
ವಿಶ್ವ (World)ದಲ್ಲಿ ಒಂದೊಂದು ಜಾಗವೂ ತನ್ನದೇ ವಿಶೇಷತೆಯನ್ನು ಹೊಂದಿದೆ. ಕೆಲವು ಪ್ರದೇಶದಲ್ಲಿ ಅತೀ ಮಳೆ (rain) ಯಾದ್ರೆ ಮತ್ತೆ ಕೆಲ ಪ್ರದೇಶದಲ್ಲಿ ಅತೀ ಸೆಕೆ. ಇನ್ನು ಕೆಲ ಜಾಗದಲ್ಲಿ ಹಿಮಪಾತ ವಿಪರೀತವಾದ್ರೆ ಕೆಲ ಪ್ರದೇಶದಲ್ಲಿ ಅತೀ ಕಡಿಮೆ ಮಳೆಯಾಗುತ್ತೆ. ಆದ್ರೆ ಒಂದೇ ಒಂದು ಹನಿ ಮಳೆ ಬೀಳದ ಜಾಗವೊಂದು ನಮ್ಮಲ್ಲಿದೆ ಅಂದ್ರೆ ನೀವು ನಂಬ್ತೀರಾ? ಮಳೆಯ ಸೌಂದರ್ಯ (beauty) ಸವಿಯೋದೇ ಚೆಂದ. ಒಂದೊಂದು ಹನಿ ಮಳೆ ನೆಲದ ಮೇಲೆ ಬಿದ್ದಾಗ ಬರುವ ವಾಸನೆ ಹಿತವೆನ್ನಿಸುತ್ತದೆ. ಮೋಡ ಮುಸುಕಿ, ಮಳೆ ಸುರಿಯೋಕೆ ಶುರುವಾದ್ರೆ ಭೂಮಿ ತಂಪಾಗುತ್ತೆ. ಜೂನ್ ಬರ್ತಿದ್ದಂತೆ ಮಳೆಗಾಲಕ್ಕೆ ನಾವು ಸಜ್ಜಾಗ್ತೇವೆ. ರೈತರು ತನ್ನ ಕೃಷಿ ಕೆಲಸ ಶುರು ಮಾಡ್ತಾರೆ. ಮಳೆ ಇಲ್ಲ ಅಂದ್ರೆ ಬೆಳೆ ಇಲ್ಲ, ಬೆಳೆ ಇಲ್ಲ ಅಂದ್ರೆ ಬರಗಾಲ ಗ್ಯಾರಂಟಿ. ಆದ್ರೆ ಆ ಊರಿನಲ್ಲಿ ಮಳೆ ಇಲ್ಲದೆ ಹೋದ್ರೂ ಜನ ಆರಾಮವಾಗಿ ಜೀವನ ನಡೆಸ್ತಿದ್ದಾರೆ. ಆ ಊರು ಯಾವ್ದು, ಅದ್ರ ವಿಶೇಷತೆ ಏನು ಎಂಬ ವಿವರ ಇಲ್ಲಿದೆ.
ಮಳೆಯಾಗದ ಊರು ಯಾವುದು? : ಒಂದೇ ಒಂದು ಬಾರಿಯೂ ಮಳೆಯಾಗದ ಊರು ಅಂದ್ರೆ ಅದು ಅಲ್-ಹುತೈಬ್ (al hutaib.) ಈ ಹಳ್ಳಿ ಮಧ್ಯಪ್ರಾಚ್ಯ ಏಷ್ಯಾ ದೇಶವಾದ ಯೆಮೆನ್ (Yemen)ನಲ್ಲಿದೆ. ಅಲ್ ಹುತೈಬ್ ಗ್ರಾಮವು ಯೆಮೆನ್ ರಾಜಧಾನಿ ಸನಾದ ಪಶ್ಚಿಮ ಭಾಗದಲ್ಲಿದೆ. ಇಲ್ಲಿಯವರೆಗೆ ಮಳೆಯಾಗದ ವಿಶ್ವದ ಏಕೈಕ ಹಳ್ಳಿ ಅಲ್ ಹುತೈಬ್.
29 ವರ್ಷಗಳ ಬಳಿಕ ನಟ ಶಿವಣ್ಣ ಯಾಣಕ್ಕೆ ಭೇಟಿ: 'ನಮ್ಮೂರ ಮಂದಾರ ಹೂವೇ' ಪಾರ್ಟ್ 2
ಇಲ್ಲಿ ಮಳೆ ಆಗದಿರಲು ಕಾರಣ ಏನು? : ಅಲ್-ಹುತೈಬ್ ಗ್ರಾಮವು ಸಮುದ್ರ ಮಟ್ಟದಿಂದ 3200 ಮೀಟರ್ ಎತ್ತರದಲ್ಲಿದೆ. ಇಲ್ಲಿ ಮಳೆ ಆಗದಿರಲು ಇದೇ ಕಾರಣ. ಮೋಡಗಳು 2000 ಮೀಟರ್ ಎತ್ತರದಲ್ಲಿ ರೂಪುಗೊಳ್ಳುತ್ತವೆ. ಅಂದ್ರೆ ಮೋಡದ ಮೇಲೆ ಈ ಹಳ್ಳಿ ಇದೆ. ಇದೇ ಕಾರಣಕ್ಕೆ ಇಲ್ಲಿನ ಜನರು ಮಳೆಯ ಸೌಂದರ್ಯವನ್ನು ನೋಡಲು ಸಾಧ್ಯವಾಗೋದಿಲ್ಲ. ವಾಸ್ತವವಾಗಿ ಇದು ಬೆಟ್ಟದ ಮೇಲಿರುವ ಒಂದು ಹಳ್ಳಿ. ಬೇಸಿಗೆಯಲ್ಲಿ ಜನರು ತುಂಬಾ ಸೆಕೆ ಅನುಭವಿಸ್ತಾರೆ. ಪ್ರತಿ ದಿನ ಬೆಳಿಗ್ಗೆ ಚಳಿ ಇದ್ರೆ ಮಧ್ಯಾಹ್ನದ ಮೇಲೆ ವಿಪರೀತ ಸೆಕೆ ಇವರನ್ನು ಕಾಡುತ್ತದೆ.
ಗಗನಯಾತ್ರಿ ಅಂತರಿಕ್ಷದಲ್ಲೇ ಸಾವನ್ನಪ್ಪಿದ್ರೆ… ಅಂತ್ಯಸಂಸ್ಕಾರ ಹೇಗೆ ಮಾಡ್ತಾರೆ?
ಅತ್ಯಂತ ಸುಂದರವಾಗಿದೆ ಈ ಹಳ್ಳಿ : ಇಲ್ಲಿನ ಜನರಿಗೆ ಮಳೆ ನೋಡುವ ಭಾಗ್ಯ ಇಲ್ಲ. ಆದ್ರೆ ಅವರಿಗೆ ಅದ್ರ ಬಗ್ಗೆ ಬೇಸರ ಇಲ್ಲ. ಮಳೆಯಾಗದೆ ಹೋದ್ರೂ ಈ ಹಳ್ಳಿ ತುಂಬಾ ಸುಂದರವಾಗಿದೆ. ಹಳ್ಳಿಯ ಕೆಳಗೆ ಮೋಡಗಳು ಕಾಣಿಸಿಕೊಳ್ಳುತ್ತವೆ. ಅದೇ ಕಾರಣಕ್ಕೆ ಈ ಹಳ್ಳಿಯನ್ನು ಸ್ವರ್ಗ ಎಂದು ಅಲ್ಲಿನ ಜನರು ನಂಬುತ್ತಾರೆ. ತಾವು ಸ್ವರ್ಗದಲ್ಲಿದ್ದೇವೆ ಎಂಬ ನಂಬಿಕೆ ಅವರದ್ದು. ಮಳೆಯಾಗದ ಹಳ್ಳಿಯನ್ನು ನೋಡಲು ಪ್ರತಿ ದಿನ ನೂರಾರು ಪ್ರವಾಸಿಗರು ಈ ಹಳ್ಳಿಗೆ ಬರ್ತಾರೆ. ಈ ಹಳ್ಳಿ ಅಲ್-ಬೊಹ್ರಾ ಅಥವಾ ಅಲ್-ಮುಕರ್ರಾಮ ಜನರ ಭದ್ರಕೋಟೆಯಾಗಿದೆ. ಅವರನ್ನು ಯೆಮೆನ್ ಸಮುದಾಯ ಎಂದು ಕರೆಯಲಾಗುತ್ತದೆ. ಈ ಗ್ರಾಮದಲ್ಲಿ ಪ್ರಾಚೀನ ಮತ್ತು ಆಧುನಿಕ ವಾಸ್ತುಶಿಲ್ಪದ ಸಂಗಮವನ್ನು ಕಾಣಬಹುದು. ಬೆಟ್ಟದ ಮೇಲೆ ಮನೆಗಳನ್ನು ನಿರ್ಮಿಸಲಾಗಿದೆ. ಈ ಗ್ರಾಮವು ಧಾರ್ಮಿಕ ಮತ್ತು ಸಾಂಸ್ಕೃತಿಕವಾಗಿಯೂ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.