
ಸಿಲಿಕಾನ್ ಸಿಟಿ ಬೆಂಗಳೂರು ಪ್ರವಾಸಿಗರ ಕೇಂದ್ರಬಿಂದು. ರಜೆ ಶುರುವಾಗ್ತಿದ್ದಂತೆ ಲಕ್ಷಾಂತರ ಮಂದಿ ಇಲ್ಲಿಗೆ ಬರ್ತಾರೆ. ಇಲ್ಲಿರುವ ಮಾಲ್, ಮಾರ್ಕೆಟ್ ಗಳನ್ನು ಸುತ್ತಿ, ಒಂದಿಷ್ಟು ವಸ್ತುಗಳನ್ನು ಖರೀದಿ ಮಾಡಿ, ಪಾರ್ಕ್ ಸುತ್ತಿ ಎಂಜಾಯ್ ಮಾಡ್ತಾರೆ. ಉದ್ಯಾನನಗರಿ ಅಂದ್ರೆ ಬರೀ ಇಷ್ಟೇ ಅಲ್ಲ. ಧಾರ್ಮಿಕ ವೈವಿಧ್ಯತೆಯು ಬೆಂಗಳೂರಿನ ಶ್ರೀಮಂತ ಸಾಂಸ್ಕೃತಿ, ಪರಂಪರೆಯನ್ನು ಪ್ರತಿಬಿಂಬಿಸುತ್ತದೆ. ಉದ್ಯಾನನಗರಿಯಲ್ಲಿ ಸಾಕಷ್ಟು ಆಧ್ಯಾತ್ಮಿಕ ಕ್ಷೇತ್ರಗಳಿವೆ. ದೇವಸ್ಥಾನಗಳು ಬೆಂಗಳೂರಿನಲ್ಲಿ ಸಾಕಷ್ಟಿದೆ. ಇಲ್ಲಿನ ದೇವಸ್ಥಾನಗಳು ಸಕಾರಾತ್ಮಕ ಶಕ್ತಿಯಿಂದ ಕೂಡಿವೆ. ಈ ದೇವಸ್ಥಾನಕ್ಕೆ ಹೋದ್ರೆ ಶಾಂತಿ, ನೆಮ್ಮದಿ ಸಿಗುತ್ತದೆ. ಬೆಂಗಳೂರಿಗೆ ಭೇಟಿ ನೀಡಿದಾಗ ನೀವು ಕೆಲವೊಂದು ಧಾರ್ಮಿಕ ಸ್ಥಳಗಳಿಗೆ ತಪ್ಪದೆ ಭೇಟಿ ನೀಡಿ. ಬೆಂಗಳೂರಿನಲ್ಲಿರುವ ಕೆಲ ದೇವಸ್ಥಾನಗಳ ಮಾಹಿತಿ ಇಲ್ಲಿದೆ.
ಸೋಮೇಶ್ವರ (Someshwar) ದೇವಸ್ಥಾನ : ಬೆಂಗಳೂರಿನಲ್ಲಿರುವ ಅತ್ಯುತ್ತಮ ದೇವಾಲಯ (Temple) ಗಳ ಪಟ್ಟಿಯಲ್ಲಿ ಸೋಮೇಶ್ವರ ದೇವಾಲಯ ಕೂಡ ಸೇರಿದೆ. ಈ ದೇವಾಲಯ ಹಲಸೂರು ಕೆರೆಯ ದಡದಲ್ಲಿದೆ. ಈ ದೇವಾಲಯವನ್ನು ಚೋಳ ಸಾಮ್ರಾಜ್ಯದ ಆಳ್ವಿಕೆಯಲ್ಲಿ ಕಟ್ಟಲಾಗಿದೆ ಎಂದು ಇತಿಹಾಸ (History) ಹೇಳುತ್ತದೆ. ಕೆಂಪೇಗೌಡರು 16ನೇ ಶತಮಾನದಲ್ಲಿ ದೇವಾಲಯವನ್ನು ಜೀರ್ಣೋದ್ಧಾರ ಮಾಡಿದ್ದರು. ಈ ದೇವಸ್ಥಾನದ ಗೋಡೆ ಮೇಲಿರುವ ಕೆತ್ತನೆಗಳು ಗಮನ ಸೆಳೆಯುತ್ತವೆ. ಇವು ಶಿವ ಹಾಗೂ ಪಾರ್ವತಿ ಮದುವೆ ಕಥೆಯನ್ನು ಹೇಳುತ್ತವೆ. ಈ ದೇವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿನ ವಾಸ್ತುಶಿಲ್ಪ ನೋಡಲು ಮರೆಯದಿರಿ.
INDIA VS PAK: ಗುಜರಾತ್ ತಲುಪಿದ ಡಾ. ಬ್ರೋ ಕ್ರಿಕೆಟ್ನ ಏನೇನ್ ಮಾಹಿತಿ ನೀಡಿದ್ರು ಕೇಳಿ...
ಬನಶಂಕರಿ ಅಮ್ಮನ ದೇವಸ್ಥಾನ : ಬೆಂಗಳೂರಿನಲ್ಲಿ ವಾಸಿಸುವ ಬಹುತೇಕರಿಗೆ ಈ ದೇವಸ್ಥಾನದ ಪರಿಚಯವಿದೆ. 7 ನೇ ಶತಮಾನದಲ್ಲಿ ನಿರ್ಮಿಸಲಾದ ದೇವಾಲಯ ಇದು. ಹೆಸರೇ ಹೇಳುವಂತೆ ಇದು ಬನಶಂಕರಿಯಲ್ಲಿ ಇದೆ. ಆಗ ತಿಲಕಾರಣ್ಯ ಅರಣ್ಯ ಪ್ರದೇಶದಲ್ಲಿ ಇದ್ದಿದ್ದರಿಂದ ಇದಕ್ಕೆ ಬನಶಂಕರಿ ಅಥವಾ ವನಶಂಕರಿ ದೇವಸ್ಥಾನ ಎಂದು ಹೆಸರು ಬಂದಿದೆ. ಈ ದೇವಾಲಯವು ಪಾರ್ವತಿ ದೇವಿಯ ಅವತಾರವಾದ ಶಾಕಂಭರಿಗೆ ಸಮರ್ಪಿತವಾಗಿದೆ. ಈ ದೇವಸ್ಥಾನಕ್ಕೆ ಪ್ರತಿ ದಿನ ಸಾವಿರಾರು ಭಕ್ತರು ಬರ್ತಾರೆ. ಕರ್ನಾಟಕದಿಂದ ಮಾತ್ರವಲ್ಲದೆ ಮಹಾರಾಷ್ಟ್ರ ಸೇರಿದಂತೆ ಬೇರೆ ರಾಜ್ಯಗಳಿಂದಲೂ ಇಲ್ಲಿಗೆ ಭಕ್ತರು ಬರ್ತಾರೆ.
ಚಾಣಕ್ಯ ನೀತಿ: ಮದ್ವೆ ಆಗೋದಾದ್ರೆ ಇಂಥ ಹುಡುಗೀರನ್ನೇ ಆಗಿ… ಜೀವನ ಚೆನ್ನಾಗಿರುತ್ತೆ
ಚೊಕ್ಕನಾಥಸ್ವಾಮಿ ದೇವಾಲಯ : ಚೊಕ್ಕನಾಥಸ್ವಾಮಿ ದೇವಾಲಯವು ಬೆಂಗಳೂರಿನ ದೊಮ್ಮಲೂರಿನಲ್ಲಿದೆ. ಇದು ಅತ್ಯಂತ ಹಳೆಯ ದೇವಾಲಯಗಳಲ್ಲಿ ಒಂದು. ಚೊಕ್ಕನಾಥಸ್ವಾಮಿ ದೇವಾಲಯವು ಚೊಕ್ಕನಾಥಸ್ವಾಮಿ ಅಥವಾ ಚೊಕ್ಕ ಪೆರುಮಾಳ್ ಎಂದು ಕರೆಯಲ್ಪಡುವ ವಿಷ್ಣುವಿಗೆ ಸಮರ್ಪಿತವಾಗಿದೆ. ಈ ದೇವಾಲಯವು ವಿಶೇಷವಾಗಿ ಸುಂದರವಾದ ಶಿಲ್ಪಕಲೆಗಳಿಗೆ ಹೆಸರುವಾಸಿಯಾಗಿದೆ. ಈ ದೇವಸ್ಥಾನಕ್ಕೆ ಭೇಟಿ ನೀಡಿದ್ರೆ ನೆಮ್ಮದಿ, ಶಾಂತಿ ಸಿಗುತ್ತದೆ.
ಗವಿ ಗಂಗಾಧರೇಶ್ವರ ದೇವಸ್ಥಾನ : ಬೆಂಗಳೂರಿನ ಅತ್ಯಂತ ಪ್ರಸಿದ್ಧ ದೇವಸ್ಥಾನಗಳಲ್ಲಿ ಇದೂ ಒಂದು. ದೇಶದಾದ್ಯಂತ ಈ ದೇವಸ್ಥಾನ ಹೆಸರುವಾಸಿ. ಗವಿ ಗಂಗಾಧರೇಶ್ವರ ದೇವಸ್ಥಾನವು ಬಸವನಗುಡಿಯ ಸಮೀಪದಲ್ಲಿದೆ. ಬೆಂಗಳೂರಿನ ಅತ್ಯಂತ ಹಳೆಯ ದೇವಾಲಯಗಳಲ್ಲಿ ಇದು ಒಂದು.
ಗುಹಾ ದೇವಾಲಯ : ಧಾರ್ಮಿಕ ಕ್ಷೇತ್ರಗಳನ್ನು ನೀವು ಇಷ್ಟಪಡುವವರಾಗಿದ್ದರೆ ಹುಳಿಮಾವು ಗುಹಾ ದೇವಾಲಯಕ್ಕೆ ಭೇಟಿ ನೀಡಿ. ಈ ದೇವಾಲಯವು ಒಂದು ವಿಶಿಷ್ಟವಾದ ದೇವಾಲಯವಾಗಿದೆ. ಈ ದೇವಾಲಯದಲ್ಲಿ ಮೂರು ಪ್ರಮುಖ ದೇವತೆಗಳ ವಿಗ್ರಹಗಳಿವೆ. ಮಧ್ಯದಲ್ಲಿ ಶಿವಲಿಂಗ, ದೇವಿಯ ವಿಗ್ರಹ ಮತ್ತು ಎರಡೂ ಬದಿಯಲ್ಲಿ ಗಣೇಶನ ವಿಗ್ರಹವನ್ನು ಸ್ಥಾಪಿಸಲಾಗಿದೆ.
ಕೋಟೆ ವೆಂಕಟರಮಣ ದೇವಸ್ಥಾನ : ಬೆಂಗಳೂರಿನ ಕೃಷ್ಣರಾಜೇಂದ್ರ ರಸ್ತೆಯಲ್ಲಿ ನೀವು ಕೋಟೆ ವೆಂಕಟ್ರಮಣ ದೇವಸ್ಥಾನವನ್ನು ನೋಡ್ಬಹುದು. 17ನೇ ಶತಮಾನದ ಉತ್ತರಾರ್ಧದಲ್ಲಿ ಈ ದೇವಾಲಯ ನಿರ್ಮಾಣವಾಗಿದೆ. ಮೈಸೂರಿನ ಅರಸರು ಈ ದೇವಾಲಯವನ್ನು ದ್ರಾವಿಡ ಮತ್ತು ವಿಜಯನಗರ ಶೈಲಿಯಲ್ಲಿ ನಿರ್ಮಿಸಿದ್ದಾರೆ. ವೈಕುಂಠ ಏಕಾದಶಿ ಇಲ್ಲಿ ವಿಜ್ರಂಭಣೆಯಿಂದ ನಡೆಯುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.