ಪರಸ್ಪರ ಆಸಕ್ತಿ ಬೆಳೆದು, ಪ್ರೀತಿ ಚಿಗುರಿ, ಮದುವೆಯಾಗಿ ಸಂಸಾರ ಬೆಳೆಯಲಿ ಅಂತಾ ಸರ್ಕಾರ ನಾನಾ ಕಸರತ್ತು ಮಾಡ್ತಿದೆ. ದೇಶದ ಜನಸಂಖ್ಯೆ ಹೆಚ್ಚಿಸೋಕೆ ಹಣ ಖರ್ಚು ಮಾಡ್ತಿದೆ. ಆದ್ರೆ ಯುವಕರು ಮಾತ್ರ ಮದುವೆಗೆ ಒಲ್ಲೆ ಎನ್ನುತ್ತಿದ್ದಾರೆ.
ಎಷ್ಟೇ ನಿಯಂತ್ರಣ ಮಾಡಿದ್ರೂ ಜನಸಂಖ್ಯೆ ಏರ್ತಾನೆ ಇದೆ, ಅದರ ನಿಯಂತ್ರಣ ಹೇಗೆ ಅನ್ನೋದು ಭಾರತದ ಚಿಂತೆ. ಆದ್ರೆ ಕೆಲ ದೇಶಗಳಲ್ಲಿ ಜನಸಂಖ್ಯೆ ಅತ್ಯಂತ ಕಡಿಮೆ ಇದೆ. ಜನಸಂಖ್ಯೆ ಹೆಚ್ಚಳಕ್ಕೆ ಅವರು ಸಾಕಷ್ಟು ಪ್ರಯತ್ನ ನಡೆಸುತ್ತಿದ್ದಾರೆ. ಜನಸಂಖ್ಯೆ ಕಡಿಮೆ ಇರುವ ದೇಶಗಳಲ್ಲಿ ದಕ್ಷಿಣ ಕೋರಿಯಾ ಕೂಡ ಸೇರಿದೆ. ಸತತ ಮೂರು ವರ್ಷಗಳಿಂದ ಕೋರಿಯಾ ಜನಸಂಖ್ಯೆ ಕಡಿಮೆ ಆಗ್ತಾನೆ ಇದೆ.
ದಕ್ಷಿಣ ಕೋರಿಯಾ (South Korea) ಸರ್ಕಾರ, ಜನಸಂಖ್ಯೆ ಹೆಚ್ಚಿಸಲು ಸತತ ಪ್ರಯತ್ನ ನಡೆಸುತ್ತಿದೆ. ಅದಕ್ಕಾಗಿ ಸರ್ಕಾರ ಅನೇಕ ಯೋಜನೆಗಳನ್ನು ಹಮ್ಮಿಕೊಂಡಿದೆ. ವರ್ಷವಿಡೀ ಬ್ಲೈಂಡ್-ಡೇಟಿಂಗ್ (Dating) ನಂತಹ ಕಾರ್ಯಕ್ರಮಗಳನ್ನು ಆಯೋಜಿಸಲು ಸರ್ಕಾರ ನಿರ್ಧರಿಸಿದೆ. ಈಗಾಗಲೇ ಅನೇಕ ಕಡೆ ಬ್ಲೈಂಡ್ ಡೇಟಿಂಗ್ ಆಯೋಜನೆ ಮಾಡಿದೆ. ನಿಮಗೆ ಪರಿಚಯ ಇರದ ವ್ಯಕ್ತಿಗಳನ್ನು ಮೊದಲ ಬಾರಿ ಭೇಟಿಯಾಗಿ ಡೇಟಿಂಗ್ ಮಾಡೋದೇ ಬ್ಲೈಂಡ್ ಡೇಟಿಂಗ್. ಮದುವೆ (Marriage) ಗೆ ಆಸಕ್ತಿ ಇಲ್ಲದ ಜನರಿಗೆ ಮದುವೆ ಬಗ್ಗೆ ಆಸಕ್ತಿ ಹುಟ್ಟಿಸಲು ಈ ಬ್ಲೈಂಡ್ ಡೇಟಿಂಗ್ ನೆರವಾಗುತ್ತೆ ಎಂದು ಕೋರಿಯಾ ಸರ್ಕಾರ ನಂಬಿದೆ. ಇದಕ್ಕಾಗಿ ಕೋರಿಯಾ ಸರ್ಕಾರ ಸಾಕಷ್ಟು ಹಣವನ್ನು ಖರ್ಚು ಮಾಡ್ತಿದೆ. ಆದ್ರೂ ದೇಶದಲ್ಲಿ ಫಲವತ್ತತೆಯ ಪ್ರಮಾಣ ಹೆಚ್ಚಿಸುವುದು ಒಂದು ಸವಾಲಾಗಿದೆ.
ದಕ್ಷಿಣ ಭಾರತದ ಅದ್ಭುತ ತಾಣಗಳಿವು… ಮಿಸ್ ಮಾಡದೇ ಒಂದ್ಸಲನಾದ್ರೂ ಹೋಗಿ ಬನ್ನಿ
ದಕ್ಷಿಣ ಕೋರಿಯಾದಲ್ಲಿ ಜನಸಂಖ್ಯೆ ಕಡಿಮೆಯಾಗಲು ಇದು ಕಾರಣ : ಭಾರತದಲ್ಲಿ ಮದುವೆಯಾಗಲು ಆಸಕ್ತಿ ಹೊಂದಿರುವ ಹುಡುಗರ ಸಂಖ್ಯೆ ಸಾಕಷ್ಟಿದ್ರೂ ಹುಡುಗಿ ಸಿಗ್ತಿಲ್ಲ, ಮದುವೆ ಆಗ್ತಿಲ್ಲ. ಆದ್ರೆ ದಕ್ಷಿಣ ಕೋರಿಯಾದಲ್ಲಿ ಇದು ಭಿನ್ನವಾಗಿದೆ. ಇಲ್ಲಿನ ಯುವಕರಲ್ಲಿ ಮದುವೆ ಆಗುವ ಆಸೆ ಕಡಿಮೆಯಾಗುತ್ತಿದೆ. ದಕ್ಷಿಣ ಕೋರಿಯಾ ಯುವಕರು ಮದುವೆ ಅಂದ್ರೆ ಮಾರು ದೂರ ಓಡುತ್ತಿದ್ದಾರೆ. ಇಲ್ಲಿನ ಜನಸಂಖ್ಯೆ ಕಡಿಮೆಯಾಗಲು ಇದೇ ಮುಖ್ಯ ಕಾರಣವಾಗಿದೆ.
ಸರ್ಕಾರ ಬ್ಲೈಂಡ್ ಡೇಟಿಂಗ್ ಬಗ್ಗೆ ಸ್ಥಳೀಯರ ಅಭಿಪ್ರಾಯ ಏನು? : ಮೊದಲೇ ಹೇಳಿದಂತೆ ದಕ್ಷಿಣ ಕೋರಿಯಾ ಸರ್ಕಾರ ಈಗಾಗಲೇ ಅನೇಕ ಬ್ಲೈಂಡ್ ಡೇಟಿಂಗ್ ಕಾರ್ಯಕ್ರಮ ಆಯೋಜನೆ ಮಾಡಿದೆ. ಮ್ಯಾಚ್‌ಮೇಕಿಂಗ್‌ನಲ್ಲಿ ಆಸಕ್ತಿಯನ್ನು ಕಾಪಾಡಿಕೊಳ್ಳಲು ಈವೆಂಟ್‌ಗಳನ್ನು ಆಯೋಜಿಸುತ್ತಿದೆ. ಸುಮಾರು ಒಂದು ಮಿಲಿಯನ್ ಜನಸಂಖ್ಯೆಯನ್ನು ಹೊಂದಿರುವ ದಕ್ಷಿಣ ಕೊರಿಯಾದ ಸಿಯೋಂಗ್‌ನಮ್ ನಗರದಲ್ಲಿ, ಸರ್ಕಾರವು ಒಟ್ಟು 15.9 ಮಿಲಿಯನ್ ಡಾಲರ್ ಅನ್ನು ಬ್ಲೈಂಡ್-ಡೇಟಿಂಗ್ ಕಾರ್ಯಕ್ರಮಕ್ಕಾಗಿ ಮೀಸಲಿಟ್ಟಿದೆ. ಇದು ಮಾತ್ರವಲ್ಲದೆ, ದಕ್ಷಿಣ ಕೊರಿಯಾದ ಸರ್ಕಾರವು ವರ್ಷವಿಡೀ ಅಲ್ಲಲ್ಲಿ ಬ್ಲೈಂಡ್ ಡೇಟಿಂಗ್ ಕಾರ್ಯಕ್ರಮಗಳನ್ನು ಆಯೋಜಿಸಲು ಯೋಚಿಸುತ್ತಿದೆ.
ಡಿವೋರ್ಸ್ ಆಗಬಾರದು ಅಂದ್ರೆ ಯಾವ ವಯಸ್ಸಲ್ಲಿ ಮದ್ವೆಯಾದ್ರೆ ಬೆಸ್ಟ್?
ಆದ್ರೆ ಸರ್ಕಾರದ ಈ ಕಾರ್ಯಕ್ರಮ ಯುವಕರ ಮನಸ್ಸನ್ನು ನಾಟಿಲ್ಲ. ಮದುವೆ, ಮಕ್ಕಳಿಂದ ಇಲ್ಲಿನ ಯುವಕರು ನುಣುಚಿಕೊಳ್ಳಲು ಅನೇಕ ಕಾರಣವಿದೆ. ಮಕ್ಕಳ ಆರೈಕೆಗೆ ಹೆಚ್ಚು ಖರ್ಚಾಗುತ್ತದೆ. ಇದು ದೊಡ್ಡ ಸಮಸ್ಯೆ ಎನ್ನುತ್ತಾರೆ ಯುವಕರು. ಇದಲ್ಲದೆ, ದೇಶದಲ್ಲಿ ಸರ್ಕಾರಿ ಉದ್ಯೋಗದ ಸಾಧ್ಯತೆ ತುಂಬಾ ಸೀಮಿತವಾಗಿದೆ. ಕೆಲಸ ಸಿಕ್ಕರೂ ಹೆಚ್ಚಿನ ಹಣ ಸಂಪಾದನೆ ಮಾಡಲು ಹೆಚ್ಚು ಗಂಟೆಗಳ ಕಾಲ ಕೆಲಸ ಮಾಡಬೇಕಾಗುತ್ತದೆ. ಈ ಕಾರಣದಿಂದಾಗಿ ಕುಟುಂಬ ಹೊಂದಲು ಜನರು ಹಿಂದೇಟು ಹಾಕ್ತಿದ್ದಾರೆ.
ದಕ್ಷಿಣ ಕೊರಿಯಾದ ಕೆಲವು ಜನರು, ಮದುವೆ, ಮಕ್ಕಳು ವೈಯಕ್ತಿಕ ಹಿತಾಸಕ್ತಿಯಾಗಿದ್ದು, ಸರ್ಕಾರ ಇದರಲ್ಲಿ ಹಸ್ತಕ್ಷೇಪ ಮಾಡಬಾರದು ಎಂದು ಭಾವಿಸುತ್ತಾರೆ. ಕೆಲಸ ಮತ್ತು ಜೀವನ ಸಮತೋಲನ, ಲಿಂಗ ಸಮಾನತೆಯಂತಹ ಸಮಸ್ಯೆಗಳನ್ನು ಸರ್ಕಾರ ಮೊದಲು ಪರಿಹರಿಸಬೇಕು ಎಂಬುದು ಅವರ ಅಭಿಪ್ರಾಯವಾಗಿದೆ.
ದಕ್ಷಿಣ ಕೋರಿಯಾದಲ್ಲಿ ನಡೆದ ಮದುವೆ ಎಷ್ಟು? : ದಕ್ಷಿಣ ಕೊರಿಯಾದಲ್ಲಿ ಮದುವೆ ದರದಲ್ಲಿ ಭಾರಿ ಇಳಿಕೆಯಾಗಿದೆ. 2021 ರಲ್ಲಿ ಅಮೆರಿಕಾದಲ್ಲಿ 1,000 ಜನರಿಗೆ ಆರು ಮದುವೆಗಳು ನಡೆದಿದ್ದರೆ, ದಕ್ಷಿಣ ಕೊರಿಯಾದಲ್ಲಿ 1,000 ಜನರಿಗೆ 3 ಮದುವೆಗಳು ನಡೆದಿವೆ.