ರ‍್ಯಾಪಿಡೋ ಬುಕ್ ಮಾಡಿದ್ರೆ ಬಂತು ರಾಯಲ್‌ ಎನ್‌ಫೀಲ್ಡ್, ರೈಡರ್ ಜಾಬ್‌ ಬಗ್ಗೆ ತಿಳಿದು ವ್ಯಕ್ತಿ ಶಾಕ್‌!

By Vinutha Perla  |  First Published Aug 12, 2023, 9:07 AM IST

ಬೆಂಗಳೂರಿನಿಂಥಾ ಮಹಾನಗರಗಳಲ್ಲಿ ಓಡಾಡಲು ಆಟೋ, ಕ್ಯಾಬ್‌, ಬೈಕ್ ಟ್ಯಾಕ್ಸಿ ಸೇವೆಗಳು ಎಲ್ಲರಿಗೂ ಒಂದಲ್ಲಾ ಒಂದು ದಿನ ಅಗತ್ಯ ಬೀಳುತ್ತದೆ. ರ‍್ಯಾಪಿಡೋ ಸೇವೆಯಲ್ಲಿ ಸಾಮಾನ್ಯವಾಗಿ ಆಕ್ಟಿವಾ, ಸಾಮಾನ್ಯ ಬೈಕ್‌ಗಳಿರುತ್ತವೆ. ಆದ್ರೆ ಇಲ್ಲೊಬ್ಬರು ರ‍್ಯಾಪಿಡೋ ಬುಕ್ ಮಾಡಿ, ಬೈಕ್ ಟ್ಯಾಕ್ಸಿ ಬಂದು ನಿಂತಾಗ ಬೆಚ್ಚಿಬಿದ್ದಿದ್ದಾರೆ. 


ಬೆಂಗಳೂರಿನಲ್ಲಿ ಇತ್ತೀಚಿಗೆ ಹೆಚ್ಚು ಫೇಮಸ್ ಆಗಿರೋದು ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಸೇವೆ. ಈಝಿಯಾಗಿ ಬೈಕ್ ಬುಕ್ ಮಾಡಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸುಲಭವಾಗಿ ತಲುಪಬಹುದು ಅನ್ನೋ ಕಾರಣಕ್ಕೆ ಬಹುತೇಕರು ಇದನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಸಾಮಾನ್ಯವಾಗಿ ಈ ಬೈಕ್ ಟ್ಯಾಕ್ಸಿ ಸೇವೆಯಲ್ಲಿ ಆಕ್ಟಿವಾ, ಹೋಂಡಾ ಅನ್ನೋ ಸಾಮಾನ್ಯ ಬೈಕ್‌ಗಳಿರುತ್ತವೆ. ಆದ್ರೆ ಇಲ್ಲೊಬ್ಬರು ರ‍್ಯಾಪಿಡೋ ಬುಕ್ ಮಾಡಿ, ಬೈಕ್ ಟ್ಯಾಕ್ಸಿ ಬಂದು ಪಿಕ್‌ಅಪ್‌ ಡ್ರಾಪ್‌ ಬಳಿಕ ನಿಂತಾಗ ಬೆಚ್ಚಿಬಿದ್ದಿದ್ದಾರೆ. ಯಾಕಂದ್ರೆ ಅಲ್ಲಿ ಬಂದು ನಿಂತಿದ್ದು ಸಾಮಾನ್ಯ ಬೈಕ್‌ ಅಲ್ಲ. ಬದಲಿಗೆ ಕಾಸ್ಟ್ಲೀ ರಾಯಲ್‌ ಎನ್‌ಫೀಲ್ಡ್ ಬೈಕ್‌.

ಬೆಂಗಳೂರಿನ ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬರು ರೈಡ್‌ಗಾಗಿರ‍್ಯಾಪಿಡೋ ಸೇವೆ ಬುಕ್ ಮಾಡಿದಾಗ ಅನಿರೀಕ್ಷಿತವಾಗಿ ರೈಡರ್‌ ಸಾಮಾನ್ಯ ರೈಡ್‌ಗೆ ಬದಲಾಗಿ, ರಾಯಲ್ ಎನ್‌ಫೀಲ್ಡ್ ಹಂಟರ್ ಮೋಟಾರ್‌ಸೈಕಲ್‌ನಲ್ಲಿ ಆಗಮಿಸಿದಾಗ ಅವರು ಆಶ್ಚರ್ಯಚಕಿತರಾದರು. ಅವರ ಅಚ್ಚರಿ ಅಲ್ಲಿಗೇ ಕೊನೆಗೊಳ್ಳಲ್ಲಿಲ್ಲ. ರ‍್ಯಾಪಿಡೋ ಚಾಲಕನೊಂದಿಗೆ ಸಂಭಾಷಣೆ (Conversation) ನಡೆಸಿದಾಗ ಸವಾರ ಓರ್ವ ಸಾಫ್ಟ್‌ವೇರ್ ಇಂಜಿನಿಯರ್ ಎಂಬುದು ತಿಳಿದುಬಂತು. ನಿಶಿತ್ ಪಟೇಲ್ ಎಂಬವರು ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಈ ಮಾಹಿತಿಯನ್ನು (Information) ಹಂಚಿಕೊಂಡು ಟ್ವೀಟ್ ಮಾಡಿದ್ದಾರೆ.

Tap to resize

Latest Videos

ಒಂದು ಗಂಟೆಯ ದಾರಿಗೆ ಮೂರು ಗಂಟೆ ವೈಟಿಂಗ್ ಟೈಂ; ರಾಪಿಡೋ ಆಟೋ ಪೋಸ್ಟ್ ವೈರಲ್‌

ಸಾಫ್ಟ್‌ವೇರ್ ಡೆವಲಪರ್ ಆಗಿರುವ ರ‍್ಯಾಪಿಡೋ ರೈಡರ್
ಈ ಅನುಭವವು ನಿಜವಾಗಿಯೂ ಗಮನಾರ್ಹವಾದದ್ದು ರೈಡ್‌ಗಾಗಿ ಒದಗಿಸಲಾದ ಮೇಲ್ದರ್ಜೆಯ ಮೋಟಾರ್‌ಸೈಕಲ್ ಅಲ್ಲ, ಆದರೆ Rapido ಕ್ಯಾಪ್ಟನ್ ಸ್ವತಃ DevOps ಇಂಜಿನಿಯರ್ ಆಗಿದ್ದು, ಎಂಟರ್‌ಪ್ರೈಸ್ ಕುಬರ್ನೆಟ್ಸ್ ಕ್ಲಸ್ಟರ್‌ಗಳನ್ನು ನಿರ್ವಹಿಸುವ ಜವಾಬ್ದಾರಿಯುತ ಕಂಪನಿಯಲ್ಲಿ ಕೆಲಸ (Job) ಮಾಡುತ್ತಿದ್ದಾನೆ. 

'ಇಂದು ಬೆಂಗಳೂರಿನಲ್ಲಿ ನಂಬಲಾಗದ ಒಂದು ಘಟನೆ. ಕುಬರ್ನೆಟ್ಸ್ ಮೀಟ್‌ಅಪ್‌ಗೆ ಹೋಗಲು ನಾನು ರ‍್ಯಾಪಿಡೋ ಬೈಕ್ ಟ್ಯಾಕ್ಸಿಯನ್ನು ಬುಕ್ ಮಾಡಿದೆ. ಆದರೆ ರಾಯಲ್‌ ಎನ್‌ಫೀಲ್ಡ್‌ ಬೈಕ್‌ನಲ್ಲಿ ಸವಾರ (Rider) ಆಗಮಿಸಿದಾಗ ಆಶ್ಚರ್ಯಗೊಂಡೆ. ಮಾತ್ರವಲ್ಲ ಅವರು ಕಂಪನಿಯೊಂದರಲ್ಲಿ ಎಂಟರ್‌ಪ್ರೈಸ್ ಕುಬರ್ನೆಟ್ಸ್ ಕ್ಲಸ್ಟರ್‌ಗಳನ್ನು ನಿರ್ವಹಿಸುತ್ತಿರುವ ಸಾಫ್ಟ್‌ವೇರ್‌ ಡೆವಲಪರ್ ಆಗಿದ್ದರು. ಭಾರತದ ಟೆಕ್ ರಾಜಧಾನಿಯಲ್ಲಿ ಇನ್ನೊಂದು ದಿನ' ಎಂದು ನಿಶಿತ್ ಪಟೇಲ್ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಪೋಸ್ಟ್ 5 ಸಾವಿರಕ್ಕೂ ಹೆಚ್ಚು ವೀವ್ಸ್ ಮತ್ತು ನಾನಾ ರೀತಿಯ ಕಾಮೆಂಟ್‌ಗಳನ್ನು ಗಳಿಸಿದೆ. 

ರಾಪಿಡೋ ಡ್ರೈವರ್ ಆಗಿ ಕೆಲ್ಸ ಮಾಡ್ತಿದ್ದ ಜಾವಾ ಡೆವಲಪರ್‌: ಕೆಲಸ ಹುಡುಕಲು ನೆರವಾದ ಟ್ವಿಟ್ಟಿಗರು

"ಒಬ್ಬ ಬಳಕೆದಾರರು, 'ಬೈಕ್ ಟ್ಯಾಕ್ಸಿ ಸೇವೆಯಿಂದ ಅವರೆಷ್ಟು ಗಳಿಸುತ್ತಿದ್ದಾರೆ ಎಂದು ನೀವು ಕೇಳಿದ್ದೀರಾ' ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ, ನಿಶಿತ್ ಪಟೇಲ್, 'ಇಲ್ಲ, ಈಗ ನಾನು ಅವರನ್ನು ಕೇಳಬೇಕಿತ್ತು ಎಂದು ನನಗೆ ಆಮೇಲೆ ಗಮನಕ್ಕೆ ಬಂತು' ಎಂದಿದ್ದಾರೆ. ಇನ್ನೊಬ್ಬ ಬಳಕೆದಾರರು, 'ಅಹಮದಾಬಾದ್‌ನಲ್ಲಿ, ಕಳೆದ 5 ವರ್ಷಗಳಿಂದ, ಅನೇಕ OLA, Uber ಮತ್ತು Rapido ರೈಡರ್‌ಗಳು RE ಮತ್ತು ಹಾರ್ಲೆ ಡೇವಿಡ್‌ಸನ್‌ ಬೈಕ್‌ನಲ್ಲಿ ಚಾಲನೆ ಮಾಡುತ್ತಿದ್ದಾರೆ" ಎಂದು ಕಾಮೆಂಟ್ ಮಾಡಿದ್ದಾರೆ.

You won't believe the crazy moment I had today! On my way to a Kubernetes meetup, my Rapido captain pulled up on a Royal Enfield Hunter. Turns out he's a DevOps engineer at a company managing enterprise Kubernetes clusters. Just another day in India's tech capital

— Nishit Patel (@nishit130)
click me!