Khajuraho ಅಂದರೆ ಲೈಂಗಿಕ ಶಿಲ್ಪ ಅಷ್ಟೇ ಅಲ್ಲ! ಇವೂ ನಿಮಗೆ ಗೊತ್ತಿರಲಿ

By Bhavani Bhat  |  First Published Apr 13, 2022, 9:58 AM IST

ವಿಶ್ವಪ್ರಸಿದ್ಧ ಖಜುರಾಹೊ ದೇವಾಲಯಗಳು (Khajurao Temples) ತಮ್ಮ ಮಿಥುನ ಶಿಲ್ಪಗಳಿಗೆ ಹೆಸರಾಗಿವೆ. ಆದರೆ ಈ ದೇವಾಲಯಗಳ ಬಗ್ಗೆ ಇನ್ನೂ ಹಲವು ಆಸಕ್ತಿದಾಯಕ ಸಂಗತಿಗಳು ಇಲ್ಲಿವೆ.


UNESCO ವಿಶ್ವ ಪರಂಪರೆಯ ತಾಣ, ಖಜುರಾಹೊ (Khajuraho) ದೇವಾಲಯಗಳು (Temples) ಮೂಲಭೂತವಾಗಿ ತಮ್ಮ ಎರೋಟಿಕ್ (Erotic) ಅಥವಾ ಕಾಮಪ್ರಚೋದಕ ಶಿಲ್ಪಗಳಿಗೆ ಹೆಸರುವಾಸಿಯಾಗಿದೆ. ಸುಂದರವಾದ ದೇವಾಲಯಗಳ ನಾಡು ಮಧ್ಯಪ್ರದೇಶದ ಖಜುರಾಹೊ ಪ್ರಪಂಚದಾದ್ಯಂತದ ಪ್ರಯಾಣಿಕರನ್ನು ಸೆಳೆಯುತ್ತದೆ. ಮಧ್ಯಪ್ರದೇಶ ಪ್ರವಾಸೋದ್ಯಮದ ಪ್ರಮುಖ ಭಾಗವಾಗಿರುವ ಈ ಸ್ಥಳವು ಪ್ರಾಚೀನ ಇತಿಹಾಸ ಮತ್ತು ಸಂಸ್ಕೃತಿಯ ಬಗ್ಗೆ ಸಾಕಷ್ಟು ಹೇಳುತ್ತದೆ. ಆದರೆ ಈ ದೇವಾಲಯಗಳ ಹಿನ್ನೆಲೆ ಅದರ ಕಾಮಪ್ರಚೋದಕ ಶಿಲ್ಪಗಳನ್ನೂ ಮೀರಿದ್ದು. ಖಜುರಾಹೊ ಬಗ್ಗೆ ಕೆಲವು ಕುತೂಹಲಕಾರಿ ಸಂಗತಿಗಳನ್ನು ನೋಡೋಣ.

1. ದೇವಾಲಯದ ಆವಿಷ್ಕಾರ

Tap to resize

Latest Videos

ಈ ದೇವಾಲಯಗಳು ಸಾವಿರ ವರ್ಷಕ್ಕಿಂತ ಹಿಂದಿನದು. ಕ್ಯಾಪ್ಟನ್ ಟಿ.ಎಸ್. ಬರ್ಟ್ ಅವರು 1838ರಲ್ಲಿ ಇವನ್ನು 'ಮರು-ಶೋಧಿಸಿದರು' ಮತ್ತು ಜಗತ್ತಿಗೆ ಈ ದೇವಾಲಯಗಳನ್ನು ಪರಿಚಯಿಸಿದರು. ಬ್ರಿಟಿಷ್ ಸೇನಾಧಿಕಾರಿ ಆಗಿದ್ದ ಬರ್ಟ್ ಖಜುರಾಹೊದಲ್ಲಿ ಅಧಿಕೃತ ಕರ್ತವ್ಯದಲ್ಲಿದ್ದರು ಮತ್ತು ಅಜ್ಞಾತ ಜಾಡುಗಳನ್ನು ಅನುಸರಿಸಿ ಹೋದಾಗ ಅದು ಅವರನ್ನು ಈ ಗುಪ್ತ ದೇವಾಲಯಗಳಿಗೆ ಕರೆದೊಯ್ಯಿತು.

ಜಪಾನ್‌ನಲ್ಲಿ Penis Festival ! ಈ ವಿಚಿತ್ರ ಆಚರಣೆ ಬಗ್ಗೆ ನಿಮಗ್ಗೊತ್ತಾ?

2. ಕೇವಲ 10% ಮಾತ್ರ ಮಿಥುನ ಶಿಲ್ಪ

ಕಾಮಪ್ರಚೋದಕ ಶಿಲ್ಪಗಳಿಗೆ ಖಜುರಾಹೊ ಹೆಸರುವಾಸಿಯಾಗಿದ್ದರೂ, ದೇವಾಲಯದ ಸಂಕಿರಣದ ಮೇಲಿನ ಕೇವಲ 10% ಕೆತ್ತನೆಗಳು ಲೈಂಗಿಕ ಚಟುವಟಿಕೆಗಳನ್ನು ಚಿತ್ರಿಸುತ್ತದೆ ಅಷ್ಟೇ. ಉಳಿದ 90% ಶಿಲ್ಪಗಳು ಆ ಕಾಲದಲ್ಲಿ ಬದುಕಿದ್ದ ಸಾಮಾನ್ಯ ಜನರ ಜೀವನವನ್ನು ಪ್ರದರ್ಶಿಸುವ ಕೆತ್ತನೆಗಳು. ಕುಂಬಾರರು, ಸಂಗೀತಗಾರರು, ರೈತರು ಮತ್ತು ಮಹಿಳೆಯರ ಶಿಲ್ಪಗಳು ಇವೆ, ಆದರೆ ಆ ಕೆತ್ತನೆಗಳ ಬಗ್ಗೆ ಯಾರೂ ಮಾತನಾಡುವುದಿಲ್ಲ.

3. ಉಳಿದಿರುವ ದೇವಾಲಯಗಳು

12ನೇ ಶತಮಾನದವರೆಗೆ ಇಲ್ಲಿ ಸುಮಾರು 85 ದೇವಾಲಯಗಳಿದ್ದವು ಆದರೆ 13ನೇ ಶತಮಾನದಲ್ಲಿ ಇವುಗಳಲ್ಲಿ ಕೆಲವು ನಾಶವಾದವು. ಇವುಗಳನ್ನು ಮುಸ್ಲಿಂ ದಾಳಿಕೋರರು ನಾಶಪಡಿಸಿದರು. ಇಂದು, ಸಂಕಿರಣದಲ್ಲಿ ಕೇವಲ 22 ದೇವಾಲಯಗಳು ಮಾತ್ರ ಉಳಿದಿವೆ.

Ancient India Facts: ಪುರಾತನ ಭಾರತದ ಈ ವಿಷಯಗಳನ್ನು ಕೇಳಿದ್ರೆ ಮೈ ನವಿರೇಳತ್ತೆ!

4. ವಿಚಿತ್ರ ಹೆಸರು

ಖಜುರಾಹೊ ಎಂಬ ಹೆಸರನ್ನು ಹಿಂದಿ ಪದ ಖಜುರ್‌ನಿಂದ ತೆಗೆದುಕೊಳ್ಳಲಾಗಿದೆ. ಇದರರ್ಥ 'ಖರ್ಜೂರ'. ನಗರವು ಖರ್ಜೂರದ ಮರಗಳಿಂದ ಆವೃತವಾಗಿತ್ತು ಮತ್ತು ಆದ್ದರಿಂದ ಈ ಹೆಸರು ಬಂದಿದೆ ಎಂದು ಹೇಳಲಾಗುತ್ತದೆ. ಆದರೆ ಇನ್ನೊಂದು ಕಥೆಯಿದೆ. ಇದು ಶಿವನ ಸಾಂಕೇತಿಕ ಹೆಸರಾದ ಖಜುರಾ-ವಾಹನ (ಚೇಳು ವಾಹನ) ನಿಂದ ಈ ಹೆಸರು ಹುಟ್ಟಿಕೊಂಡಿದೆ ಎಂದು ಹೇಳುತ್ತದೆ.

5. ದೇವಾಲಯಗಳನ್ನು ಯಾವಾಗ ನಿರ್ಮಿಸಲಾಯಿತು?

ಈ ವಿಶ್ವಪ್ರಸಿದ್ಧ ದೇವಾಲಯಗಳನ್ನು ಚಂಡೇಲಾ ರಾಜವಂಶದ ಅವಧಿಯಲ್ಲಿ ನಿರ್ಮಿಸಲಾಯಿತು. ಹೆಚ್ಚಿನ ದೇವಾಲಯಗಳನ್ನು ಕ್ರಿಸ್ತಶಕ 950 ಮತ್ತು 1050ರ ನಡುವೆ ಹಿಂದೂ ರಾಜರಾದ ಯಶೋವರ್ಮನ್ ಮತ್ತು ಧಂಗಾ ಆಳ್ವಿಕೆಯಲ್ಲಿ ನಿರ್ಮಿಸಲಾಯಿತು.

6. ಖಜುರಾಹೊ ದೇವಾಲಯಗಳ ದೊಡ್ಡ ಗುಂಪು

ಖಜುರಾಹೊ ಸಂಕಿರಣವು ಭಾರತದ ಮಧ್ಯಕಾಲೀನ ಹಿಂದೂ ಮತ್ತು ಜೈನ ದೇವಾಲಯಗಳ ದೊಡ್ಡ ಗುಂಪು. ಇಲ್ಲಿ ಕೇವಲ ಹಿಂದೂ ದೇವಾಲಯಗಳಲ್ಲ, ಜೈನ ಮಂದಿರಗಳೂ ಇವೆ.

Travel Tips : ಈ ದೇಶಕ್ಕೆ ಹೋಗಲು ವಿಮಾನ ನಿಲ್ದಾಣವೇ ಇಲ್ಲ..!
 

click me!