ಬಜೆಟ್‌ನಲ್ಲಿ Manali ಹೋಗುವುದ್ಹೇಗೆ? ನಟಿ ಐಶ್ವರ್ಯಾ ಶಿಂಧೋಗಿ ಕೊಡ್ತಾರೆ ಟಿಪ್ಸ್!

By Suvarna News  |  First Published Jul 25, 2023, 11:44 AM IST

ಮನಾಲಿಯಂತ ಜಾಗಕ್ಕೆ ಯಾರೇ ಹೋದ್ರೂ ನಾವು ಕೇಳೋ ಪ್ರಶ್ನೆ ಖರ್ಚು ಎಷ್ಟಾಯ್ತು ಅಂತಾ. ಅಷ್ಟು ದೂರ ಹೋಗೋಕೆ ಎಷ್ಟು ಹಣ ಬೇಕು ಎನ್ನುವ ಪ್ರಶ್ನೆ ಎಲ್ಲರನ್ನು ಕಾಡುತ್ತೆ. ಅದಕ್ಕೆ ನಟಿ ಐಶ್ವರ್ಯಾ ಶಿಂಧೋಗಿ  ಉತ್ತರ ನೀಡಿದ್ದಾರೆ.
 


ಬಾಲಿವುಡ್, ಸ್ಯಾಂಡಲ್ವುಡ್ ಸೇರಿದಂತೆ ಧಾರಾವಾಹಿ ಕಲಾವಿದರು ಹಾಗೇ ರಿಯಾಲಿಟಿ ಶೋನಲ್ಲಿ ಪಾಲ್ಗೊಂಡು ಪ್ರಸಿದ್ಧಿಯಾದ ಅನೇಕ ಕಲಾವಿದರು ಯುಟ್ಯೂಬ್ ಗಳನ್ನು ಶುರು ಮಾಡಿದ್ದಾರೆ. ಯುಟ್ಯೂಬ್ ಚಾನೆಲ್ ಮೂಲಕ ಪ್ರೇಕ್ಷಕರಿಗೆ ಇನ್ನಷ್ಟು ಹತ್ತಿರವಾಗಿರುವ ಕಲಾವಿದರು, ತಮ್ಮ ನಿತ್ಯ ಜೀವನದಲ್ಲಿ ಆಗಿ ಹೋಗುವ ಘಟನೆಗಳು, ಬ್ಯೂಟಿ ಟಿಪ್ಸ್, ಫ್ಯಾಷನ್, ಅಡುಗೆ ಸೇರಿದಂತೆ ಅನೇಕ ವಿಷ್ಯಗಳನ್ನು ಜನರಿಗೆ ತಿಳಿಸ್ತಿದ್ದಾರೆ.

ಯುಟ್ಯೂಬ್ (Youtube) ಚಾನೆಲ್ ಮೂಲಕ ಮತ್ತಷ್ಟು ಮನಸ್ಸುಗಳಿಗೆ ಹತ್ತಿವಾದವರಲ್ಲಿ ನಟಿ ಐಶ್ವರ್ಯಾ ಶಿಂಧೋಗಿ (Aishwarya Shindhogi) ಕೂಡ ಒಬ್ಬರು. ನಾಗಿನಿ 2, ಸೂಪರ್ ಕ್ವೀನ್ (ರಿಯಾಲಿಟಿ ಶೋ), ನಮ್ಮ ಲಚ್ಚಿ, ಜಾಕ್ಸನ್, ಸಪ್ನೋಂಕಿ ರಾಣಿ, ಮಮ್ಮಿ ಸೇವ್ ಮಿ ಸೇರಿದಂತೆ ಅನೇಕ ಧಾರಾವಾಹಿ, ಸಿನಿಮಾಗಳಲ್ಲಿ ನಟಿಸಿದ್ದಾರೆ. ಐಶ್ವರ್ಯ ಕೆಲ ದಿನಗಳ ಹಿಂದಷ್ಟೆ ಮನಾಲಿ ಟ್ರಿಪ್ (Trip) ಗೆ ಹೋಗಿ ಬಂದಿದ್ದು, ಬಜೆಟ್ ಟ್ರಿಪ್ ಮಾಡೋದು ಹೇಗೆ ಅಂತಾ ಸಲಹೆ ನೀಡಿದ್ದಾರೆ. 

Latest Videos

undefined

60 ವರ್ಷಗಳ ಹಿಂದೆ ಅಜ್ಜಿ ಕಾಲೆಳಿತಿದ್ದೆ ಈಗ ಆಕೆಯಂತೆ ನಾ ಆಡುವೆ: ಸುಧಾಮೂರ್ತಿ

ಹಿಮಾಚಲ ಟ್ರಿಪ್ ಬಗ್ಗೆ ಐಶ್ವರ್ಯಾ ಶಿಂಧೋಗಿ ಹೇಳಿದ್ದೇನು? : ಪ್ರತಿ ಬಾರಿ ಟ್ರಿಪ್ ಗೆ ಹೋಗುವ ಮೊದಲು ಟ್ರಿಪ್ ಪ್ಲಾನ್ ಮುಖ್ಯ. ಒಂದೆಡರು ತಿಂಗಳ ಮೊದಲೇ ನೀವು ವಿಮಾನದ ಟಿಕೆಟ್ ಬುಕ್ ಮಾಡಿದ್ರೆ ಟಿಕೆಟ್ ಬೆಲೆ ನಿಮಗೆ ಕಡಿಮೆಯಾಗುತ್ತೆ. ಬೆಂಗಳೂರು ಟು ದೆಹಲಿ ಹಾಗೇ ದೆಹಲಿಯಿಂದ ಬೆಂಗಳೂರು ವಿಮಾನಕ್ಕೆ ಐಶ್ವರ್ಯ ಟೀಂ ಖರ್ಚು ಮಾಡಿದ್ದು 13, 500 ರೂಪಾಯಿ. 

ದೆಹಲಿಗೆ ಹೋಗ್ಲೇಬೇಡಿ : ಮನಾಲಿಗೆ ಹೋಗುವವರು ದೆಹಲಿಗೆ ಹೋಗುವ ಬದಲು ಚಂಡೀಗಢಕ್ಕೆ ವಿಮಾನ ಟಿಕೆಟ್ ಬುಕ್ ಮಾಡಿ. ಇದ್ರಿಂದ ಟೈಂ  ಉಳಿಯೋ ಜೊತೆಗೆ ನಿಮಗೆ ಖರ್ಚು ಕಮ್ಮಿ ಆಗುತ್ತೆ. ದೆಹಲಿಯಿಂದ ಜಿಬಿಗೆ ಹೋಗಲು 12 ಗಂಟೆ ಬೇಕು. ಅದೇ ಚಂಡೀಗಢದಿಂದ ಮನಾಲಿಗೆ ಒಂದಾರು ಗಂಟೆ ಪ್ರಯಾಣ ಮಾಡಿದ್ರೆ ಸಾಕು.

ಕಾರ್ ಮೊದಲೇ ಬುಕ್ ಮಾಡಿ :  ಚಂಡೀಗಢ ಅಥವಾ ದೆಹಲಿಯಿಂದ ಮನಾಲಿಗೆ ನೀವು ರಸ್ತೆ ಪ್ರಯಾಣ ಬೆಳೆಸಬೇಕಾದ ಕಾರಣ ಮೊದಲೇ ಕಾರ್ ಬುಕ್ ಮಾಡೋದು ಒಳ್ಳೆಯದು. ಬಜೆಟ್ ಹಾಗೂ ನಿಮ್ಮ ಕಂಫರ್ಟ್ ನೋಡಿ ನೀವು ಮೊದಲೇ ಬುಕ್ ಮಾಡಿದ್ರೆ ಅನುಕೂಲ. ಏಳು ದಿನ ಕಾರ್ ಬಳಸಿಕೊಂಡ ಇವರು 53 ಸಾವಿರ ಪ್ಯಾಕೇಜ್ ನಲ್ಲಿ ಕಾರ್  ಬುಕ್ ಮಾಡಿದ್ರು. ತುಂಬಾ ಜನ ಹೋದ ಕಾರಣ ಪ್ರತಿಯೊಬ್ಬರಿಗೆ ಬಂದ ಖರ್ಚು ಕಡಿಮೆ.

ಜಿಬಿಯಲ್ಲಾದ ಖರ್ಚು ಎಷ್ಟು? : ಜಿಬಿಗೆ ಹೋದ ಐಶ್ವರ್ಯ ಟೀಂ ಜಾನಿಸ್ ಟ್ರೀಂ ಹೌಸ್ ನಲ್ಲಿ ಉಳಿದುಕೊಂಡಿದ್ರು. ಅದಕ್ಕೆ ಬಂದ ಖರ್ಚು ಏಳು ಸಾವಿರ. ಪ್ರತಿಯೊಬ್ಬರಿಗೆ 1166 ರೂಪಾಯಿ ಖರ್ಚು ಬಂದಿದೆ.  

Bengaluru Metro:ಆಗಸ್ಟ್‌ನಿಂದ 2 ಹೊಸ ಮಾರ್ಗದಲ್ಲಿ ಮೆಟ್ರೋ ಸಂಚಾರ ಆರಂಭ

ಕಸೋಲ್‌ನಲ್ಲಿ ಇದನ್ನು ಮಿಸ್ ಮಾಡ್ಕೊಳ್ಳಬೇಡಿ : ಕಸೋಲ್  ಶಾಪಿಂಗ್ ಗೆ ಬೆಸ್ಟ್ ಪ್ಲೇಸ್. 300 – 500 ಒಳಗೆ ಇಲ್ಲಿ ಶಾಲ್, ಪ್ಯಾಂಟ್ ಎಲ್ಲ ಸಿಗುತ್ತೆ. ಚೌಕಾಸಿ ಮಾಡ್ಬೇಕು. ಅದಕ್ಕಿಂತ ಹೆಚ್ಚು ಕೊಡೋಕೆ ಹೋಗ್ಬೇಡಿ. 
ಕಸೋಲ್ ನಲ್ಲಿ  ಪಂಜತಾರಾ ಪಬ್ ತುಂಬಾ ಚೆನ್ನಾಗಿದೆ. ಕಸೋಲ್ ಐಷಾರಾಮಿ ಹೊಟೇಲ್ ಬುಕ್ ಮಾಡಿದ್ದ ಐಶ್ವರ್ಯ ಟೀಂ ಬಿಲ್ ಮಾಡಿದ್ದು 17000 ರೂಪಾಯಿ. ಆದ್ರೆ ಜನ ಹೆಚ್ಚಿರು ಕಾರಣ ಒಬ್ಬರಿಗೆ 2800 ರೂಪಾಯಿ ಖರ್ಚು ಬಂದಿತ್ತು. ಹಮ್ಟಾ ಪ್ಲಾಸ್ ನಲ್ಲಿ ಕಡಿಮೆ ಬೆಲೆಯ ಹೊಟೇಲ್ ಸಾಕಷ್ಟಿದೆ. ಆದ್ರೆ ಗ್ಲಾಂಪಿಂಗ್ ಕ್ಲಬ್  ತುಂಬಾ ಚೆನ್ನಾಗಿದ್ದು, ದುಬಾರಿ. ಈ ಹೊಟೇಲ್ ನಲ್ಲಿ ಒಂದು ರಾತ್ರಿಗೆ 7 -8 ಸಾವಿರ ಖರ್ಚು ಬರುತ್ತೆ. ಒಳ್ಳೆ ವ್ಯೂವ್ ಮತ್ತೆ ಒಳ್ಳೆ ಆಹಾರ ಬೇಕು ಅಂದ್ರೆ ಅಲ್ಲಿಗೆ ಹೋಗಿ.

ಮನಾಲಿಯಲ್ಲಿ ಗಮನ ಸೆಳೆದದ್ದೇನು? : ಮನಾಲಿಯಲ್ಲೂ ಸಾಕಷ್ಟು ಹೊಟೇಲ್ ಇದ್ದು ವುಡ್ ರಾಕ್ ಹೊಟೇಲ್ ಡಿಫರೆಂಟ್ ಆಗಿದೆ. ಅಲ್ಲಿ ಎರಡು ದಿನಕ್ಕೆ ಬಂದ ಖರ್ಚು ಒಬ್ಬರಿಗೆ 3,500 ರೂಪಾಯಿ. 

ಅಡ್ವೆಂಚರ್ ಸ್ಪೋರ್ಟ್ಸ್ (Adventurous Sports) ಮಿಸ್ ಮಾಡ್ಕೊಳ್ಳಬೇಡ :  ಮನಾಲಿಯಲ್ಲಿ ಅಡ್ವೆಂಚರ್ ಸ್ಪೋರ್ಟ್ಸ್ ಮಿಸ್ ಮಾಡ್ಕೊಳ್ಳಬೇಡಿ ಎನ್ನುತ್ತಾರೆ ಐಶ್ವರ್ಯ. ಸರ್ಕಾರದಿಂದ ಅಪ್ರೂವಲ್ ಪಡೆದ ಅಂಗಡಿಗಳೇ ಇಲ್ಲಿದ್ದು, 2500 ರೂಪಾಯಿಗೆ ಮೂರು ಗೇಮ್ ಆಯ್ಕೆ ಮಾಡಿಕೊಳ್ಳಬಹುದು. ಜಿಪ್ ಲೈನಿಂಗ್, ಯಾಕ್ ರೈಡ್, ಸ್ಕೀನ್  ಬಹಳ ಮಜಾ ನೀಡುತ್ತೆ. ನಿಮ್ಮಿಷ್ಟದಂತೆ ನೀವು ಗೇಮ್ ಆಯ್ಕೆ ಮಾಡಿಕೊಳ್ಳಿ. ಆದ್ರೆ ಗೇಮ್ ಆಡ್ದೆ ಬರಬೇಡಿ ಎನ್ನುತ್ತಾರೆ ಐಶ್ವರ್ಯ. ನಂತ್ರ ಕುಲ್ಲುವಿನಲ್ಲಿ ಹೋಮ್ ಸ್ಟೇಯಲ್ಲಿ ಉಳಿದುಕೊಂಡ ಐಶ್ವರ್ಯ 2 ಸಾವಿರ ರೂಪಾಯಿ ಖರ್ಚು ಮಾಡಿದ್ದರು. ಕೊನೆಯಲ್ಲಿ ಮಾಸ್ಟೋ ಮನಾಲಿ ಹೌಸ್, ರಿವರ್ ರ್ಯಾಪ್ಟಿಂಗ್ ಎಂಜಾಯ್ ಮಾಡಿದವರು ಚಂಡಿಗಢದಿಂದ ದೆಹಲಿಗೆ ಬಂದು ಅಲ್ಲಿಂದ ಬೆಂಗಳೂರಿಗೆ ವಾಪಸ್ ಬಂದಿದ್ದರು.

ಒಟ್ಟೂ ಆದ ಖರ್ಚೆಷ್ಟು? : ಐಶ್ವರ್ಯ ಪ್ರಕಾರ, ಏಳು ದಿನಕ್ಕೆ 50 – 55 ಸಾವಿರ ರೂಪಾಯಿ ಖರ್ಚಾಗಿದೆ. ಇದಕ್ಕಿಂತ ಕಡಿಮೆ ಖರ್ಚಿನಲ್ಲಿ ನೀವು ಪ್ರವಾಸ ಮುಗಿಸಬಹುದು. ಶೇರಿಂಗ್ ರೂಮ್, ಹಾಸ್ಟೆಲ್ ಗೆ ಹೋದ್ರೆ ಖರ್ಚು ಕಡಿಮೆ. 
 

click me!