ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಸುತ್ತಲಿನ ವನರಾಶಿಯ ನಡುವೆ ಸಾಗುವ ಚಾರ್ಮುಡಿ ಘಾಟಿ ರಸ್ತೆಯಲ್ಲಿ ಹತ್ತಾರು ಮಿನಿ ಫಾಲ್ಸ್ ಗಳು ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತದೆ.
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಜು.22): ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಚಾರ್ಮುಡಿ ಘಾಟಿ ಮಳೆಗಾಲ ಬಂತೆಂದರೆ ಜಲಧಾರೆಯ ಸೊಬಗನ್ನು ಇಮ್ಮಡಿಗೊಳಿಸುತ್ತದೆ. ಸುತ್ತಲಿನ ವನರಾಶಿಯ ನಡುವೆ ಹರಿಯುವ ಚಾರ್ಮುಡಿ ಘಾಟಿಯ ರಸ್ತೆಯಲ್ಲಿ ನಿರ್ಮಾಣ ಆಗಿರುವಂತಹ ಫಾಲ್ಸ್ ಗಳು ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತದೆ. ಚಾರಣ ಹೊಗುವವರಿಗಂತು ಸೂಕ್ತ ಸ್ಥಳ. ಮಳೆಗಾಲದಲ್ಲಿ ಕಂಡು ಬರುವ ಕಾರಂಜಿಯಂತಹ ನೀರಿನ ಒರತೆಗಳೂ ಸಹ ಕೆಲವೊಮ್ಮೆ ಜಲಪಾತಗಳಾಗಿ ದುಮ್ಮಿಕ್ಕುವುದನ್ನು ನೋಡುವುದೇ ಒಂದು ನಯನಮನೊಹರ.
ಮಳೆಗಾಲ ಬಂತೆಂದರೆ ಸಾಕು ಜಲಧಾರೆಗೆ ಜೀವಕಳೆ: ಚಿಕ್ಕಮಗಳೂರಿನಿಂದ ಮೂಡಿಗೆರೆ ಮೂರ್ಗವಾಗಿ 45 ಕಿ.ಲೋ ಮೀಟರ್ ದೂರ ಕ್ರಮಿಸಿದ್ದರೆ ಚಾರ್ಮುಡಿ ಘಾಟಿ ಎದುರುಗುತ್ತೇದೆ. ಕಳೆದ ಒಂದು ವಾರದಿಂದಾ ಸುರಿಯುತ್ತಿರುವ ನಿರಂತರ ಮುಂಗಾರು ಮಳೆಯಿಂದಾಗಿ ರಸ್ತೆ ಉದ್ದಕ್ಕೂ ಬಾನೆತ್ತರದ ಶಿಖರಗಳಿಂದ ಕೆಲವೆಡೆ ರಭಸವಾಗಿ ಚಿಮ್ಮುವ ಜಲಪಾತಗಳು ರಮಣೀಯ ನೋಟವನ್ನು ಸೃಷ್ಟಿಸಿದೆ, ದಟ್ಟ ಕಾನನದ ನಡುವೆ ಕೆಲವೆಡೆಗಳಲ್ಲಿ ಜುಳು ಜುಳು ನಾದಗೈಯುತ್ತಾ ಸಾಗಿ ಮುದನೀಡುತ್ತವೆ.
undefined
ಮಳೆ ಮೋಡಗಳು ಕಟ್ಟೋದು ನೋಡ್ಬೇಕಾ ಬಲ್ಲಾಳರಾಯನ ದುರ್ಗಕ್ಕೆ ಬನ್ನಿ: ಟ್ರಕ್ಕಿಂಗ್‌ಗೆ ಬೆಸ್ಟ್ ಪ್ಲೇಸ್
10ಕ್ಕೂ ಹೆಚ್ಚು ಮಿನಿ ಜಲಪಾತಗಳು : ಸಾಮಾನ್ಯವಾಗಿ ಮಳೆಗಾಲ ಆರಂಭವಾಯಿತೆಂದರೆ ಸಾಕು ಚಾರ್ಮಾಡಿ ಘಾಟಿಯ ತುಂಬೆಲ್ಲಾ 10ಕ್ಕೂ ಅಧಿಕ ಮಿನಿ ಜಲಪಾತಗಳು ಪ್ರತ್ಯಕ್ಷವಾಗುತ್ತವೆ. ಎಲ್ಲೋ ಹುಟ್ಟಿ ಬೆಟ್ಟದಲ್ಲಿ ಹನಿ ಹನಿಯಾಗಿ ಜಿನುಗಿ, ತದನಂತರ ನೀರ ಹನಿಗಳು ಒಂದೊಂದಾಗಿ ಸೇರಿ ಝರಿಯಾಗಿ ಜುಳು ಜುಳು ನಿನಾದವ ಮಾಡುತ್ತಾ ಎತ್ತರದಿಂದ ಧುಮುಕಿ ಮತ್ತೆ ಒಯ್ಯಾರದಿಂದ ಮೈ ಬಳುಕಿಸಿ ಸಾಗುವ ಜಲಧಾರೆಯನ್ನು ಕಾಣುವುದೇ ಒಂದು ಅದ್ಭುತ. ಇನ್ನು ಗಿಡಗಂಟೆಗಳ ಮೇಲೆಲ್ಲಾ ಸಣ್ಣ ಸಣ್ಣ ಸಿಂಚನ ಮಾಡುತ್ತಾ ಬೃಹದಾಕಾರದ ಬಂಡೆಗಳ ಮೇಲಿಂದ ಹಾಲ್ನೊರೆಯಂತೆ ಪ್ರಪಾತಕ್ಕೆ ಧುಮುಕುವ ಜಲಧಾರೆಗಳು ರಮ್ಯಾದ್ಬುತ ನೋಟವನ್ನು ಸೃಷ್ಟಿಸುತ್ತಿವೆ. ಚಾರ್ಮಾಡಿ ಘಾಟಿಯಲ್ಲಿ ಕಂಡು ಬರುವ ಹತ್ತಾರು ಜಲಧಾರೆಗಳನ್ನು ವೀಕ್ಷಿಸುವುದೇ ಒಂತರಾ ಖುಷಿ ಎನ್ನುವುದು ಪ್ರವಾಸಿಗರ ಮಾತು.
ದಟ್ಟವಾದ ಮಂಜು ಮಳೆ ನಡುವೆ ಜಲಧಾರೆ ನರ್ತನ: ಮುಗಿಲು ಚುಂಬಿಸುವ ಹಸಿರು ಬೆಟ್ಟದ ಮೇಲೆಲ್ಲ ರಾಶಿ ಬಿದ್ದ ಮಂಜು, ಅದರ ನಡುವೆ ಮಳೆ, ಬಂಡೆಯಿಂದ ಬಂಡೆಗೆ ಜಿಗಿಯುವ ಜಲಧಾರೆಯ ಮಂಜುಳಗಾನ, ಮೈ ಕೊರೆಯುವ ಗಾಳಿ, ಎದೆ ಝಲ್ ಎನಿಸುವ ಕಡಿದಾದ ರಸ್ತೆಯ ತಳದಲ್ಲೇ ಇರುವ ಪ್ರಪಾತ, ಪ್ರಶಾಂತವಾಗಿ ಹಸಿರು ಹೊದ್ದು ಮಲಗಿರುವ ದಟ್ಟ ಕಾನನ ಮಲೆನಾಡಿನಲ್ಲೀಗ ಹೊಸ ಲೋಕವೊಂದನ್ನು ತೆರೆದಿಟ್ಟಿದೆ ಚಾರ್ಮಾಡಿ ಘಾಟನ ಸೌಂದರ್ಯ.ನಿತ್ಯ ದಕ್ಷಿಣಕನ್ನಡ, ಧರ್ಮಸ್ಥಳಕ್ಕೆ ತೆರಳುವ ಪ್ರವಾಸಿಗರು, ಭಕ್ತರು , ಪ್ರಯಾಣಿಕರು ಕೆಲ ನಿಂತು ಇಲ್ಲಿನ ಪ್ರಕೃತಿಯ ಸೌಂದರ್ಯವನ್ನು ಸವಿದು ನಂತ ಪ್ರಯಾಣ ಬೆಳೆಸುತ್ತಾರೆ.
ಶಕ್ತಿ ಯೋಜನೆಯಿಂದ ತುಂಬಿ ತುಳುಕುತ್ತಿರುವ ದೇವಾಲಯಗಳ ಹುಂಡಿಗಳು: ಯಾವ ದೇವಾಲಯಕ್ಕೆ ಆದಾಯವೆಷ್ಟು ನೋಡಿ..
ಒಟ್ಟಾರೆಕಳೆದ ಒಂದು ವಾರದ ಮುಂಗಾರು ಮಳೆಯ ಅಬ್ಬರಕ್ಕೆ ಕೊಟ್ಟಿಗೆಹಾರ,ಚಾರ್ಮಾಡಿ ಘಾಟಿ ಸೇರಿದಂತೆ ಸುತ್ತ ಮುತ್ತಲ ಪ್ರದೇಶ ಪ್ರಕೃತಿಯ ಸೌಂದರ್ಯ ಪ್ರತಿಯೊಬ್ಬರನ್ನೂ ಸೆಳೆಯುತ್ತಿದೆ. ಈ ರಸ್ತೆಯಲ್ಲಿ ಹೆಚ್ಚಿನ ವಾಹನ ದಟ್ಟಣೆ ಇರೋದರಿಂದಾ ಟ್ರಾಫಿಕ್ ಸಮಸ್ಯೆಯೂ ಆಗ ಈಗ ಅಂತಾ ಕಾಣಿಸಿಕೊಳ್ಳುತ್ತಿದೆ. ಮಲೆನಾಡಿನ ನಿಸರ್ಗ ಚೆಲುವಿನ ಜಲಪಾತಗಳು ಹಾಗೂ ಮುಂಗಾರು ಮಳೆಯ ಲೀಲೆಗಳನ್ನು ಕಣ್ತುಂಬ ಸವಿಯಲು ಖುದ್ದು ಮಲೆನಾಡಿಗೆ ಬಂದರೇ ಮಾತ್ರ ಅದರ ನಿಜ ಅನುಭವ ಸವಿಯಲೂ ಸಾಧ್ಯ..