
ಭಾರತೀಯ ರೈಲ್ವೆ ಇಲಾಖೆ (Indian Railway Department) ತನ್ನ ಪ್ರಯಾಣಿಕರ ಅನುಕೂಲವನ್ನು ಗಮನದಲ್ಲಿಟ್ಟುಕೊಂಡು ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರ್ತಿರುತ್ತದೆ. ಈಗ ರೈಲ್ವೆ ಇಲಾಖೆ ಸೂಪರ್ ಅಪ್ಲಿಕೇಷನ್ ಬಿಡುಗಡೆ ಮಾಡಿದೆ. ಇಲ್ಲಿ ಗ್ರಾಹಕರು ಒಂದೊಂದು ಸೇವೆಗೆ ಒಂದೊಂದು ಮೊಬೈಲ್ ಅಪ್ಲಕೇಷನ್ ಬಳಕೆ ಮಾಡುವಂತಿಲ್ಲ. ಒಂದೇ ಸೂಪರ್ ಆಪ್ ನಲ್ಲಿ ರೈಲ್ವೆಗೆ ಸಂಬಂಧಿಸಿದ ಎಲ್ಲ ಮಾಹಿತಿ ಲಭ್ಯವಾಗುತ್ತದೆ. ಇದಕ್ಕೆ ರೈಲ್ವೆ ಸ್ವರೈಲ್ ಸೂಪರ್ ಆಪ್ (Swarail Super App) ಎಂದು ನಾಮಕರಣ ಮಾಡಿದೆ. ಸದ್ಯ ಪರೀಕ್ಷೆಗಾಗಿ ಈ ಅಪ್ಲಿಕೇಷನನ್ನು ಗೂಗಲ್ ಪ್ಲೇ ಸ್ಟೋರ್ (Google Play Store) ನಲ್ಲಿ ನೀಡಲಾಗಿದೆ. ಆರಂಭದಲ್ಲಿ ಈ ಆಪ್, ಡೌನ್ಲೋಡ್ ಮಿತಿಯನ್ನು ಹೊಂದಿದೆ. ಕೇವಲ 1,000 ಮಂದಿ ಮಾತ್ರ ಈ ಅಪ್ಲಿಕೇಷನ್ ಡೌನ್ಲೋಡ್ (Application Download) ಮಾಡಿಕೊಳ್ಳಬಹುದು. ಅವರಿಂದ ಸಿಗುವ ಫೀಡ್ಬ್ಯಾಕ್ ನಂತ್ರ ಡೌನ್ಲೋಡ್ ಮಿತಿಯನ್ನು ಹತ್ತು ಸಾವಿರಕ್ಕೆ ಏರಿಸಲಾಗುವುದು. ಅಗತ್ಯವಿರುವ ಬದಲಾವಣೆ ನಂತ್ರ ಪ್ರತಿಯೊಬ್ಬರಿಗೂ ಈ ಅಪ್ಲಿಕೇಷನ್ ಡೌನ್ಲೋಡ್ ಸೌಲಭ್ಯ ನೀಡಲು ಇಲಾಖೆ ನಿರ್ಧರಿಸಿದೆ.
ಒಂದೇ ಜಾಗದಲ್ಲಿ ಸಿಗಲಿದೆ ಅನೇಕ ಸೌಲಭ್ಯ : ಸ್ವರೈಲ್ ವಿವಿಧ ರೈಲ್ವೆ ಸೇವೆಗಳನ್ನು ಒಂದೇ ವೇದಿಕೆಯಲ್ಲಿ ಒದಗಿಸುತ್ತದೆ. ಸದ್ಯ ಪ್ರಯಾಣಿಕರು ರೈಲ್‌ಕನೆಕ್ಟ್ (RailConnect) ಮತ್ತು ಯುಟಿಎಸ್ (UTSonMobile) ಅಪ್ಲಿಕೇಷನ್ ಬಳಸಿಕೊಂಡು ಲಾಗಿನ್ ಮಾಡಬಹುದು. ಒಂದೇ ಸೈನ್ ಇನ್ ಮೂಲಕ ಪ್ರಯಾಣಿಕರು ಅನೇಕ ಸೇವೆಗಳನ್ನು ಇಲ್ಲಿ ಪಡೆಯಬಹುದು. ಸದ್ಯ ನಾವು ರಿಸರ್ವ್ ಹಾಗೂ ಅನ್ ರಿಸರ್ವ್ ಬುಕ್ಕಿಂಗ್ ಗೆ ಬೇರೆ ಬೇರೆ ಅಪ್ಲಿಕೇಷನ್ ಬಳಸ್ತೇವೆ. ಆದ್ರೆ ಇನ್ಮುಂದೆ ಸ್ವರೈಲ್ ಅಪ್ಲಿಕೇಷನ್ ಗೆ ಸೈನ್ ಇನ್ ಆದ್ರೆ ಸಾಕು. ಅಲ್ಲಿಯೇ ನೀವು ಎರಡೂ ಕೆಲಸಗಳನ್ನು ಮಾಡ್ಬಹುದು.
ಕೇಂದ್ರ ಬಜೆಟ್ 2025: ವಾಡಿ-ಗದಗ್ ರೈಲ್ವೆಗೆ ಮೀಠಾ, ಯಾದಗಿರಿ-ಆಲಮಟ್ಟಿಗೆ ಖಠ್ಠಾ...!
ಸ್ವರೈಲ್ ಅಪ್ಲಿಕೇಷನ್ ಬಳಸೋದು ಸುಲಭ : ರೈಲ್ವೆ ಮಾಹಿತಿ ವ್ಯವಸ್ಥೆಗಳ ಕೇಂದ್ರ (CRIS) ಸ್ವರೈಲ್ ಅಪ್ಲಿಕೇಷನ್ ಅಭಿವೃದ್ಧಿಪಡಿಸಿದೆ. ಈ ಅಪ್ಲಿಕೇಶನ್ ಮೂಲಕ ಪ್ರಯಾಣಿಕರು ರೈಲು ಮತ್ತು ಪಿಎನ್ ಆರ್ ಸ್ಥಿತಿ ವಿಚಾರಣೆ, ಫುಡ್ ಆರ್ಡರ್, ದೂರುಗಳಿಗೆ ರೈಲು ಸಹಾಯ, ಎಲ್ಲಾ ರೀತಿಯ ಟಿಕೆಟ್ ಬುಕಿಂಗ್, ಪಾರ್ಸೆಲ್ ಮತ್ತು ಸರಕು ಸಾಗಣೆ ವಿಚಾರಣೆ, ಇತ್ಯಾದಿ ಸೇವೆಗಳನ್ನು ಪಡೆಯಬಹುದು. ಒಮ್ಮೆ ಸೈನ್ ಇನ್ ಮಾಡಿದ ನಂತರ, ಬಳಕೆದಾರರು ಬಯೋಮೆಟ್ರಿಕ್ಸ್ ಮೂಲಕವೂ ಅದನ್ನು ಪ್ರವೇಶಿಸಲು ಸಾಧ್ಯವಾಗುತ್ತದೆ. ಇದನ್ನು ಬಳಸೋದು ಬಹಳ ಸುಲಭ. ಎಲ್ಲ ರೀತಿಯ ಪ್ರಯಾಣಿಕರನ್ನು ಗಮನದಲ್ಲಿಟ್ಟುಕೊಂಡು ಈ ಅಪ್ಲಿಕೇಷನ್ ಸಿದ್ಧಪಡಿಸಲಾಗಿದೆ.
ಆಸಕ್ತಿ ಇರುವ ಬಳಕೆದಾರರು ಕೆಳಗೆ ನೀಡಿರುವ ಲಿಂಕ್‌ಗಳನ್ನು ಬಳಸಿಕೊಂಡು ಅಪ್ಲಿಕೇಶನ್ ಡೌನ್‌ಲೋಡ್ ಮಾಡಬಹುದು. ಪ್ಲೇ ಸ್ಟೋರ್ https://play.google.com/apps/testing/org.cris.aikyam ಆಪ್ ಸ್ಟೋರ್ https://testflight.apple.com/join/aWFYt6et ಈ ಲಿಂಕ್ ನಲ್ಲಿ ನಿಮಗೆ ಅಪ್ಲಿಕೇಷನ್ ಲಭ್ಯವಿದೆ.
Budget 2025: ಕರ್ನಾಟಕದ ರೈಲ್ವೆ ಯೋಜನೆಗಳಿಗೆ ಹಿಂದಿನ ಬಜೆಟ್‌ಗಿಂತ 5 ಕೋಟಿ ಹೆಚ್ಚು ನೀಡಿದ ನಿರ್ಮಲಾ!
ಹೊಸ ಅಪ್ಲಿಕೇಷನ್ ಬಿಡುಗಡೆ ಮಾಡೋದಾಗಿ ಹೇಳಿದ್ದ CRIS,ತನ್ನ ಸೋಶಿಯಲ್ ಮೀಡಿಯಾದಲ್ಲಿ, ಬಿಡುಗಡೆಯ ಘೋಷಣೆಯನ್ನು ಮಾಡಿದೆ. ಪ್ರಿಯ ಗ್ರಾಹಕರೆ, ಕಾಯುವಿಕೆ ಮುಗಿದಿದೆ ಎಂದು ಶೀರ್ಷಿಕೆ ಹಾಕಿದೆ. ನೀವು ಈ ಅಪ್ಲಿಕೇಷನ್ ಬಳಕೆ ಮಾಡ್ತಿದ್ದರೆ, swarrail.support@cris.org.in ಇಮೇಲ್ ಮೂಲಕ CRIS ಗೆ ನಿಮ್ಮ ಪ್ರತಿಕ್ರಿಯೆಯನ್ನು ನೇರವಾಗಿ ನೀಡಬಹುದು. ಅಪ್ಲಿಕೇಷನ್ ಸಂಪೂರ್ಣ ಬಿಡುಗಡೆಗೂ ಮುನ್ನ ನೀವು ನೀಡುವ ಸಲಹೆಗಳು, ಅಪ್ಲಿಕೇಷನ್ ಸುಧಾರಿಸಲು ನೆರವಾಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.