram ಹ್ಯಾಂಡಲ್‌ಗೆ ತೆಗೆದುಕೊಂಡರು ಮತ್ತು ಅಜ್ಜಿ ಅಂತಿಮವಾಗಿ ತನ್ನ ಜೀವನ (Life)ವನ್ನು ಪೂರ್ಣವಾಗಿ ಬದುಕಿದಂತಿದೆ ಎಂದು ಹೇಳಿಕೊಂಡರು.

undefined

ವೀಡಿಯೊದಲ್ಲಿ, ಅವರು ಪ್ಯಾರಿಸ್‌ನಲ್ಲಿರುವ ತಮ್ಮ ಹೋಟೆಲ್ ಕೊಠಡಿಯಿಂದ ಅಜ್ಜಿ ಹೊರಗಿನ ವೀಕ್ಷಣೆಯನ್ನು ಆನಂದಿಸುತ್ತಿರುವುದನ್ನು ಕಾಣಬಹುದು. ಇದಲ್ಲದೆ, ವೀಡಿಯೊದಲ್ಲಿ, ಅವರು ಪ್ಯಾರಿಸ್‌ನ ಬೀದಿಗಳಲ್ಲಿ ಸುತ್ತಾಡುತ್ತಿದ್ದಾರೆ. ಶಾಪಿಂಗ್‌ಗೆ ಹೋಗುತ್ತಿದ್ದಾರೆ. ಐಫೆಲ್ ಟವರ್ ಬಳಿ ಎಲ್ಲರೂ ಪೋಸ್ ನೀಡುವುದನ್ನು ನೋಡಬಹುದು. ವೀಡಿಯೊಗೆ ಶೀರ್ಷಿಕೆ, 'ನಮ್ಮ ಅಜ್ಜಿಯನ್ನು ಅತ್ಯುತ್ತಮವಾಗಿ ಬದುಕುವಂತೆ ಮಾಡುವುದು ನಮ್ಮ ಕರ್ತವ್ಯ. ಅವಳು ತನ್ನ ಜೀವನದ ಬಹುಪಾಲು ಸಮಯವನ್ನು ನಮ್ಮನ್ನು ಬೆಳೆಸುವುದಕ್ಕೆ ಕಳೆದಳು. ಆದ್ದರಿಂದ, ಈಗ ಇದು ನಮ್ಮ ಸರದಿ' ಎಂದು ನೀಡಲಾಗಿದೆ.

ಭಾರತದ ಈ ರೈಲು ಹತ್ತೋಕೆ ಟಿಕೆಟ್ ಬೇಕಾಗಿಲ್ಲ, ಎಷ್ಟು ದೂರ ಬೇಕಾದ್ರೂ ಫ್ರೀಯಾಗಿ ಹೋಗ್ಬೋದು!

ಯುವಕರ ಕಾರ್ಯಕ್ಕೆ ನೆಟ್ಟಿಗರಿಂದ ಮೆಚ್ಚುಗೆ
ಆನ್‌ಲೈನ್‌ನಲ್ಲಿ ಹಂಚಿಕೊಂಡಾಗಿನಿಂದ, ವೀಡಿಯೊ Instagramನಲ್ಲಿ 367K ಲೈಕ್‌ಗಳನ್ನು ಗಳಿಸಿದೆ ಮತ್ತು ಸಾಮಾಜಿಕ ಮಾಧ್ಯಮ ಬಳಕೆದಾರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಒಬ್ಬ ಬಳಕೆದಾರರು (User) 'ಇದು ಯಶಸ್ಸಿನ (Success) ವ್ಯಾಖ್ಯಾನವಾಗಿದೆ. ಹಣ, ಉದ್ಯೋಗಕ್ಕಿಂತ ನಾವು ನಮ್ಮವರನ್ನು ಹೇಗೆ ನೋಡಿಕೊಳ್ಳುತ್ತೇವೆ' ಅನ್ನೋದು ಮುಖ್ಯ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು 'ದೇವರು ನಿಮ್ಮಂತೆ ಪ್ರತಿಯೊಬ್ಬ ತಾಯಿಯ ಮಗನನ್ನು ಆಶೀರ್ವದಿಸಲಿ. ಅವಳನ್ನು ಹೊಂದಲು ನೀವು ಎಷ್ಟು ಅದೃಷ್ಟವಂತರು, ಅವರು ನಿಮ್ಮನ್ನು ಹೊಂದಲು ಸಹ ಅದೃಷ್ಟವಂತರು' ಎಂದು ಬರೆದುಕೊಂಡಿದ್ದಾರೆ. ಅದೇನೆ ಇರ್ಲಿ ಅಜ್ಜಿ ಪ್ರವಾಸವನ್ನು ಎಂಜಾಯ್ ಮಾಡೋದನ್ನು ನೋಡೋದಕ್ಕಂತೂ ತುಂಬಾ ಖುಷಿಯಾಗುತ್ತದೆ.

 
 
 
 
 
 
 
 
 
 
 
 
 
 
 

A post shared by Dr Usama Ahmed (@drusamayt)

Travel Tips: ವಿಮಾನ ಪ್ರಯಾಣ ಸುಖಕರವಾಗಿರ್ಬೇಕೆಂದ್ರೆ ಆಹಾರ ಹೀಗಿರಲಿ

click me!