ಥೈಲ್ಯಾಂಡ್‌ನ ಪಟ್ಟಾಯ ಬೀಚ್‌ನಲ್ಲಿ ಮೂತ್ರ ವಿಸರ್ಜಿಸಲೆಂದೇ ಪ್ರವಾಸಕ್ಕೆ ಹೋದ 6 ಭಾರತೀಯರು; ವಿಡಿಯೋ ವೈರಲ್!

Published : Jan 31, 2025, 03:42 PM IST
ಥೈಲ್ಯಾಂಡ್‌ನ ಪಟ್ಟಾಯ ಬೀಚ್‌ನಲ್ಲಿ ಮೂತ್ರ ವಿಸರ್ಜಿಸಲೆಂದೇ ಪ್ರವಾಸಕ್ಕೆ ಹೋದ 6 ಭಾರತೀಯರು; ವಿಡಿಯೋ ವೈರಲ್!

ಸಾರಾಂಶ

ಥೈಲ್ಯಾಂಡ್‌ನ ಪಟ್ಟಾಯ ಬೀಚ್‌ಗೆ ಎಲ್ಲರೂ ಮೋಜು ಮಸ್ತಿ ಮಾಡಲು ತೆರಳಿದರೆ, ಭಾರತದ 6 ಜನ ಯುವಕರು ಪಟ್ಟಾಯ ಬೀಚ್‌ಗೆ ಮೂತ್ರ ವಿಸರ್ಜನೆ ಮಾಡಲೆಂದೇ ಪ್ರವಾಸಕ್ಕೆ ಹೋಗಿದ್ದಾರೆ. ಪಟ್ಟಾಯ ಬೀಚ್‌ನಲ್ಲಿ ಬಹಿರಂಗವಾಗಿ ಮೂತ್ರ ವಿಸರ್ಜನೆ ಮಾಡಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಥೈಲ್ಯಾಂಡ್‌ನ ಪಟ್ಟಾಯ ಬೀಚ್‌ಗೆ ಎಲ್ಲರೂ ಮೋಜು ಮಸ್ತಿ ಮಾಡಲು ತೆರಳಿದರೆ, ಭಾರತದ 6 ಜನ ಯುವಕರು ಪಟ್ಟಾಯ ಬೀಚ್‌ಗೆ ಮೂತ್ರ ವಿಸರ್ಜನೆ ಮಾಡಲೆಂದೇ ಪ್ರವಾಸಕ್ಕೆ ಹೋಗಿದ್ದಾರೆ. ಪಟ್ಟಾಯ ಬೀಚ್‌ನಲ್ಲಿ ಬಹಿರಂಗವಾಗಿ ಮೂತ್ರ ವಿಸರ್ಜನೆ ಮಾಡಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಜಾಗತಿಕ ಮಟ್ಟದಲ್ಲಿ ಪ್ರಯಾಣ ಪ್ರಿಯರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಪ್ರಯಾಣಗಳು ಜನರನ್ನು, ಸಂಸ್ಕೃತಿಗಳನ್ನು ಮತ್ತು ಪರಂಪರೆಗಳನ್ನು ಹತ್ತಿರ ತರುತ್ತವೆ. ಆದರೆ, ಇದರ ಜೊತೆಗೆ ಮಾನ್ಯವಾದ ನಡವಳಿಕೆ ಮತ್ತು ಪರಸ್ಪರ ಗೌರವದ ಜವಾಬ್ದಾರಿಯೂ ಬರುತ್ತದೆ. ದೇಶೀಯ ಪ್ರಯಾಣವಾಗಲಿ ಅಥವಾ ವಿದೇಶ ಪ್ರಯಾಣವಾಗಲಿ, ನಾವು ಭೇಟಿ ನೀಡುವ ಸ್ಥಳಗಳ ಸಂಸ್ಕೃತಿ ಮತ್ತು ನಿಯಮಗಳನ್ನು ಗೌರವಿಸಬೇಕು. ಆದರೆ, ಆಗಾಗ್ಗೆ ಇದಕ್ಕೆ ವಿರುದ್ಧವಾಗಿ ಅನೇಕ ಘಟನೆಗಳು ನಡೆಯುತ್ತವೆ.

ಇತ್ತೀಚೆಗೆ ಇದೇ ರೀತಿಯ ಒಂದು ಘಟನೆ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದೆ. ಥೈಲ್ಯಾಂಡ್‌ನ ಪಟ್ಟಾಯ ಬೀಚ್‌ಗೆ ಭೇಟಿ ನೀಡಿದ್ದ ಭಾರತೀಯರ ಗುಂಪಿನಲ್ಲಿ ಕೆಲವರು ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿರುವ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಟೀಕೆಗೆ ಕಾರಣವಾಗಿವೆ.

ಇದನ್ನೂ ಓದಿ: ಅಘೋರಿ ಬಾಬಾನ ಪ್ರೀತಿಯಲ್ಲಿ ಬಿದ್ದ ರಷ್ಯನ್ ಬಾಲೆ: ಬಾಬಾಗೆ ತಪ್ಪಸಿನ ಫಲ ಸಿಕ್ತು ಎಂದ ನೆಟ್ಟಿಗರು

ವರದಿಗಳ ಪ್ರಕಾರ, ಆರು ಭಾರತೀಯ ಪ್ರವಾಸಿಗರು ಈ ರೀತಿಯ ಕೃತ್ಯ ಎಸಗಿದ್ದಾರೆ. 2025 ಜನವರಿ 16 ರಂದು ಬೆಳಗ್ಗೆ ಚೋನ್ ಬುರಿಯಲ್ಲಿರುವ ಪಟ್ಟಾಯ ಬೀಚ್‌ಗೆ ಭೇಟಿ ನೀಡಿದ್ದ ಇವರು ಬೀಚ್‌ನಲ್ಲಿ ಬಹಿರಂಗವಾಗಿ ಮೂತ್ರ ವಿಸರ್ಜನೆ ಮಾಡಿದ್ದಾರೆ. ಇವರು ಅಸಭ್ಯವಾಗಿ ವರ್ತಿಸುತ್ತಿರುವಾಗ, ಹತ್ತಿರದಲ್ಲಿದ್ದ ಒಬ್ಬ ವ್ಯಕ್ತಿ ಘಟನೆಯನ್ನು ಚಿತ್ರೀಕರಿಸಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ಪ್ರವಾಸಿಗರ ಈ ಅಸಹನೀಯ ವರ್ತನೆ ಸ್ಥಳೀಯರು ಮತ್ತು ಇತರ ಪ್ರವಾಸಿಗರಲ್ಲಿ ವ್ಯಾಪಕ ಅಸಮಾಧಾನಕ್ಕೆ ಕಾರಣವಾಗಿದೆ. ಈ ಘಟನೆ ವಿವಾದಾಸ್ಪದವಾದ ನಂತರ, ಬೀಚ್‌ನಲ್ಲಿ ಗಸ್ತು ಹೆಚ್ಚಿಸಲು ಮತ್ತು ಸ್ಥಳೀಯ ಪದ್ಧತಿಗಳು ಮತ್ತು ನಿಯಮಗಳ ಬಗ್ಗೆ ಜಾಗೃತಿ ಮೂಡಿಸಲು ಸಾಮಾಜಿಕ ಮಾಧ್ಯಮ ಬಳಕೆದಾರರು ಸ್ಥಳೀಯ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ. ಥೈಲ್ಯಾಂಡ್‌ನ ಪ್ರಮುಖ ಪ್ರವಾಸಿ ತಾಣಗಳಲ್ಲಿ ಪಟ್ಟಾಯ ಒಂದಾಗಿದೆ. ಪ್ರತಿ ವರ್ಷ ಲಕ್ಷಾಂತರ ಜನರು ಈ ಸುಂದರ ತಾಣಕ್ಕೆ ಭೇಟಿ ನೀಡುತ್ತಾರೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!
Traffic Mantra: ಟ್ರಾಫಿಕ್‌ನಲ್ಲಿ ಶಾಂತವಾಗಿರೋದು ಹೇಗೆ? ಈ ಮಂತ್ರ ಪಠಿಸಿ ಸಾಕು!