ಬೆಂಗಳೂರು ಅಂದ್ರೆ ಸಾಕು ಕಾಸ್ಟ್ಲೀ ಸಿಟಿ ಅನ್ನೋದು ಬ್ರ್ಯಾಂಡ್ ಆಗಿಬಿಟ್ಟಿದೆ. ಇಲ್ಲಿ ಎಲ್ಲವೂ ದುಬಾರೀನೆ. ಅದರಲ್ಲೂ ಆಟೋ, ಟ್ಯಾಕ್ಸಿ ದರವನ್ನಂತೂ ಕೇಳೋ ಆಗಿಲ್ಲ. ಹಾಗೆಯೇ ಸದ್ಯ ಮುಂಬೈ ಮೂಲದ ಕಂಪನಿಯೊಂದರ ಸಿಇಒ ಬೆಂಗಳೂರಿನಲ್ಲಿ ಆಟೋದಲ್ಲಿ ಓಡಾಡಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ಸಿಲಿಕಾನ್ ಸಿಟಿ ಅಂತ ಕರೆಸಿಕೊಳ್ಳೋ ಬೆಂಗಳೂರಲ್ಲಿ ಲಿವಿಂಗ್ ಕಾಸ್ಟ್ ಸ್ಪಲ್ಪ ಕಾಸ್ಟ್ಲೀನೆ. ಅದರಲ್ಲೂ ದಿನನಿತ್ಯ ಆಟೋ, ಕ್ಯಾಬ್ ಅಂತ ಓಡಾಡ್ತಿದ್ರೆ ಎಷ್ಟು ದುಡ್ಡು ಇದ್ರೂ ಸಾಕಾಗಲ್ಲ. ಅದರಲ್ಲೂ ಬೆಂಗಳೂರಿನ ಆಟೋದವ್ರು ಮನಬಂದಂತೆ ದುಡ್ಡು ಪೀಕ್ತಾರೆ ಅನ್ನೋ ಆರೋಪ ಕೂಡಾ ಇದೆ (ಎಲ್ಲರೂ ಅಲ್ಲ). ಹತ್ತಿರವಿರೋ ಜಾಗಕ್ಕೇನೆ ಡಬಲ್ ದರ ಕೇಳ್ತಾರೆ. ಅಡ್ರೆಸ್ ಹೇಳಿ, ಮೀಟರ್ ಹಾಕಿ ಅಂದ್ರೆ ಸುತ್ತುಬಳಸ್ಕೊಂಡು ಹೋಗಿ ಡಬಲ್ ಚಾರ್ಜ್ ಮಾಡ್ತಾರೆ ಅಂತ ಹೇಳ್ತಾರೆ. ಅದರಲ್ಲೂ ಬೆಂಗಳೂರಿಗೆ ಹೊಸಬರು ಬಂದೋರು ಆಟೋದವರ ಕೈಗೆ ಸಿಕ್ರೆ ಮುಗ್ದೇ ಹೋಯ್ತು. ಊರೆಲ್ಲಾ ಸುತ್ತಾಡಿಸಿ ಹಣ ದೋಚಿ ಬಿಡ್ತಾರೆ ಅನ್ನೋದು ಹಲವರ ದೂರು. ಇದೇ ಕಾರಣಕ್ಕೆ ಬೆಂಗಳೂರಿನ ಆಟೋ ಚಾಲಕರು ಹಗಲು ದರೋಡೆ ಮಾಡ್ತಾರೆ, ಸುಲಿಗೆ ಮಾಡ್ತಾರೆ ಅಂತ ದಿನನಿತ್ಯ ಓಡಾಡೋರು ಆರೋಪಿಸ್ತಾನೆ ಇರ್ತಾರೆ.
ಸದ್ಯ ಮುಂಬೈ ಮೂಲದ ಕಂಪನಿಯೊಂದರ ಸಿಇಒ ಅವರು ಬೆಂಗಳೂರಿಗೆ ಭೇಟಿ ನೀಡಿದಾಗ ನಗರದಲ್ಲಿ ಆಟೋದಲ್ಲಿ ಒಡಾಡಿದ ಅನುಭವವನ್ನು (Experience) ಹಂಚಿಕೊಂಡಿದ್ದಾರೆ. ಈ ಬಗ್ಗೆ ಅವರು ಮಾಡಿರವು ಟ್ವೀಟ್ ಸೋಷಿಯಲ್ ವಿಡಿಯೋದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ.
ಕರ್ನಾಟಕದಲ್ಲಿದ್ದು ಅಹಂಕಾರ ಬೇಡ ಕನ್ನಡ ಕಲಿ; ಚರ್ಚೆಗೆ ಗ್ರಾಸವಾದ ಆಟೋ ರಿಕ್ಷಾ ಬರಹ!
ಅಬ್ಬಬ್ಬಾ..500 ಮೀಟರ್ ಪ್ರಯಾಣಿಸಲು 100 ರೂಪಾಯಿ ದರ!
ಮುಂಬೈ ಮೂಲದ ಕಂಪನಿಯೊಂದರ ಸಿಇಒ ಬೆಂಗಳೂರಿನಲ್ಲಿ ಆಟೋ ಚಾಲಕರು (Auto drivers) ಮೀಟರ್‌ನಷ್ಟು ದರವನ್ನು ವಿಧಿಸುವುದಿಲ್ಲ ಎಂದು ಕಂಡು ಆಶ್ಚರ್ಯಚಕಿತರಾದರು. ಕೇವಲ 500 ಮೀಟರ್ ಪ್ರಯಾಣಿಸಲು 100 ರೂಪಾಯಿ ದರವನ್ನು ವಿಧಿಸಲಾಗಿದೆ ಎಂದು ಟ್ವೀಟ್ ನಲ್ಲಿ ಹಂಚಿಕೊಂಡಿದ್ದಾರೆ.
ನ್ಯೂರಲ್ ಗ್ಯಾರೇಜ್‌ನ ಸಹ-ಸಂಸ್ಥಾಪಕ ಮತ್ತು ಸಿಇಒ ಮಂದರ್ ನಾಟೇಕರ್ ವಾಹನದ ಮೀಟರ್‌ನ ಫೋಟೋವನ್ನು ಹಂಚಿಕೊಂಡು, 'ಈ ಫೋಟೋದಲ್ಲಿ ನೀವು ಬೆಂಗಳೂರಿನಲ್ಲಿ ಅತ್ಯಂತ ಅಲಂಕಾರಿಕ ವಸ್ತುವನ್ನು ನೋಡುತ್ತೀರಿ. ಉತ್ತಮವಾದ ಆಟೋ ಮೀಟರ್. ಇದು ಎಂದಿಗೂ ಬಳಸಲ್ಪಡದ ತುಂಬಾ ದುಬಾರಿಯಾದ ವಸ್ತುವಾಗಿದೆ' ಎಂದು ಬರೆದಿದ್ದಾರೆ.
ಬೆಂಗಳೂರಿನಾದ್ಯಂತ ಮೆಟ್ರೋ ಬಳಿ ಆ್ಯಪ್ ಆಧಾರಿತ ಆಟೋ ಸೌಲಭ್ಯ, ಚಾರ್ಜ್ ಎಷ್ಟಿರುತ್ತೆ?
In this photo you will see the most ornamental thing in Bengaluru. The great Auto Meter. So expensive that it never gets used.
I just paid 100Rs for a 500 mtrs ride. To give perspective, in Mumbai 100Rs is the meter fare for approx 9 kms. pic.twitter.com/7piaKjGhnY
'500 ಮೀಟರ್‌ಗಳ ದಾರಿಗೆ ನಾನು 100 ರೂಪಾಯಿಗಳನ್ನು ಪಾವತಿಸಿದ್ದೇನೆ. ಇದು ಮುಂಬೈನಲ್ಲಿ, ಸುಮಾರು 9 ಕಿಮೀಗೆ 100 ರೂ ಮೀಟರ್ ದರವಾಗಿದೆ' ಎಂದು ಅವರು ಹೇಳಿದ್ದಾರೆ. ಟಿವಿಎಫ್ ಅಧ್ಯಕ್ಷ ವಿಜಯ್ ಕೋಶಿ, 'ಚೆನ್ನೈ ಸಹ ಆಟೋ ಸವಾರಿಗಳಿಗೆ ಕುಖ್ಯಾತಿ ಪಡೆದಿದೆ' ಎಂದು ಹೇಳಿದರು ಇದಕ್ಕೆ ಪ್ರತಿಕ್ರಿಯಿಸಿದ ನಾಟೇಕರ್, 'ಇದು ನಗರದಲ್ಲಿ ಹಗಲಿ ದರೋಡೆಯಂತೆ ಆಗಿಬಿಟ್ಟಿದೆ. ಇಲ್ಲಿ ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ತೋರುತ್ತದೆ' ಎಂದಿದ್ದಾರೆ.
Bengaluru Bandh: ಜು.27ಕ್ಕೆ ರಾಜಧಾನಿಯಲ್ಲಿ ಸಿಗಲ್ಲ ಒಲಾ, ಉಬರ್, ಆಟೋ, ಖಾಸಗಿ ಬಸ್!