ಭಾರತದ ಈ ಊರಿನಲ್ಲಿ ನವವಧು 7 ದಿನಗಳವರೆಗೆ ಬಟ್ಟೆಯನ್ನೇ ಧರಿಸೊಲ್ಲ!

Published : Feb 25, 2025, 06:32 PM ISTUpdated : Feb 25, 2025, 07:09 PM IST
ಭಾರತದ ಈ ಊರಿನಲ್ಲಿ ನವವಧು 7 ದಿನಗಳವರೆಗೆ ಬಟ್ಟೆಯನ್ನೇ ಧರಿಸೊಲ್ಲ!

ಸಾರಾಂಶ

ಭಾರತದ ಕೆಲವು ಊರುಗಳಲ್ಲಿ ಅತ್ಯಂತ ವಿಚಿತ್ರ ರೂಢಿಗಳಿವೆ. ಅಂಥ ಒಂದು ಸಾಂಪ್ರದಾಯಿಕ ರೂಢಿ- ನವವಧು ಮದುವೆಯಾದ ಬಳಿಕ ಏಳು ದಿನಗಳ ಕಾಲ ಬಟ್ಟೆಯನ್ನೇ ಧರಿಸದೆ ಇರೋದು! ಹಾಂ, ಅಂದಹಾಗೆ ವಧು ಬಟ್ಟೆಯಿಲ್ಲದೆ ಇರುವಾಗ ವರ ಅವಳ ಜೊತೆಗಿರುತ್ತಾನೆ ಅಂತ ಭಾವಿಸಿ ರೋಮಾಂಚಿತರಾದಿರಾ? ಸ್ವಲ್ಪ ತಡೀರಿ! 

ಭಾರತದ ಕೆಲವು ರಿಮೋಟ್‌ ಊರುಗಳಲ್ಲಿ ಅತ್ಯಂತ ವಿಚಿತ್ರ ರೂಢಿಗಳಿವೆ. ಅವುಗಳ ಬಗ್ಗೆ ಕೇಳಿದಾಗ ಆಧುನಿಕರು ಎನಿಸಿಕೊಂಡ ನಮಗೆ ವಿಚಿತ್ರ, ವಿಲಕ್ಷಣ ಅನಿಸಬಹುದು. ಆದರೆ ಅವರಿಗೆ ಇದು ಸಹಜ. ಅಂಥ ಒಂದು ಸಾಂಪ್ರದಾಯಿಕ ರೂಢಿ- ನವವಧು ಮದುವೆಯಾದ ಬಳಿಕ ಏಳು ದಿನಗಳ ಕಾಲ ಬಟ್ಟೆಯನ್ನೇ ಧರಿಸದೆ ಇರೋದು! 

ಹೌದು, ಈ ವಿಚಿತ್ರ ಆಚರಣೆ ಇರೋದು ಹಿಮಾಚಲ ಪ್ರದೇಶದಲ್ಲಿ. ಹಿಮಾಚಲ ಪ್ರದೇಶದ ಮಣಿಕರನ್ ಕಣಿವೆಯಲ್ಲಿರುವ ಪಿನಿ ಗ್ರಾಮದಲ್ಲಿ ಈ ವಿಶಿಷ್ಟ ಸಂಪ್ರದಾಯವನ್ನು ಆಚರಿಸಲಾಗುತ್ತದೆ. ಪಿಣಿ ಗ್ರಾಮದಲ್ಲಿರುವ ವಿಚಿತ್ರ ಸಂಪ್ರದಾಯದ ಪ್ರಕಾರ ಮದುವೆಯಾದ ನಂತರ ಏಳು ದಿನಗಳ ಕಾಲ ವಧು ಬಟ್ಟೆಯನ್ನು ಧರಿಸದೆ ಇರುತ್ತಾಳೆ. ಈ ಆಚರಣೆ ಆಳವಾಗಿ ಬೇರೂರಿರುವ ಸಂಪ್ರದಾಯವಾಗಿದ್ದು, ಗ್ರಾಮಸ್ಥರು ಬಲವಾದ ನಂಬಿಕೆ ಮತ್ತು ಭಕ್ತಿಯಿಂದ ಇದನ್ನು ಎತ್ತಿಹಿಡಿಯುತ್ತಾರೆ. 

ಹಾಂ, ಅಂದಹಾಗೆ ವಧು ಬಟ್ಟೆಯಿಲ್ಲದೆ ಇರುವ ಈ ವರ ಅವಳ ಜೊತೆಗಿರುತ್ತಾನೆ ಅಂತೇನೂ ಭಾವಿಸಿ ನೀವು ರೋಮಾಂಚಿತರಾಗಬೇಕಿಲ್ಲ. ಹಾಗಿಲ್ಲ. ಆ ಸಮಯದಲ್ಲಿ ವಧು ಮತ್ತು ವರರು ಪ್ರತ್ಯೇಕವಾಗಿರುತ್ತಾರೆ, ಪರಸ್ಪರ ಸಂಪರ್ಕವನ್ನು ಹೊಂದಿರುವುದಿಲ್ಲ. ಇಬ್ಬರೂ ಬೇರೆ ಬೇರೆ ಮನೆಯಲ್ಲಿರುತ್ತಾರೆ. ಈ ವಿಶಿಷ್ಟ ಆಚರಣೆಯ ಅರ್ಥವೇನು? ಇದು ವಧುವಿನ ದೇಹದ ಶಕ್ತಿಯನ್ನು ಹಾಗೂ ವರನ ದೇಹದ ಶಕ್ತಿಗಳನ್ನು ಮುಂದಿನ ಸಂಸಾರಕ್ಕಾಗಿ ಸಜ್ಜುಗೊಳಿಸುತ್ತದಂತೆ. ವಧು ಬೆತ್ತಲೆಯಾಗಿರುವ ಸಮಯದಲ್ಲಿ ಅರಣ್ಯದ ದೈವೀಶಕ್ತಿಗಳು ಆಕೆಯನ್ನು ಶುದ್ಧಗೊಳಿಸುತ್ತವೆ. ನಿಸರ್ಗದಿಂದ ಆಕೆ ತನ್ನ ದೇಹಕ್ಕೆ, ಮುಂದಿನ ಸಂಸಾರ ಜೀವನಕ್ಕೆ ಅಗತ್ಯವಾದ ಶಕ್ತಿಗಳನ್ನು ಪಡೆಯುತ್ತಾಳೆ ಎಂದು ಹೇಳಲಾಗುತ್ತದೆ. ಅತ್ತ ವರನೂ ಈ ಅವಧಿಯಲ್ಲಿ ಒಂಟಿಯಾಗಿರುತ್ತಾನೆ. ಆತನಿಗೂ ದೈಹಿಕ ಕಾಮನೆಗಳನ್ನು ಹತ್ತಿಕ್ಕುವ, ಸಂಯಮ ಸಾಧಿಸುವ ಶಕ್ತಿಯನ್ನು ಈ ಅವಧಿ ಕಲಿಸಿಕೊಡುತ್ತದೆ.  

ಈ ವಿಶಿಷ್ಟ ವಿವಾಹ ಸಂಪ್ರದಾಯದ ಜೊತೆಗೆ, ಪೀನಿ ಗ್ರಾಮವು ಶ್ರಾವಣ ಮಾಸದಲ್ಲಿ ಮತ್ತೊಂದು ವಿಶಿಷ್ಟ ಸಂಪ್ರದಾಯವನ್ನು ಆಚರಿಸುತ್ತದೆ. ಈ ಮಾಸದಲ್ಲಿ ಐದು ದಿನಗಳ ಕಾಲ, ಗ್ರಾಮದಲ್ಲಿ ಮಹಿಳೆಯರು ಬಟ್ಟೆ ಧರಿಸದೆ ಓಡಾಡುತ್ತಿರುತ್ತಾರೆ. ಪೀಣಿ ಗ್ರಾಮದ ಈ ಸಂಪ್ರದಾಯವು ಶತಮಾನಗಳಷ್ಟು ಹಳೆಯದು. ಇದರ ಹಿಂದೆ ಬಲವಾದ ನಂಬಿಕೆಯಿದೆ. ದುಷ್ಟಶಕ್ತಿಗಳಿಂದ ಗ್ರಾಮವನ್ನು ರಕ್ಷಿಸಲು ಬಹಳ ಹಿಂದೆಯೇ ಬಟ್ಟೆ ಧರಿಸದ ಅಭ್ಯಾಸವು ಪ್ರಾರಂಭವಾಯಿತು ಎಂದು ಹೇಳಲಾಗುತ್ತದೆ.

ಆಧ್ಯಾತ್ಮಿಕತೆ ವಿಚಾರ ಬಂದಾಗ ಭಾರತದ ಈ 5 ಸ್ಥಳಗಳನ್ನ ಮಿಸ್‌ ಮಾಡ್ಲೇಬೇಡಿ!

ಈ ಆಚರಣೆ ನಡೆಯುವುದು ಹೇಗೆ? ಐದು ದಿನಗಳ ಕಾಲ ಗ್ರಾಮದಲ್ಲಿ ಮಹಿಳೆಯರು ಬಟ್ಟೆ ಧರಿಸುವುದಿಲ್ಲ. ಈ ಸಮಯದಲ್ಲಿ ಗ್ರಾಮದ ಪುರುಷರಿಗೂ ಕಟ್ಟುಕಟ್ಟಳೆ ಇದೆ. ಅವರು ಮದ್ಯ ಸೇವಿಸುವುದಿಲ್ಲ. ಈ ಸಮಯದಲ್ಲಿ ಹಳ್ಳಿಯಲ್ಲಿರುವ ಗಂಡ ಹೆಂಡತಿಯರು ಪರಸ್ಪರ ಮಾತನಾಡುವುದಿಲ್ಲ. ಮಹಿಳೆ ಸಂಪ್ರದಾಯವನ್ನು ಅನುಸರಿಸದಿದ್ದರೆ, ಅವಳು ಕೆಟ್ಟ ಸುದ್ದಿಯನ್ನು ಕೇಳಬಹುದು ಅಥವಾ ದುರದೃಷ್ಟಕರ ಘಟನೆಯನ್ನು ಅನುಭವಿಸಬಹುದು ಎನ್ನಲಾಗುತ್ತದೆ.
 
ಯಾಕೆ ಈ ಸಂಪ್ರದಾಯ? ಕತೆಯ ಪ್ರಕಾರ, ಬಹು ಹಿಂದೆ ಒಬ್ಬ ರಾಕ್ಷಸ ಇಲ್ಲಿನ ಮಹಿಳೆಯರ ಬಟ್ಟೆಗಳನ್ನು ಹರಿದು ಹಾಕಿ ಅವರ ಮಾನದ ಮೇಲೆ ದಾಳಿ ಮಾಡಿದ್ದ. ರಾಕ್ಷಸನ ದಾಳಿಯಿಂದ ಜನರನ್ನು ಮುಕ್ತಗೊಳಿಸಲು ಲಾಹು ಘೋಂಡ್ ಎಂಬ ದೇವತೆ ಆಗಮಿಸುತ್ತಾನೆ. ಭಾದ್ರಪದ ಮಾಸದ ಮೊದಲ ದಿನ ರಾಕ್ಷಸನನ್ನು ಕೊಂದು ಮಹಿಳೆಯರನ್ನು ರಕ್ಷಿಸಿದ. ಈ ಪುರಾಣದ ನೆನಪು ಈ ಆಚರಣೆಯ ಹಿನ್ನೆಲೆಯಲ್ಲಿದೆ. ಆಧುನಿಕ ಕಾಲದಲ್ಲಿಯೂ ಈ ಸಂಪ್ರದಾಯ ಇದೆಯೇ? ಇದೆ, ಆದರೆ ಸ್ವಲ್ಪ ವ್ಯತ್ಯಾಸ ಮಾಡಲಾಗಿದೆ. ಈಗ ಮಹಿಳೆಯರು ತೆಳುವಾದ ಬಟ್ಟೆಯನ್ನು ಧರಿಸಿ ಸಾಂಕೇತಿಕವಾಗಿ ಈ ಆಚರಣೆಯನ್ನು ಮಾಡುತ್ತಾರೆ.

ನೇಪಾಳದಲ್ಲಿ ಕುಮಾರಿಗೆ ಡಾ. ಬ್ರೋ ಪೂಜೆ, ಮದುವೆಗೆ ಹುಡುಗಿ ಬೇಡಿಕೊಂಡ್ರಾ ಕೇಳ್ತಿದ್ದಾರೆ ಫ್ಯಾನ್ಸ್‌
 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಭಾರತೀಯರು 2025ರಲ್ಲಿ ಅತಿಹೆಚ್ಚು ಹುಡುಕಾಡಿದ ಪ್ರವಾಸಿ ಸ್ಥಳ ಯಾವುದು? ಟಾಪ್-10ರಲ್ಲಿ ಥೈಲ್ಯಾಂಡ್, ಮಾಲ್ಡೀವ್ಸ್
ಲೈಸೆನ್ಸ್ ಎಕ್ಸ್‌ಫೈರಿ ಆಗಿದ್ರು 8 ಬಾರಿ ಹಾರಾಟ ನಡೆಸಿದ ಏರ್ ಇಂಡಿಯಾದ ವಿಮಾನ: ತನಿಖೆಗೆ ಡಿಜಿಸಿಎ ಆದೇಶ