ಪ್ರಯಾಣಿಕರಿಗೆ ವಿಶೇಷ ಪ್ರವಾಸ ಪ್ಯಾಕೇಜ್‌ ಸೌಲಭ್ಯ

By Kannadaprabha News  |  First Published Aug 10, 2023, 10:30 PM IST

ಈಗಾಗಲೇ ಚಾಲನೆಯಲ್ಲಿರುವ ಪ್ರವಾಸಿ ಪ್ಯಾಕೇಜ್‌ 1ಮತ್ತು 2 ಗಳನ್ನು ಹೊರತುಪಡಿಸಿ ನೂತನವಾಗಿ ಏಳು (7) ಏಕದಿನ ಪ್ರವಾಸ ಪ್ಯಾಕೇಜ್‌ಗಳನ್ನು ಸೇರಿದಂತೆ ಪ್ರಾಯೋಗಿಕ ಪ್ರಾರಂಭಿಸಲಾಗಿದೆ. ಇದರಂತೆ ಒಟ್ಟು 9 ಪ್ಯಾಕೇಜ್‌ಗಳನ್ನು ಪ್ರತಿ 2 ಮತ್ತು 4 ನೇ ಶನಿವಾರ ಹಾಗೂ ಪ್ರತಿ ಭಾನುವಾರಗಳಂದು ಅಗಸ್ಟ್‌ 12 ರಿಂದ ಜಾರಿಗೆ ಬರುವಂತೆ ಬೆಳಗಾವಿ ಕೇಂದ್ರ ಬಸ್‌ ನಿಲ್ದಾಣ ಬೈಲಹೊಂಗಲ ಬಸ್‌ ನಿಲ್ದಾಣಗಳಿಂದ ಕಾರ್ಯಾಚರಿಸಲಾಗುವುದು.


ಬೆಳಗಾವಿ(ಆ.10):  ಬೆಳಗಾವಿ ಜಿಲ್ಲೆ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳ ಸಾರ್ವಜನಿಕರಿಗೆ ಅನುಕೂಲವಾಗುವಂತೆ ವಿವಿಧ ಐತಿಹಾಸಿಕ, ಧಾರ್ಮಿಕ ಪ್ರವಾಸಿ ತಾಣಗಳಿಗೆ ಮೊದಲ ಬಾರಿಗೆ ಏಕ ಕಾಲಕ್ಕೆ ಬೆಳಗಾವಿ ಜಿಲ್ಲೆಯಲ್ಲಿ ಏಕದಿನ ಪ್ರವಾಸ ಪ್ಯಾಕೇಜ್‌ಗಳನ್ನು ಸಾರಿಗೆ ಸಂಸ್ಥೆ ಬೆಳಗಾವಿ ವಿಭಾಗದಿಂದ ಪ್ರಾರಂಭಿಸಲಾಗಿದೆ.

ಈಗಾಗಲೇ ಚಾಲನೆಯಲ್ಲಿರುವ ಪ್ರವಾಸಿ ಪ್ಯಾಕೇಜ್‌ 1ಮತ್ತು 2 ಗಳನ್ನು ಹೊರತುಪಡಿಸಿ ನೂತನವಾಗಿ ಏಳು (7) ಏಕದಿನ ಪ್ರವಾಸ ಪ್ಯಾಕೇಜ್‌ಗಳನ್ನು ಸೇರಿದಂತೆ ಪ್ರಾಯೋಗಿಕ ಪ್ರಾರಂಭಿಸಲಾಗಿದೆ. ಇದರಂತೆ ಒಟ್ಟು 9 ಪ್ಯಾಕೇಜ್‌ಗಳನ್ನು ಪ್ರತಿ 2 ಮತ್ತು 4 ನೇ ಶನಿವಾರ ಹಾಗೂ ಪ್ರತಿ ಭಾನುವಾರಗಳಂದು ಅಗಸ್ಟ್‌ 12 ರಿಂದ ಜಾರಿಗೆ ಬರುವಂತೆ ಬೆಳಗಾವಿ ಕೇಂದ್ರ ಬಸ್‌ ನಿಲ್ದಾಣ ಬೈಲಹೊಂಗಲ ಬಸ್‌ ನಿಲ್ದಾಣಗಳಿಂದ ಕಾರ್ಯಾಚರಿಸಲಾಗುವುದು.

Tap to resize

Latest Videos

ತಿರುಪತಿ: ಮುಡಿ ಕೊಡುವುದಕ್ಕೂ, ಸಪ್ತಗಿರಿಯ ನೀಲಾದ್ರಿ ಬೆಟ್ಟಕ್ಕೂ ಇದೆ ಲಿಂಕ್!

ಇ-ಟಿಕೆಟನ್ನು ಆನ್‌ಲೈನ್‌ ಡಿಡಿ ವೆಬ್‌ಸೈಟ್‌ ಹಾಗೂ ಮೊಬೈಲ್‌ ಮುಖಾಂತರ ಕಾಯ್ದಿರಿಸಬಹುದಾಗಿದೆ. ಅಲ್ಲದೇ ಸಂಸ್ಥೆಯ ಬೆಳಗಾವಿ ಕೇಂದ್ರ ಬಸ್‌ ನಿಲ್ದಾಣದ ಮುಂಗಡ ಟಿಕೇಟ್‌ ಕೌಂಟರ್‌ ಹಾಗೂ ಸಂಸ್ಥೆಯಿಂದ ನಿಗದಿಪಡಿಸಿರುವ ಬೆಳಗಾವಿಯ ವಿವಿಧ ಸ್ಥಳದಲ್ಲಿರುವ ಸಂಸ್ಥೆಯ ಅವತಾರ ಬುಕ್ಕಿಂಗ್‌ ಏಜಂಟರಲ್ಲಿಯೂ ಸಹ ಮುಂಗಡ ಟಿಕೇಟ್‌ ಕಾಯ್ದಿರಿಸಿಕೊಳ್ಳಬಹುದಾಗಿದೆ.

ವಿಕ್ಷಣಾ ಸ್ಥಳಗಳ ವಿವರ:

ಬೆಳಗಾವಿ-ಹಿಡಕಲ್‌ ಡ್ಯಾಂ-ಗೊಡಚಿನಮಲ್ಕಿ ಜಲಪಾತ-ಗೋಕಾಕ ಜಲಪಾತ, ಬೆಳಗಾವಿ-ನಾಗರತಾಸ ಜಲಪಾತ-ಅಂಬೋಲಿ ಜಲಪಾತ, ಬೆಳಗಾವಿ-ಶ್ರೀ ಮಹಾಲಕ್ಷ್ಮೀ ದೇವಸ್ಥಾನ ಕೊಲ್ಹಾಪೂರ-ಶ್ರೀ ಕ್ಷೇತ್ರ ಕನ್ಹೇರಿ ಮಠ (ಮಹಾರಾಷ್ಟ್ರ), ಬೆಳಗಾವಿ-ಕಕ್ಕೇರಿ ( ಶ್ರೀ ಬಿಷ್ಟಾದೇವಿ ದೇವಸ್ಥಾನ)-ದಾಂಡೇಲಿ ಮೊಸಳೆ ಪಾರ್ಕ-ಮೌಳಂಗಿ ಫಾಲ್ಸ್‌- ಕೂಳಗಿ ನೇಚರ್‌ ಪಾರ್ಕ್, ಬೆಳಗಾವಿ-ರಾಜಹಂಸಗಡ-ಮಿಲಿಟರಿ ಶ್ರೀ ಮಹಾದೇವ ದೇವಸ್ಥಾನ-ಕಿತ್ತೂರ ರಾಣಿ ಚನ್ನಮ್ಮ ಮೃಗಾಲಯ-ಶ್ರೀ ರೇವಣ ಸಿದ್ದೇಶ್ವರ ಮಂದಿರ ಹುಂಚೆವಾರಿಮಠ, ಬೆಳಗಾವಿ-ಗಂಗಾಬಿಕಾ ಐಕ್ಯಸ್ಥಳ, ಶ್ರೀ ಅಶ್ವಥ ಲಕ್ಷ್ಮೇನರಸಿಂಹ ಸ್ವಾಮಿ ದೇವಸ್ಥಾನ (ಎಂ.ಕೆ ಹುಬ್ಬಳ್ಳಿ)- ಕಿತ್ತೂರು ಕೋಟೆ -ಶ್ರೀ ಸೋಮೇಶ್ವರ ದೇವಸ್ಥಾನ ಸೊಗಲ- ನವಿಲುತೀರ್ಥ ಡ್ಯಾಂ (ಮುನವಳ್ಳಿ), ಬೆಳಗಾವಿ- ರಾಜಹಂಸಗಡ- ಶ್ರೀ ಸಿದ್ಧೇಶ್ವರ ಸ್ವಾಮಿ ವಿಶ್ರಾಂತ ಆಶ್ರಮ ಬೆಳಗುಂದಿ-ರಕ್ಕಸಕೊಪ್ಪ ಡ್ಯಾಮ್‌-ಧಾಮಣೆ ಫಾಲ್ಸ್‌, ನೇಚರ ಕ್ಯಾಂಪ್‌-ಶ್ರೀ ವೈಜನಾಥ ದೇವಸ್ಥಾನ ಮಹಿಪಾಲಗಡ, ಬೈಲಹೊಂಗಲ-ಶ್ರೀ ವೀರಭದ್ರೇಶ್ವರ ದೇವಸ್ಥಾನ ಗೊಡಚಿ-ಮೇಣ ಬಸದಿ ಬದಾಮಿ ಗುಹೆಗಳು-ಶ್ರೀ ಬನಶಂಕರಿ ದೇವಸ್ಥಾನ-ಶ್ರೀ ಶಿವಯೋಗಿ ಮಂದಿರ, ಬೆಳಗಾವಿ-ರಾಜಹಂಸಗಡ-ಅಸೋಗಾ ಹೊಳೆ ದಂಡೆ-ನಂದಗಡ ಸಂಗೊಳ್ಳಿ ರಾಯಣ್ಣ ಸಮಾಧಿ-ಹಲಸಿ ಶ್ರೀ ಕದಂಬೇಶ್ವರ ದೇವಸ್ಥಾನ-ಕಕ್ಕೇರಿ ಶ್ರೀ ಬಿಷ್ಠಾದೇವಿ ದೇವಸ್ಥಾನ.

ಹೆಚ್ಚಿನ ಮಾಹಿತಿಗಾಗಿ ನಿಲ್ದಾಣ ಮೇಲ್ವಿಚಾರಕರು ಕೇಂದ್ರ ಬಸ್‌ ನಿಲ್ದಾಣ ಬೆಳಗಾವಿ ಮೊ.ಸಂ-7760991612, 7760991613 ಹಾಗೂ ಘಟಕ ವ್ಯವಸ್ಥಾಪಕರು ಬೆಳಗಾವಿ-1 ಮೊ.ಸಂ-7760991625, ಘಟಕ ವ್ಯವಸ್ಥಾಪಕರು ಬೆಳಗಾವಿ-2 ಮೊ.ಸಂ-7760991626, ಘಟಕ ವ್ಯವಸ್ಥಾಪಕರು ಬೆಳಗಾವಿ-3 ಮೊ.ಸಂ-7760991627, ಘಟಕ ವ್ಯವಸ್ಥಾಪಕರು ಬೆಳಗಾವಿ-4 ಮೊ.ಸಂ-7618765904, ಘಟಕ ವ್ಯವಸ್ಥಾಪಕರು ಬೈಲಹೊಂಗಲ ಘಟಕ ಮೊ.ಸಂ-7760991628 ಘಟಕ ವ್ಯವಸ್ಥಾಪಕರು ಖಾನಾಪೂರ ಮೊ.ಸಂ-7760991631 ಇವರನ್ನು ಸಂಪರ್ಕಿಸಬಹುದು ಎಂದು ವಾಕರಸಾ ಸಂಸ್ಥೆಯ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

click me!