ಉತ್ತರಾಖಂಡದಲ್ಲಿ ನೋಡಲೇಬೇಕಾದ ಸ್ಥಳಗಳಿವು; ಫೋಟೋ ಹಂಚಿಕೊಂಡ ಪ್ರಧಾನಿ ಮೋದಿ

By Vinutha Perla  |  First Published Oct 14, 2023, 4:30 PM IST

ಎರಡು ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಉತ್ತರಾಖಂಡಕ್ಕೆ ಭೇಟಿ ನೀಡಿದ್ದರು. ಅಲ್ಲಿನ ಪ್ರಸಿದ್ಧ ಆಧ್ಯಾತ್ಮಿಕ ಕ್ಷೇತ್ರವಾದ ಪಿಥೋರ್‌ಗಡ್‌ನಲ್ಲಿರುವ ಪವಿತ್ರ ಪಾರ್ವತಿ ಕುಂಡದಲ್ಲಿ ಪ್ರಧಾನಿ ಮೋದಿ ಪೂಜೆ ಸಲ್ಲಿಸಿದರು. ಪ್ರವಾಸದ ವಿವರಗಳನ್ನು ಪ್ರಧಾನಿ ಮೋದಿ, ಎಕ್ಸ್​ ನಲ್ಲಿ ಹಂಚಿಕೊಂಡಿದ್ದಾರೆ.


ನವದೆಹಲಿ: ಎರಡು ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಉತ್ತರಾಖಂಡಕ್ಕೆ ಭೇಟಿ ನೀಡಿದ್ದರು. ಅಲ್ಲಿನ ಪ್ರಸಿದ್ಧ ಆಧ್ಯಾತ್ಮಿಕ ಕ್ಷೇತ್ರವಾದ ಪಿಥೋರ್‌ಗಡ್‌ನಲ್ಲಿರುವ ಪವಿತ್ರ ಪಾರ್ವತಿ ಕುಂಡದಲ್ಲಿ ಪ್ರಧಾನಿ ಮೋದಿ ಪೂಜೆ ಸಲ್ಲಿಸಿದರು. ಡಮರುಗ ಮತ್ತು ಶಂಖನಾದಗಳನ್ನು ಬಳಸಿ ಶಿವನನ್ನು ಪ್ರಾರ್ಥಿಸಿದರು. ಈ ಸಂದರ್ಭದಲ್ಲಿ ಮೋದಿ ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡರು. ತಲೆಗೆ ಪೇಟ ತೊಟ್ಟು ಸ್ಥಳೀಯ ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿ ಮೋದಿ ಪೂಜೆಗಳಲ್ಲಿ ಪಾಲ್ಗೊಂಡರು. ಉತ್ತರಾಖಂಡದ ಪಾರ್ವತಿ ಕುಂಡ ಮತ್ತು ಜಾಗೇಶ್ವರ ದೇವಸ್ಥಾನಗಳಿಗೆ ಭೇಟಿ ನೀಡಿದ್ದು ವಿಶೇಷ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ತಮ್ಮ ಪ್ರವಾಸದ ವಿವರಗಳನ್ನು ಎಕ್ಸ್​ ನಲ್ಲಿ ಹಂಚಿಕೊಂಡಿರುವ ಪ್ರಧಾನಿ ಮೋದಿ, 'ಉತ್ತರಾಖಂಡದ ಪಿಥೋರ್‌ಗಢ್‌ನಲ್ಲಿರುವ ಪವಿತ್ರ ಪಾರ್ವತಿ ಕುಂಡವನ್ನು ನೋಡಿದ ನಂತರ ನನಗೆ ತುಂಬಾ ಸಂತೋಷವಾಯಿತು. ಪೂಜೆಗಳನ್ನು ಮಾಡಿ, ಮನಸ್ಸಿನಲ್ಲಿ ಧನ್ಯತಾ ಭಾವ ಮೂಡಿತು. ಉತ್ತರಾಖಂಡದಲ್ಲಿ ನೀವು ಭೇಟಿ ನೀಡಲೇಬೇಕಾದ ಸ್ಥಳವಿದ್ದರೆ ಅದು ಯಾವ ಸ್ಥಳವಾಗಿದೆ ಎಂದು ಯಾರಾದರೂ ನನ್ನನ್ನು ಕೇಳಿದರೆ ನಾನು ಪಾರ್ವತಿ ಕುಂಡ್ ಮತ್ತು ಜಾಗೇಶ್ವರ ದೇವಾಲಯಗಳಿಗೆ ಭೇಟಿ ನೀಡಬೇಕೆಂದು ಹೇಳುತ್ತೇನೆ. ಇಲ್ಲಿನ ಪ್ರಾಕೃತಿಕ ಸೌಂದರ್ಯ ಮತ್ತು ದೈವತ್ವವು ನಿಮ್ಮನ್ನು ಮಂತ್ರಮುಗ್ಧರನ್ನಾಗಿಸುತ್ತದೆ' ಎಂದು ಪೋಸ್ಟ್ ಮಾಡಿದ್ದಾರೆ.

Tap to resize

Latest Videos

ದೇವಭೂಮಿಯ ಆದಿ ಕೈಲಾಸ, ಪಾರ್ವತಿ ಕುಂಡದಲ್ಲಿ ಪ್ರಧಾನಿ ಮೋದಿ ಪೂಜೆ!

'ಉತ್ತರಾಖಂಡದಲ್ಲಿ ಭೇಟಿ ನೀಡಲು ಯೋಗ್ಯವಾದ ಅನೇಕ ಸ್ಥಳಗಳಿವೆ. ಇಲ್ಲಿಗೆ ಪ್ರವಾಸಿಗರು ಸಾಕಷ್ಟು ಸಂಖ್ಯೆಯಲ್ಲಿ ಬರುತ್ತಾರೆ. ನಾನು ಕೂಡ ಈ ರಾಜ್ಯಕ್ಕೆ ಹಲವು ಬಾರಿ ಭೇಟಿ ನೀಡಿದ್ದೇನೆ. ಕೇದಾರನಾಥ, ಬದರಿನಾಥ ಮುಂತಾದ ಪುಣ್ಯ ಕ್ಷೇತ್ರಗಳಿಗೆ ಹೋದೆ. ಈ ಸ್ಥಳಗಳು ನನಗೆ ಮಧುರವಾದ ಭಾವನೆಯನ್ನು ತಂದವು. ಆದರೆ ನಾನು ನನ್ನ ಜೀವನದಲ್ಲಿ ಪಾರ್ವತಿ ಕುಂಡ್ ಮತ್ತು ಜಗೇಶ್ವರ ದೇವಾಲಯಗಳಿಗೆ ಭೇಟಿ ನೀಡುವುದನ್ನು ಎಂದಿಗೂ ಮರೆಯುವುದಿಲ್ಲ' ಎಂದು ಮೋದಿ ಹೇಳಿದ್ದಾರೆ.

ಪಿಥೋರಗಢದಲ್ಲಿರುವ ಪಾರ್ವತಿ ಕುಂಡ್ ಭಾರತದ ಅತ್ಯಂತ ಪೂಜ್ಯ ದೇವಾಲಯಗಳಲ್ಲಿ ಒಂದಾಗಿದೆ. ಸುಮಾರು 5,338 ಅಡಿ ಎತ್ತರದಲ್ಲಿರುವ ಹಿಂದೂ ಯಾತ್ರಾಸ್ಥಳವು ಪ್ರತಿವರ್ಷ ಭಕ್ತರನ್ನು ಸೆಳೆಯುತ್ತದೆ. ಈ ತಾಣವು ಮಹಾನ್ ಆಧ್ಯಾತ್ಮಿಕ ಮಹತ್ವವನ್ನು ಹೊಂದಿದೆ. ಇದು ಶಿವ ಮತ್ತು ಪಾರ್ವತಿ ದೇವಿಯು ಧ್ಯಾನ ಮಾಡಿದ ಸ್ಥಳವೆಂದು ನಂಬಲಾಗಿದೆ. ದೈವಿಕ ದಂಪತಿಗಳ ಆಶೀರ್ವಾದ ಪಡೆಯಲು ಸಾವಿರಾರು ಭಕ್ತರು ಇಲ್ಲಿಗೆ ಬರುತ್ತಾರೆ.

ಪ್ರಧಾನಿಗೆ ಸಿಕ್ಕಿದ ಗಿಫ್ಟ್‌ಗಳ ಹರಾಜು: ಈ ಪ್ರಕ್ರಿಯೆಯಲ್ಲಿ ನೀವೂ ಭಾಗವಹಿಸಬಹುದು

ಪ್ರಧಾನಿ ಮೋದಿ ಅವರು ಅಲ್ಮೋರಾದ ಜಾಗೇಶ್ವರ ಧಾಮಕ್ಕೆ ಭೇಟಿ ನೀಡಿದರು. ಸುಮಾರು 6200 ಅಡಿ ಎತ್ತರದಲ್ಲಿರುವ ಜಾಗೇಶ್ವರ ಧಾಮವು ಸರಿಸುಮಾರು 224 ಕಲ್ಲಿನ ದೇವಾಲಯಗಳನ್ನು ಒಳಗೊಂಡಿದೆ. ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಈ ಪ್ರವಾಸದ ಸಮಯದಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರಾಖಂಡದಲ್ಲಿ 4,000 ಕೋಟಿ ರೂಪಾಯಿಗಳಿಗೂ ಹೆಚ್ಚು ಮೌಲ್ಯದ ಯೋಜನೆಗಳನ್ನು ಉದ್ಘಾಟಿಸಿದರು, ಇದು ಭಾರತದ ಯಶಸ್ಸಿನ ಹಾದಿಯನ್ನು ಎತ್ತಿ ತೋರಿಸುತ್ತದೆ.

If someone were to ask me- if there is one place you must visit in Uttarakhand which place would it be, I would say you must visit Parvati Kund and Jageshwar Temples in the Kumaon region of the state. The natural beauty and divinity will leave you spellbound.

Of course,… pic.twitter.com/9FoOsiPtDQ

— Narendra Modi (@narendramodi)
click me!