Ancient India Facts: ಪುರಾತನ ಭಾರತದ ಈ ವಿಷಯಗಳನ್ನು ಕೇಳಿದ್ರೆ ಮೈ ನವಿರೇಳತ್ತೆ!

Published : Apr 10, 2022, 04:46 PM IST
Ancient India Facts: ಪುರಾತನ ಭಾರತದ ಈ ವಿಷಯಗಳನ್ನು ಕೇಳಿದ್ರೆ ಮೈ ನವಿರೇಳತ್ತೆ!

ಸಾರಾಂಶ

ಸೊನ್ನೆ ಸಂಸೋಧನೆ ಭಾರತೀಯರೆಂಬುದು ನಿಮಗೆ ಗೊತ್ತು. ಇಂಥ ಸಾವಿರಾರು ಕೊಡುಗೆಗಳನ್ನು ಭಾರತ ಹಿಂದಿನಿಂದಲೂ ಮಾಡುತ್ತಲೇ ಬಂದಿದೆ. ಜಗತ್ತಿನ ಇಂದಿನ ಸ್ಥಿತಿಯಲ್ಲಿ ಭಾರತದ ಪಾಲು ಸಾಕಷ್ಟಿದೆ. 

ಭಾರತ ಮಹಾಭಾರತ ಕಾಲದಲ್ಲೇ ಅಣುಬಾಂಬ್ ಹೊಂದಿತ್ತು, ರಾಮಾಯಣ ಕಾಲದಲ್ಲೇ ವಿಮಾನ ಹೊಂದಿತ್ತು ಇತ್ಯಾದಿ ಇತ್ಯಾದಿ ವಿಷಯಗಳನ್ನು ಪುರಾಣ ಕತೆಗಳಿಗೆ ಹೋಲಿಸಿ ಹೇಳಿದಾಗ ಉತ್ಪ್ರೇಕ್ಷೆ ಎಂದು ಹಲವರಿಗೆ ಅನಿಸಬಹುದು. ಈಗ ಅದ್ಯಾವುದರ ಗೊಡವೆಗೂ ಹೋಗದೆ ಕೇವಲ ಸತ್ಯವನ್ನು, ಮತ್ತು ಸಾಬೀತಾಗಿರುವ ವಿಷಯವನ್ನಷ್ಟೇ ಹೇಳುತ್ತೇವೆ. ಪುರಾತನ ಭಾರತದ ಬಗೆಗಿನ ಈ ಐತಿಹಾಸಿಕ ಸತ್ಯಗಳನ್ನು ಕೇಳಿದ್ರೆ ಮೈ ನವಿರೇಳುತ್ತದೆ. ಜಗತ್ತಿನಲ್ಲೇ ಭಾರತೀಯರು ಹೆಚ್ಚು ಬುದ್ಧಿವಂತರೆಂಬ ಮಾತು ಮತ್ತಷ್ಟು ಸತ್ಯಕ್ಕೆ ಹತ್ತಿರವಾಗಿ ಕಾಣುತ್ತದೆ. ಇಂಥ ಅದ್ಭುತಗಳು ಎಣಿಸಲಾಗದಷ್ಟಿದ್ದರೂ, ಸಧ್ಯ ಬೆರಳೆಣಿಕೆಯಷ್ಟು ಭಾರತ ಕುರಿತ ಸತ್ಯವಿಷಯಗಳನ್ನು ಹೇಳುತ್ತೇವೆ. 
 
ಅರೇಬಿಕ್ ಸಂಖ್ಯೆ ಹುಟ್ಟಿದ್ದೇ ಇಲ್ಲಿ
ಹೌದು. ಹಿಂದೂ- ಅರೇಬಿಕ್ ಸಂಖ್ಯೆಗಳು ಭಾರತದಲ್ಲಿ 6 ಅಥವಾ 7ನೇ ಶತಮಾನದಲ್ಲಿ ಹುಟ್ಟಿದವು. ನಂತರ ಅದನ್ನು 12ನೇ ಶತಮಾನದ ಸಮಯದಲ್ಲಿ ಯೂರೋಪ್‌ನಲ್ಲಿ ಅಲ್-ಖ್ವಾರಿಜ್ಮಿ ಹಾಗೂ ಅಲ್-ಕಿಂಡಿ ಎಂಬ ಗಣಿತಜ್ಞರು ಪರಿಚಯಿಸಿದರು. ಇದೇ ಕಾರಣಕ್ಕೆ ಈ ಸಂಖ್ಯೆಗಳಿಗೆ ಅರೇಬಿಕ್ ಸಂಖ್ಯೆ(Arabic numbers) ಎಂಬ ಹೆಸರು ಬಂತು. ಈ ಸಂಖ್ಯೆಗಳು ಆ ಕಾಲಘಟ್ಟದಲ್ಲಿ ಅಬಕಸ್ ಹಾಗೂ ಬೀಜಗಣಿತ ಬೆಳವಣಿಗೆಗೆ ಕಾರಣವಾದವು. 

ಜಗತ್ತಿನ ಪುರಾತನ ವಿಶ್ವವಿದ್ಯಾಲಯಗಳು
ಜಗತ್ತಿನ ಅತಿ ಪುರಾತನ ವಿಶ್ವವಿದ್ಯಾಲಯಗಳು (oldest universities) ಮೊದಲು ಹುಟ್ಟಿದ್ದೇ ಭಾರತದಲ್ಲಿ. ಬಿಹಾರದ ನಳಂದಾ ವಿಶ್ವವಿದ್ಯಾಲಯವು ಕಲಿಕೆ ಮತ್ತು ಶಿಕ್ಷಣದ ಮೊದಲ ಶೈಕ್ಷಣಿಕ ಕೇಂದ್ರವಾಗಿತ್ತು. 427- 1197ನೇ ಇಸವಿವರೆಗೆ ನಳಂದಾವು ಬೌದ್ಧರ ಕಲಿಕಾ ಕೇಂದ್ರವಾಗಿತ್ತು. ಜಗತ್ತಲ್ಲೇ ಅತಿ ದೊಡ್ಡ ಲೈಬ್ರರಿಯನ್ನದು ಹೊಂದಿತ್ತು. ಇನ್ನು 10ನೇ ಶತಮಾನದಲ್ಲಿದ್ದ ತಕ್ಷಶಿಲಾ ವಿಶ್ವವಿದ್ಯಾಲಯ ಕೂಡಾ ಆ ಕಾಲದ ಉನ್ನತ ಶಿಕ್ಷಣ ಕೇಂದ್ರವಾಗಿ ಅಪಾರ ಹೆಸರು ಮಾಡಿತ್ತು. ವಾಲ್ಮೀಕಿ ರಾಮಾಯಣದಲ್ಲಿಯೇ ತಕ್ಷಶಿಲೆಯ ಹೆಸರು ಹೇಳಲಾಗಿದೆ. 

ನಿಮ್ಮ ಲವ್‌ ಬ್ರೇಕಪ್‌ ಆಗೋ ಸ್ಥಿತಿಯಲ್ಲಿದ್ಯಾ ? ತಿಳ್ಕೊಳ್ಳೋದು ಹೇಗೆ ?

ಶಾಂಪೂ(Shampoo) ಹುಟ್ಟಿದ್ದು ಭಾರತದಲ್ಲಿ
ಈಗ ನೀವೇನೋ ಬ್ರ್ಯಾಂಡೆಡ್ ಎಂದು ವಿದೇಶಿ ಕಂಪನಿಯ ಶಾಂಪೂ ಖರೀದಿಸುತ್ತಿರಬಹುದು. ಆದರೆ, ಶಾಂಪೂ ಎಂಬುದೊಂದನ್ನು ತಲೆಕೂದಲ ಸ್ವಚ್ಛತೆ ಹಾಗೂ ಸೌಂದರ್ಯಕ್ಕಾಗಿ ಬಳಸಬಹುದೆಂದು ತೋರಿಸಿದ್ದೇ ಭಾರತ. ಅತಿ ಹಳೆಯ ಶಾಂಪೂವೆಂದರೆ ನೆಲ್ಲಿಕಾಯಿಯನ್ನು ಅಂಟ್ವಾಳದ ಜೊತೆ ಕುದಿಸಿ ಶೋಧಿಸಿ ತಯಾರಿಸಲಾಗುತ್ತಿತ್ತು. ಶಾಂಪೂ ಎಂಬ ಪದವೂ ನೀವಂದುಕೊಂಡಂತೆ ಇಂಗ್ಲಿಷಿನದಲ್ಲ. ಹಿಂದಿಯ ಚಂಪೋ ಎಂಬ ಪದದಿಂದ ಶಾಂಪೂ ಹುಟ್ಟಿದೆ. 

ಸಲಿಂಗಕಾಮ(Homosexuality) ಒಪ್ಪಲಾಗಿತ್ತು
ಪುರಾತನ ಭಾರತದಲ್ಲಿ ಸಲಿಂಗಿಗಳನ್ನು ವಿಶೇಷವಾಗಿ ನೋಡುತ್ತಿರಲಿಲ್ಲ. ತಪ್ಪೆಂದು ಹೀಯಾಳಿಸುತ್ತಿರಲಿಲ್ಲ. ಬದಲಿಗೆ ಅವರನ್ನು ಇದ್ದ ಹಾಗೆಯೇ ಒಪ್ಪಲಾಗಿತ್ತು. ಆಗ ಇಲ್ಲಿ ತೃತೀಯ ಲಿಂಗಿಗಳು ಹಾಗೂ ಸಲಿಂಗಕಾಮಿಗಳು ಇದ್ದರಷ್ಟೇ ಅಲ್ಲ, ಅವರನ್ನು ಸಾಮಾನ್ಯವಾಗಿಯೇ ಪರಿಗಣಿಸಲಾಗಿತ್ತು. ಎಲ್ಲರೂ ಸಲಿಂಗಕಾಮವನ್ನು ಒಪ್ಪಿದ್ದರು. 2ನೇ ಶತಮಾನದ ಪುರುಷಾಯಿತ ಎಂಬ ಪುಸ್ತಕದಲ್ಲಿ ಈ ಬಗ್ಗೆ ಉಲ್ಲೇಖವಿದೆ. 

ನ್ಯಾವಿಗೇಶನ್ ಭಾರತದಲ್ಲಿ ಹುಟ್ಟಿದ್ದು
ಈಗೇನೋ ಪಕ್ಕದ ಗಲ್ಲಿಗೂ ಗೂಗಲ್ ಮ್ಯಾಪ್ ಹಾಕಿಕೊಂಡು ಓಡಾಡುತ್ತೇವೆ. ನಾವು ಬಹಳ ಆಧುನಿಕರೆಂದು ಬೀಗುತ್ತೇವೆ. ಆದರೆ, ಈ ಸಂಚರಣೆ(Navigation) ಪುರಾತನ ಭಾರತದಲ್ಲೇ ಇತ್ತು. 6000 ವರ್ಷಗಳ ಹಿಂದೆಯೇ ಹಿಂದೂ ನದಿಯನ್ನು ದಾಟಲು ಇದನ್ನು ಬಳಸಲಾಗುತ್ತಿತ್ತು. ನ್ಯಾವಿಗೇಶನ್ ಎಂಬ ಪದ ಕೂಡಾ ಸಂಸ್ಕೃತ ಪದ ನವ್ಗತಿ ಎಂಬ ಪದದಿಂದ ಬಂದಿದೆ. ಇದಕ್ಕೆ ಆಗ ಮಚ್ಚ ಯಂತ್ರ ಎಂದು ಕರೆಯಲಾಗುತ್ತಿತ್ತು. 

ಬಿಟ್ಟಿ ತಿನ್ಬೋದು ಅಂತಾನೇ 16 ಸಾರಿ ಡೇಟಿಂಗ್‌ಗೆ ಹೋದ ಹುಡುಗಿ..!

ಚೆಸ್ ಹಾಗೂ ಹಾವು ಏಣಿಯಾಟ ಭಾರತ ಮೂಲದ್ದು
ಬುದ್ಧಿವಂತರ ಆಟವೆಂದು ಕರೆಸಿಕೊಂಡಿರುವ ಚೆಸ್ ಹಾಗೂ ಮಜವಾದ ಹಾವು ಏಣಿ(snakes and ladders) ಆಟವು ಭಾರತದಲ್ಲಿ ಹುಟ್ಟಿದ್ದು. 6ನೇ ಶತಮಾನದಲ್ಲಿ ಗುಪ್ತರ ಆಳ್ವಿಕೆಯಲ್ಲಿ ಈ ಎರಡೂ ಆಟಗಳನ್ನು ಆಡಲಾಗುತ್ತಿತ್ತು. ಮೋಕ್ಷ ಪತಂ ಎಂಬ ಹೆಸರಿನಲ್ಲಿ ಹಾವು ಏಣಿ ಆಟವನ್ನು 2ನೇ ಶತಮಾನದಲ್ಲಿಯೇ ಆಡಲಾಗುತ್ತಿತ್ತು. 

ಶಸ್ತ್ರಚಿಕಿತ್ಸೆಗಳು(Surgery)
ಸುಶ್ರುತ ಪುರಾತನ ಕಾಲದಲ್ಲೇ ಕಿಡ್ನಿ ಸ್ಟೋನ್ ತೆಗೆಯಲು, ಮೂಳೆ ಮುರಿತಗಳನ್ನು ಸರಿಪಡಿಸಲು ಸೇರಿದಂತೆ ಸಾಕಷ್ಟು ಕಾಲು, ಮೆದುಳಿನ ಸರ್ಜರಿ ನಡೆಸುತ್ತಿದ್ದರು. ಅಲ್ಲದೆ ಶಸ್ತ್ರಚಿಕಿತ್ಸೆ ಮೂಲಕ ಮಗುವನ್ನು ಹೊರ ತೆಗೆದ ಬಗ್ಗೆಯೂ ಉಲ್ಲೇಖಗಳಿವೆ. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!
Traffic Mantra: ಟ್ರಾಫಿಕ್‌ನಲ್ಲಿ ಶಾಂತವಾಗಿರೋದು ಹೇಗೆ? ಈ ಮಂತ್ರ ಪಠಿಸಿ ಸಾಕು!